Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕುವೈಟ್ ಕನ್ನಡ ಕ್ಷಮಾಭಿವೃದ್ಧಿ ಸಂಘದಿಂದ ಚಳ್ಳಕೆರೆ ತಾಲೂಕಿನ 9 ಗ್ರಾಮಗಳ ದತ್ತು ಸ್ವೀಕಾರ

Facebook
Twitter
Telegram
WhatsApp

ಬೆಂಗಳೂರು : ರಾಜ್ಯದಲ್ಲಿ ಶೈಕ್ಷಣಿಕ ನೆಲೆಗಟ್ಟನ್ನು ಭದ್ರಗೊಳಿಸುವಲ್ಲಿ ಸಂಘ ಸಂಸ್ಥೆಗಳು ನೆರವಾಗಬೇಕೆಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಕುವೈಟ್ ಕನ್ನಡ ಕ್ಷೇಮಾಭಿವೃದ್ಧಿ ಸಂಘದ ಐದನೇ ವರ್ಷಾಚರಣೆಯ ಅಂಗವಾಗಿ ಆಯೋಜಿಸಿದ್ದ
ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕುವೈಟ್ ಕನ್ನಡ ಕ್ಷಮಾಭಿವೃದ್ಧಿ ಸಂಘವು ಹಿಂದುಳಿದ ಜಿಲ್ಲೆಯಾದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ 9 ಗ್ರಾಮಗಳನ್ನು ದತ್ತು ತೆಗೆದುಕೊಂಡು ಈ ಗ್ರಾಮಗಳಿಗೆ ಸ್ಮಾರ್ಟ್‌ ಕ್ಲಾಸ್, ಶೌಚಾಲಯ ಮತ್ತಿತರ  ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರುವುದು ತುಂಬಾ ಅವಿಸ್ಮರಣೀಯ ರಾಜ್ಯದ ಪ್ರತಿಯೊಂದು ಹಿಂದುಳಿದ ತಾಲೂಕುಗಳಲ್ಲಿ ಅನಿವಾಸಿ ಭಾರತೀಯರು ಇಂತಹ ಸತ್ಕಾರ್ಯಗಳನ್ನು ಮಾಡಬೇಕು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ ಮಾತನಾಡಿ ಗಡಿ ಭಾಗದ 19 ತಾಲ್ಲೂಕುಗಳಲ್ಲಿ 38 ಶಾಲೆಗಳನ್ನು ಕನ್ನಡ ಸಂಶೋಧನಾ ಕೇಂದ್ರಗಳಿಗೆ ಆಯ್ಕೆ ಮಾಡಲಾಗುವುದು ಈ ಶಾಲೆಗಳಲ್ಲಿ ಸಮಗ್ರವಾಗಿ ಕನ್ನಡ ಕಲಿಕೆಯ ಜಾಗೃತಿ ಸಂಶೋಧನೆ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು ಎಂದು ಹೇಳಿದರು.

ಚಳ್ಳಕೆರೆ ತಹಶೀಲ್ದಾರ್ ರಘುಮೂರ್ತಿ ಮಾತನಾಡಿ, ಪಂಪ ಮಹಾಕವಿಯ ಆದರ್ಶದ ಮಾತುಗಳು ಜಾಗದ ಭೋಗದಕ್ಕರೆಯ ಗೇಯದ ಗೊತ್ತಿಲನಿಂಪು ಪುಗಲ್ಗರ ಮಾದ ಮಾನಿಸರೆ  ಮಾನಿಸ ರಂತಗಿಯೂ  ತೀರ್ದೊಪ್ದೆ ತೀರದೊಡಂ ಮರಿದುಂಬಿಯಾಗಿ ಮೇಣಕೋಗಿಲೆಯಾಗಿ ಪುಟ್ಟುವುದು  ಆರ್ ಅಂಕುಶ ಮಿತ್ತೋಡಂ ನೆನೆಯುವುದೆನ್ನ ಮನಂ ಬನವಾಸಿ ದೇಶಮ್   ಎಂದು ಹೇಳಿರುವಂತಹ ಮಾತಿದೆ.

ಇದಕ್ಕನುಗುಣವಾಗಿ ಇಂತಹ ಕೈಂಕರ್ಯ ವನ್ನು ಈ ಸಂಘದವರು ಮಾಡಿದ್ದಾರೆ. ಬಸವಾದಿ ಶರಣರು ಹೇಳಿದ ಹಾಗೆ ತಮ್ಮ ಶ್ರಮದಿಂದ ಬಂದ ಸ್ವಲ್ಪ ಹಣವನ್ನು ಸಮಾಜದ ಉದ್ಧಾರಕ್ಕೆ ಬಳಸಿ ಸಾರ್ಥಕತೆಯನ್ನು ಮೆರೆದಿದ್ದಾರೆ. ಚಳ್ಳಕೆರೆ ತಾಲೂಕಿನ ಜನತೆಯ ಪರವಾಗಿ ಈ ಸಂಘದವರನ್ನು ಆತ್ಮೀಯವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.

ಚಳ್ಳಕೆರೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಮಾತನಾಡಿ, ಈ ಒಂಭತ್ತು ಶಾಲೆಗಳ ಮಕ್ಕಳಿಗೆ ಉನ್ನತ ಶಿಕ್ಷಣದ ಕಲಿಕೆಯ ಸ್ಪರ್ಶವನ್ನು ಈ ಸಂಘದವರು ನೀಡಿದ್ದು ಮುಂದೆಯೂ ಕೂಡ ಅಗತ್ಯವಿರುವ ಮೂಲ ಸೌಲಭ್ಯ ಗಳನ್ನು ಆಯ್ದ ಶಾಲೆಗೆ ಒದಗಿಸಬೇಕೆಂದು ತಮ್ಮ ಸಲಹೆ ನೀಡಿದರು.

ಕುವೈತ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾ ವಾಸಕಿ ಮಾತನಾಡಿ ಈ ಸಂಘದ ರಚನೆಯ ಪರಿಕಲ್ಪನೆ ಬಂದಿದ್ದು ಹಿಂದುಳಿದ ತಾಲೂಕಾದ ಚಳ್ಳಕೆರೆಯಿಂದ. ನಮ್ಮ ಕಾರ್ಯಗಳನ್ನು ಈ ತಾಲೂಕಿನಿಂದಲೇ ಪ್ರಾರಂಭ ಮಾಡಿದ್ದೇವೆ. ಮುಂದೆಯೂ ಕೂಡ ಇನ್ನೂ ಹೆಚ್ಚು ಹೆಚ್ಚು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಬಡವರು ಮತ್ತು ದೀನ ದಲಿತರ ಅಭ್ಯುದಯಕ್ಕಾಗಿ ಶ್ರಮಿಸುತ್ತೇವೆಂದು ಹೇಳಿದರು.

ಚಳ್ಳಕೆರೆ ತಾಲೂಕಿನ 9 ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರುಗಳು ಕುವೈತ್ ಕನ್ನಡ ಕ್ಷೇಮಾಭಿವೃದ್ಧಿ ಸಂಘದ ವರನ್ನು ಅನಂತ ಕೋಟಿ ಧನ್ಯವಾದಗಳು ಹೇಳಿದರು. ಈ ಸಮಾರಂಭದಲ್ಲಿ ಮಾಜಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುದ್ದುಕೃಷ್ಣ, ಶೈಕ್ಷಣಿಕ ಜಿಲ್ಲಾ ಉಪ ನಿರ್ದೇಶಕ , ಕುವೈತ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಾಸಕಿ ಮತ್ತು ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು ಮೇ 20: ಬಿಜೆಪಿಯ ನಿರಂತರ ಅಪಪ್ರಚಾರದ ನಡುವೆಯೂ ಗ್ಯಾರಂಟಿಗಳು ಜನರ ಮನೆ ಮನೆ ತಲುಪಿವೆ. ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿ ಅಂಶಗಳ

ಬೆಂಗಳೂರಿನಲ್ಲಿ ನಟ-ನಟಿಯರ ರೇವ್ ಪಾರ್ಟಿಯಲ್ಲಿ ಸಿಕ್ಕಿದ್ದೇನು..?

  ಬೆಂಗಳೂರು: ಇಂದು ಬೆಳಗಿನ ಜಾವ 3 ಗಂಟೆ ವೇಳೆಗೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ತೆಲುಗು

ಸವಾಲುಗಳ ನಡುವೆಯೇ ಜಯಭೇರಿ ಬಾರಿಸಿದ ಸಿದ್ದರಾಮಯ್ಯ ಸರ್ಕಾರ : ಇಂದಿಗೆ ಒಂದು ವರ್ಷ

  2023 ಮೇ 20ರಂದು ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಿತ್ತು, ಸಿದ್ದರಾಮಯ್ಯ ಅವರು ಸಿಎಂ ಆಗಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದರು. ಇಂದಿಗೆ ಆ ಸಂಭ್ರಮದ ದಿನಕ್ಕೆ ವರ್ಷದ ಸಂಭ್ರಮ. ಸಿದ್ದರಾಮಯ್ಯ ಸರ್ಕಾರ

error: Content is protected !!