ಬೆಂಗಳೂರು: ಅಮರಯಾತ್ರೆಯಲ್ಲಿ ಭಾರೀ ಅವಘಡ ಸಂಭವಿಸಿದ್ದು, ಸಾಕಷ್ಟು ಜನ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹಲವರು ಸಾವನ್ನಪ್ಪಿದ್ದಾರೆ. ಕರ್ನಾಟಕದಿಂದಲೂ ಅಮರಯಾತ್ರೆಗೆ ಹೋಗಿದ್ದು, ಅವರ ಸಹಾಯಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ.
ಅಮರನಾಥ ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ ಆರಂಭಿಸಲಾಗಿದೆ. ನಿನ್ನೆ ಸಂಜೆ 5:30 ರ ಸಮಯಕ್ಕೆ ಶ್ರೀ ಅಮರನಾಥ ಗುಹೆಯ ಬಳಿ ಮೋಡದ ಸ್ಫೋಟದಿಂದಾಗಿ ಯಾತ್ರಿಕರ ವಾಸಸ್ಥಳಗಳಿಗೆ ಹಾನಿಯಾಗಿದೆ. NDRF, ITBP, ಭಾರತೀಯ ಸೇನೆ, CRPF, BSF, SDRF ಮತ್ತು ಜಮ್ಮು ಮತ್ತು ಕಾಶ್ಮೀರ್ ಪೋಲಿಸ್ ಜಂಟಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.
ಸಂಕಷ್ಟದಲ್ಲಿ ಸಿಲುಕಿದವರಿಗೆ ಜಮ್ಮು ಕಾಶ್ಮೀರ ಸರ್ಕಾರವು ಸಹಾಯಹಸ್ತ ಚಾಚಿದೆ. ಶ್ರೀ ಅಮರನಾಥ ಗುಹೆಯ ಬಳಿ ಕರ್ನಾಟಕದ ಯಾವುದೇ ವ್ಯಕ್ತಿಯು ಸಿಕ್ಕಿಬಿದ್ದಲ್ಲಿ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಸಂಪರ್ಕ ಮಾಡಿ. 080-1070, 22340676. ಜೊತೆಗೆ ಇಮೇಲ್ ಕೂಡ ಮಾಡಬಹುದಾಗಿದೆ. ಇಮೇಲ್ ಐಡಿ ಇಂತಿದೆ [email protected]