ಅಮರನಾಥಯಾತ್ರೆ ಪವಿತ್ರ ಯಾತ್ರೆ ಶುರುವಾಗಿದೆ. ದೇಶದ ನಾನಾ ಮೂಲೆಯಿಂದ ಭಕ್ತರು ಅಮರನಾಥಯಾತ್ರೆ ಹಮ್ಮಿಕೊಂಡಿದ್ದಾರೆ. ಆದರೆ ಗುಹೆ ಪ್ರದೇಶದಲ್ಲಿ ‘ನಲ್ಲಾ’ದಲ್ಲಿ ಶುಕ್ರವಾರ (ಜುಲೈ 8) ಭಾರೀ ಪ್ರಮಾಣದ ನೀರು ಬಂದಿದ್ದು, ಅನಾಹುತ ಸಂಭವಿಸಿದೆ. ಈ ಘಟನೆಯಲ್ಲಿ ಸುಮಾರು 15 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಅಧಿಕಾರಿಗಳ ಪ್ರಕಾರ, ಸಂಜೆ 5.30 ರ ಸುಮಾರಿಗೆ ಪವಿತ್ರ ಗುಹೆಯಲ್ಲಿ (ಅಮರನಾಥ) ಮೋಡದ ಸ್ಫೋಟ ಸಂಭವಿಸಿದೆ. ತಕ್ಷಣ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಹದಿಮೂರು ಜನರು ಸಾವನ್ನಪ್ಪಿದರು ಮತ್ತು 48 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ತುರ್ತು ಪರಿಸ್ಥಿತಿಯಿಂದಾಗಿ ಆರೋಗ್ಯ ನಿರ್ದೇಶನಾಲಯ, ಕಾಶ್ಮೀರವು ಸಿಬ್ಬಂದಿಯ ಎಲ್ಲಾ ರಜೆಗಳನ್ನು (ನಿಯಮಿತ/ಒಪ್ಪಂದದ) ರದ್ದುಗೊಳಿಸಿದೆ ಮತ್ತು ತಕ್ಷಣವೇ ಕರ್ತವ್ಯಕ್ಕೆ ವರದಿ ಮಾಡುವಂತೆ ಅವರಿಗೆ ನಿರ್ದೇಶಿಸಿದೆ. ಗಾಯಗೊಂಡ ರೋಗಿಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೇಲಿನ ಪವಿತ್ರ ಗುಹೆ, ಕೆಳಗಿನ ಪವಿತ್ರ ಗುಹೆ, ಪಂಜತಾರ್ನಿ ಮತ್ತು ಪವಿತ್ರ ಗುಹೆಗೆ ಹೋಗುವ ಮಾರ್ಗದಲ್ಲಿ ಇತರ ಹತ್ತಿರದ ಸೌಲಭ್ಯಗಳಿವೆ.
ಇನ್ನು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಸುಮಾರು 30-40 ಜನರು ಕಾಣೆಯಾಗಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಜನರನ್ನು ಹೆಲಿಕಾಪ್ಟರ್‌ಗಳನ್ನು ಬಳಸಿ ನೆಲೆಗೆ ತರಲಾಗಿದೆ. ಯಾತ್ರೆ ಇನ್ನೂ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಮತ್ತು ಅಲ್ಲಿರುವ ಜನರಿಗೆ ಮುಂದೆ ಹೋಗದಂತೆ ಸಲಹೆ ನೀಡುತ್ತಿದ್ದೇವೆ ಎಂದು PRO ವಿವೇಕ್ ಕುಮಾರ್ ಪಾಂಡೆ ಹೇಳಿದ್ದಾರೆ.