ಚಿತ್ರದುರ್ಗ: ಜಿಲ್ಲೆಯ ಪದವೀಧರರಿಗೆ ಕೆ.ಎ.ಎಸ್.ಮತ್ತು ಪಿ.ಎಸ್.ಐ. ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಮೂರು ತಿಂಗಳ ಕಾಲ ಉಚಿತ ತರಬೇತಿಯನ್ನು ಜು 10 ರಿಂದ ಬೆಂಗಳೂರಿನಲ್ಲಿ ನೀಡಲಾಗುವುದೆಂದು ಎ.ಎಸ್.ಎಸ್.ಮತ್ತು ಕೆ.ಎ.ಎಸ್.ಅಕಾಡೆಮಿ ಬೆಂಗಳೂರಿನ ಹರಿಪ್ರಸಾದ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಎ.ಎಸ್.ಎಸ್.ಮತ್ತು ಕೆ.ಎ.ಎಸ್.ಅಕಾಡೆಮಿ ಬೆಂಗಳೂರು, ಸತ್ಯಮೇವ ಯುವಶಕ್ತಿ ಸಂಘ ಚಿತ್ರದುರ್ಗದ ವತಿಯಿಂದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಪ್ರದೇಶದ ಪದವೀಧರರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಟ್ಟುಕೊಂಡು ಉಚಿತ ತರಬೇತಿ ನೀಡಲಾಗುವುದು. ಕಳೆದ 23 ವರ್ಷಗಳಿಂದಲೂ ಇದೆ ರೀತಿ ತರಬೇತಿ ನೀಡುತ್ತಿದ್ದು, ಕಳೆದ ಎಂಟು ವರ್ಷಗಳಲ್ಲಿ 160 ಕ್ಕೂ ಹೆಚ್ಚು ಪದವೀಧರರು ಕೆ.ಎಸ್.ಎಸ್.ಅಧಿಕಾರಿಗಳಾಗಿದ್ದಾರೆ.
ಐದುನೂರು ಪದವೀಧರರು ಪಿ.ಎಸ್.ಐ. ಹುದ್ದೆಗೆ ನೇಮಕಗೊಂಡಿದ್ದಾರೆ. 2007 ಮತ್ತು 2010 ರಲ್ಲಿ ಚಿತ್ರದುರ್ಗದ ಮಹಾರಾಣಿ ಕಾಲೇಜಿನಲ್ಲಿ ಉಚಿತ ತರಗತಿಗಳನ್ನು ನಡೆಸಲಾಯಿತು. ಆಗ ಹದಿನೈದು ಎಫ್.ಡಿ.ಎ, ಪಿ.ಎಸ್.ಐ.ಗೆ ನಾಲ್ಕು, ಪದವೀಧರರು ಎಸ್.ಡಿ.ಎ. ಮತ್ತು ಪಿ.ಡಿ.ಓ.ಗಳಾಗಿಯೂ ಆಯ್ಕೆಯಾಗಿದ್ದಾರೆ.
2019 ರಲ್ಲಿ ತ.ರಾ.ಸು.ರಂಗಮಂದಿರದಲ್ಲಿ ಉಚಿತ ಕಾರ್ಯಾಗಾರವನ್ನು ಏರ್ಪಡಿಸಿದ್ದಾಗ ಅತಿ ಹೆಚ್ಚು ಪದವೀಧರರು ಹಾಗೂ ವಿದ್ಯಾರ್ಥಿಗಳು ತರಬೇತಿಯ ಪ್ರಯೋಜನ ಪಡೆದುಕೊಂಡಿದ್ದಾರೆ. ಹಾಗಾಗಿ ಜಿಲ್ಲೆಯ ಪದವೀಧರರು ಮೂರು ತಿಂಗಳ ಕಾಲ ನೀಡುವ ಉಚಿತ ತರಬೇತಿಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸತ್ಯಮೇವ ಯುವಶಕ್ತಿ ಸಂಘದ ಅಧ್ಯಕ್ಷ ಪ್ರತಾಪ್ ಜೋಗಿ ಮಾತನಾಡಿ ಜು.10 ರಿಂದ ಬೆಂಗಳೂರಿನಲ್ಲಿ ಮೂರು ತಿಂಗಳ ಕಾಲ ಉಚಿತ ತರಬೇತಿ ನೀಡಲಾಗುವುದು.
ಚಿತ್ರದುರ್ಗ ಜಿಲ್ಲೆಯ ಪದವೀಧರರು ತರಬೇತಿಯ ಪ್ರಯೋಜನ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ:9986774522 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ವಿನಂತಿಸಿದರು.
ಉಪನ್ಯಾಸಕ ಮಹಂತೇಶ್, ನ್ಯಾಯವಾದಿಗಳಾದ ಮಲ್ಲಿಕಾರ್ಜುನ್, ರಾಘವೇಂದ್ರ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.