ಬೆಂಗಳೂರು: ಹೈದರಾಬಾದಿನಲ್ಲಿ ನಡೆಯಲಿರುವ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು ಸಿಎಂ ಬಸವರಾಜ್ ಬೊಮ್ಮಾಯಿ ತೆರಳುತ್ತಿದ್ದು, ಅದಕ್ಕೂ ಮುನ್ನ ಮಾಧ್ಯಮದವರ ಜೊತೆಗೊಂದಿಷ್ಟು ಮಾತನಾಡಿದ್ದಾರೆ. ನಾನೀಗ ಕಾರ್ಯಕಾರಣಿಯಲ್ಲಿ ಭಾಗವಹಿಸಲು ತೆರಳುತ್ತಿದ್ದೇನೆ. ನಾಳೆ ಸಂಜೆ ಬೆಂಗಳೂರಿಗೆ ವಾಪಸ್ ಬರುತ್ತೇನೆ ಎಂದಿದ್ದಾರೆ.
ರಾಷ್ಟ್ರದ ಎಲ್ಲಾ ನಾಯಕರು ಅಲ್ಲಿಗೆ ಆಗಮಿಸುತ್ತಾರೆ. ಅಮಿತ್ ಶಾ ಅವರೊಂದಿಗೆ ಸಮಯ ಸಿಕ್ಕರೆ ಮಾತನಾಡುತ್ತೇನೆ. ಅಮಿತ್ ಶಾ ಹಾಗೂ ಜೆಪಿ ನಡ್ದ ಅವರನ್ನು ಭೇಟಿಯಾಗೋ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
ಪೌರಕಾರ್ಮಿಕರಿಗೆ ಎಲ್ಲ ಮಾತನಾಡಿದ್ದೇವೆ. ಅವರ ಪ್ರಕ್ರಿಯೆಗಳನ್ನು ಕೊಡಬೇಕು ಎಂದು ಹೇಳಿದ್ದೇವೆ ಕೊಡುತ್ತಾರೆ. ಇವತ್ತು ಮುಷ್ಕರವನ್ನ ಹಿಂದೆ ತೆಗೆದುಕೊಳ್ಳುತ್ತಾರೆ. ಸಹಾನುಭೂತಿಯಿಂದ ಮಾನವೀಯತೆಯಿಂದ ಕ್ರಮ ತೆಗೆದುಕೊಂಡು ಕಾನೂನು ಮಾಡಬೇಕು ಅಂತ ಅಂದುಕೊಂಡಿದ್ದೇವೆ. ಮೂರು ತಿಂಗಳಲ್ಲಿ ಯಾವ ನೇಮಕಾತಿ ಮಾಡಬೇಕು ಅನ್ನೋ ಬಗ್ಗೆ ಚರ್ಚೆ ಮಾಡಿದ್ದೇವೆ. ಯಾರ್ಯಾರಿಗೆ ನೇರೆ ಪಾವತಿ ಇದೆ ಅಂತವರಿಗೆ ನೇಮಕಾತಿ ಮಾಡಲು ಒಪ್ಪಿಕೊಂಡಿದ್ದೇವೆ.
ಅದಕ್ಕೆ ಲೀಗಲ್ ಮತ್ತು ಟೆಕ್ನಿಕಲ್ ಆಗಿ ಏನು ಮಾಡಬೇಕು ಅನ್ನೋ ಬಗ್ಗೆ ಪೌರ ಕಾರ್ಮಿಕರು ಮತ್ತು ಅಧಿಕಾರಿಗಳ ಜಂಟಿ ಸಮಿತಿ ಮಾಡಿದ್ದೇವೆ. ಪೌರಕಾರ್ಮಿಕರ ಸಂರಕ್ಷಣೆಗೆ,ಹೆಲ್ತ್ ,ಎಜುಕೇಷನ್ ಬಗ್ಗೆ ಹೊಸ ಕಾನೂನನ್ನು ರಚನೆ ಮಾಡಬೇಕು. ಮುಂದಿನ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡುತ್ತೆನೆ ಎಂದು ಇದೆ ವೇಳೆ ಬೆಂಗಳೂರು ಜಿಲ್ಲಾಧಿಕಾರಿ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಸಿಎಂ ಬೊಮ್ಮಾಯಿ ಹೊರಟಿದ್ದಾರೆ.