ಬೆಂಗಳೂರು: ನಾಡಪ್ರಭು ಕೆಂಪೇಗೌಡರ 513ನೇ ಜಯಂತಿಯನ್ನು ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜನೆ ಮಾಡಲಾಗಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರು, ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವರಾದ ಆರ್ ಅಶೋಕ್, ಅಶ್ವಥ್ ನಾರಾಯಣ್, ಮುನಿರತ್ನ, ಗೋಪಾಲಯ್ಯ, ಸುನೀಲ್ ಕುಮಾರ್, ರಾಜ್ಯಸಭೆ ಸದಸ್ಯ ಜಗ್ಗೇಶ್, ಸಂಸದ ತೇಜಸ್ವಿ ಸೂರ್ಯ, ಶಾಸಕ ರಿಜ್ವಾನ್ ಅರ್ಷದ್, ಪರಿಷತ್ ಸದಸ್ಯ ಗೋವಿಂದ ರಾಜ್, ಮಾಜಿ ಸಿಎಂ ಎಸ್ ಎಂ ಕೃಷ್ಣ, ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ, ಕ್ರೀಡಾಪಟು ಪ್ರಕಾಶ್ ಪಡುಕೋಣೆ ಭಾಗಿಯಾಗಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಮಾತನಾಡಿದ್ದು, ಕೆಂಪೇಗೌಡ 513 ನೇ ಜಯಂತಿಯನ್ನ ರಾಜ್ಯಸರ್ಕಾರ ಇಷ್ಟ ವೈಭವದಿಂದ ನಡೆಸುತ್ತಿರುವುದಕ್ಕೆ ನಿಮ್ಮೆಲ್ಲರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಕೆಂಪೇಗೌಡ ನಮ್ಮ ದೇಶದ ಅಂತ್ಯದ ಹಿರಿಯ ಸ್ವಾತಂತ್ರ್ಯ ಯೋದರಾಗಿದ್ದಾರೆ. ಅವರು ತಮ್ಮ ಪ್ರಭುತ್ವದಲ್ಲಿ ಬೆಂಗಳೂರುರನ್ನ ಬಹಳ ಸುಂದರವಾಗಿ ಮಾಡುವ ಕಲ್ಪನೆ ಹೊಂದಿದ್ದರು. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರಿಡಲು ಸಹಾಯ ಮಾಡಿದ್ರು. ಅವರಿಗೆ ಅಭಿನಂದನೆಗಳು.
ಬೆಂಗಳೂರಿಗೆ ದೊಡ್ಡ ಕನಸ್ಸು ಅವ್ರು ಹೊಂದಿದ್ದರು. ಅವರ ನಂತರ ಬಂದ ಸರ್ಕಾರಗಳು ತಮ್ಮದೆ ಆದ ಸರ್ಕಾರ ಕೊಡುಗೆ ನೀಡಿದ್ದಾರೆ. ಅವರಿಗೆ ದೀರ್ಘ ದಂಡ ನಮಸ್ಕಾರಗಳು. ಕೆಂಪೇಗೌಡ ಯಾರ ಒಬ್ಬರ ಸ್ವತ್ತು ಅಲ್ಲ. ಜನಾಂಗದ ಸ್ವತ್ತು, ಕುವೆಂಪು ರಚಿಸಿರುವ ಶಾಂತಿಯತೋಟ.
ಅನೇಕ ಜನರು ಇಲ್ಲಿ ಬಂದು ವಾಸಿಸುತ್ತಿದ್ದಾರೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲದೆ, ಎಲ್ಲರೂ ಒಟ್ಟಾಗಿ ಜೀವನ ನಡೆಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರಕ್ಕೂ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ. ನಾನು ಸಿಎಂ ಆಗಿದ್ದಾಗ ಹೈದರಾಬಾದ್ ನಮಗೆ ಪೈಪೋಟಿ ಇತ್ತು. ಆ ಪೈಪೋಟಿಯಿಂದ ನಮಗೆ ಲಾಭ ಸಿಕ್ಕಿದೆ. ಸಿಲಿಕಾನ್ ಹಬ್ ಆಗಿ ನಗರ ಮಾರ್ಪಾಡು ಆಗಿದೆ. ಬೆಂಗಳೂರು ಸಿಲಿಕಾನ್ ಸಿಡಿ ಆಗಲೂ ನಾರಯಣಮೂರ್ತಿ ಸಲಹೆ ಸಹ ಬಹಳ ಮುಖ್ಯ ಆಗಿತ್ತು ಎಂದಿದ್ದಾರೆ.