ಅಗ್ನಿಪಥ್ ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದಾಗಿನಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ತೀವ್ರಗತಿಯ ಪ್ರತಿಭಟನೆಗಳು ನಡೆದಿದ್ದವು. ಇದೀಗ ಇಷ್ಟೆಲ್ಲಾ ವಿರೋಧದ ನಡುವೆಯೂ ಅಗ್ನಿಪಥ್ ಯೋಜನೆಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಅಗ್ನಿಪಥ್ ಯೋಜನೆಯಡಿ ಸೇನೆಗೆ ಸೇರಿಕೊಳ್ಳಲು ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದಿದೆ.
ಅಗ್ನಿಪಥ್ ಯೋಜನೆಯಡಿ 3 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆದರೆ ಮೂರೇ ದಿನದಲ್ಲಿ 56 ಸಾವಿರದ 960 ಅರ್ಜಿಗಳು ಸಲ್ಲಿಕೆಯಾಗಿದೆ. ಜುಲೈ 5ರ ತನಕ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ವರ್ಷದಲ್ಲಿ ಮೂರು ಸಾವಿರ ವೀರ ಯೋಧರಿಗೆ ಮಾತ್ರ ಅವಕಾಶವಿದ್ದು, ಆರೋಗ್ಯ ತಪಾಸಣೆ ಮತ್ತು ಒಂದು ಪರೀಕ್ಷೆ ನಡೆದ ಬಳಿಕ ತರಬೇತಿ ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ. ಈ ವರ್ಷ ಅಗ್ನಿಪಥ್ ಯೋಜನೆಯಡಿ ಮೂರು ಸಾವಿರ ಯೋಧರು ಸೇರ್ಪಡೆಯಾಗಲಿದ್ದಾರೆ. ವಿರೋಧದ ನಡುವೆಯೂ ಅಗ್ನಿಪಥ್ ಯೋಜನೆ ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಲಿದೆ ಎನ್ನಲಾಗುತ್ತಿದೆ.