ಚಿತ್ರದುರ್ಗ : ಮಕ್ಕಳಿಗೋಸ್ಕರ ಆಸ್ಥಿಯನ್ನು ಮಾಡಬೇಡಿ ಮಕ್ಕಳನ್ನೆ ದೇಶದ ಆಸ್ತಿಯನ್ನಾಗಿ ಮಾಡಿ ಎಂದು ಕೆ.ಡಿ.ಪಿ ಸಂಸ್ಥೆಯ ಪದಾದಿಕಾರಿ ಟಿ.ಎಸ್.ತಿಪ್ಪೇಶ್ ಹೇಳಿದರು.
ಭೀಮಸಮುದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆ.ಡಿ.ಪಿ ಸಂಸ್ಥೆಯವತಿಯಿಂದ 1ನೇ ತರಗತಿ ಯಿಂದ 7ನೇ ತರಗತಿಯ ಮಕ್ಕಳಿಗೆ ಉಚಿತ ನೋಟ್‍ಬುಕ್ ವಿತರಣೆ ಮಾಡಿ
ಮಾತನಾಡಿದ ಅವರು, ಕೆ.ಡಿ.ಪಿ ಸಂಸ್ಥೆಯವರು ದೇಶದ ಹಲವು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂದ್ರಪ್ರಧೇಶ, ಉತ್ತರಪ್ರದೇಶ ಸರ್ಕಾರಿ ಶಾಲೆ ಗಳಲ್ಲಿ ಸುಮಾರು ಐದು ವರ್ಷಗಳಿಂದ ಉಚಿತ ನೋಟ್‍ಬುಕ್, ಸ್ಕೂಲ್‍ಬ್ಯಾಗ್, ಜಾಮಿಟ್ರಿ ಬಾಕ್ಸ್ ಮಂತಾದ ಶಾಲಾ ಸಾಮಾಗ್ರಿಗಳನ್ನು ಸುಮಾರು 150 ಸರ್ಕಾರಿ ಶಾಲಾ ಮಕ್ಕಳಿಗೆ ವಿತರಣೆ ಮಾಡುತ್ತಿದ್ದಾರೆ. ಇದನ್ನು ಶಾಲಾ ಮಕ್ಕಳು ಸದುಪಾಯೊಗ ಪಡಿಸಿಕೋಳ್ಳಬೇಕೇಂದು ತಿಳಿಸಿದರು.
ಕೆ.ಡಿ.ಪಿ. ಪೌಂಡೇಷನ್ ಸಂಸ್ಥಾಪಕರಾದ ಅನಿತಾ ವಿ ರಾವ್, ಕಿರಣ್ ಕುಮಾರ್ ಕೆಮ್ಮಣ್ಣು, ಹಾಗು ಅಮನ್ ರಾವ್ ಇವರ ಸಹಯೊಗದೋಂದಿಗೆ ಭೀಮಸಮುದ್ರ, ಬೋಮ್ಮೇನಹಳ್ಳಿ, ವಿ .ಪಾಳ್ಯ, ನೆಲ್ಲಿಕಟ್ಟೆ, ಮಾನಂಗಿ, ಹೊಸಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ನೊಟ್‍ಬುಕ್ ವಿತರಣೆ ಮಾಡಲಾಯಿತು.
ಶಾಲೆಯ ಮುಖ್ಯೋಪಾಧ್ಯಯರಾದ ಜಿ.ಆರ್.ವೆಂಕಟೇಶ್ ರವರು ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿಕೊಂಡಿದ್ದರು. ಮುಖ್ಯಥಿತಿಗಳಾಗಿ ತಿಪ್ಪೇಸ್ವಾಮಿ.ಟಿ, ಜಿ.ತಿರುಮಲೇಶ್ ಬೋಮ್ಮೇನಹಳ್ಳಿ ಕೆ.ಡಿ.ಪಿ ಸಂಸ್ಥೆಯ ಮಾರುತಿ,ಸಂತೋಷ್,ಆಕಾಶ್, ಹಾಗೂ ಶಾಲೆಯ ಶಿಕ್ಷಕರು ಮತ್ತು ಶಾಲಾ ಮಕ್ಕಳು ಉಪಶ್ಥಿತರಿದ್ದರು.