ಬೆಂಗಳೂರು: ಸಿದ್ದರಾಮಯ್ಯ ಪ್ರಜಾಪ್ರಭುತ್ವಕ್ಕೆ ದೊಡ್ಡ ಧ್ವನಿ. ನನ್ನದು ಚಿಕ್ಕ ಬಾಯಿ, ಇಲ್ಲಿ ದೊಡ್ಡ ದೊಡ್ಡ ಮಾತಾಡಬೇಕಿದೆ. ಪ್ರತಿಭೆ ಎಂದರೇ ಏನು ಎಂದು ಕೇಳುತ್ತಿದ್ದರು. ಪ್ರತಿಭೆ ಎಂದರೆ ನಾನೇ ಎಂದು ನಾದಬ್ರಹ್ಮ ಹಂಸಲೇಖ ಹೇಳಿದ್ದಾರೆ.
ನಾನೇದಾದರೂ ಆರ್ಯರ ತರ ಕಾಣುತ್ತಿದ್ದೇನಾ. ನಾನು ಪ್ಯೂರ್ ದ್ರಾವಿಡನ್. ನಾನು ಒರಿಜಿನಲ್ ಪ್ರತಿಭೆ. ಅವತ್ತು ಬುದ್ದ, ಬಸವ, ಅಂಬೇಡ್ಕರ್ ಇಂದು ಮೋಹನದಾಸ್. ಸಮಾಜದಲ್ಲಿ ನಡೆದ ಘಟನೆಗಳ ಬಗ್ಗೆ ಹನಿಫ್ ಹೇಳಿದ್ರು. ಯಾರು ಬುದ್ದಿ ಹೇಳುವವರು ಯಾರು ಎಂದು ಹೇಳಿದ್ರು. ಆದರೆ ನಾವು ನಮ್ಮ ಮನೆ ಬಾಗಿಲ ಕೀ ಇನ್ನೊಬ್ಬರಿಗೆ ಕೊಟ್ಟು, ಬಾಗಿಲು ಕಾಯುತ್ತಿದ್ದೇವೆ.
ನಾವು ಯಾವಾಗ ಇನ್ ಆಕ್ಟಿವ್ ಆಗುತ್ತೇವೋ, ಆಗ ಇನ್ನೊಬ್ಬರು ಆಕ್ಟಿವ್ ಆಗ್ತಾರೆ. ನಾವು ಹಾಡಬೇಕಿರುವುದು ಹರಿಕಥೆಯಲ್ಲ ಸರ್. ನಾವು ಹಾಡಬೇಕಿರುವುದು ಕಾನೂನುಗಳನ್ನು. 20 ಕ್ಕೂ ಹೆಚ್ಚು ಕವಿಗಳು ಸೇರಿ ಇದನ್ನು ಮಾಡ್ತೇವೆ. ಹಣ ಹಾಕಿ ಈ ಕಾರ್ಯಕ್ರಮ ರೂಪಿಸುತ್ತೇವೆ. ಸಂವಿಧಾನದ ಪುಸ್ತಕವನ್ನು ಜಾನಪದ ಹಾಡಗಳ ಮೂಲಕ ಹಾಡಬೇಕು. ಅನುಭವ ಮಂಟಪ ಹಂಗಿಲ್ಲದ ಮೀಸಲಾತಿ ನೀಡಿದೆ. ಸಂವಿಧಾನ ಗೀತೆ, ಬಡವರ ಗೀತೆಯನ್ನ ಹಾಡಬೇಕು. ನಾನು ಯಾವ ಜಾತಿ ಎಂದು ಗೊತ್ತಿರಲಿಲ್ಲ. ಈ ಪುಸ್ತಕ ಕೈಗೆ ಬಂದಾಗ ನಾನು ಯಾವ ಜಾತಿ ಎಂದು ಕೇಳ್ದೆ. ಹಾಗ ನೇಕಾರ ಎಂದು ಗೊತ್ತಾಯಿತು. ನೇಕಾರ ಯಾವುದರಲ್ಲಿ ಬರುತ್ತೆ ಎಂದು ಕೇಳಿದಾಗ ಓಬಿಸಿ ಎಂದ್ರು. ಓಬಿಸಿ ಎಂದ್ರೆ , ಎಷ್ಟು ಓದಿದರು ಓದಿದ್ದೇವೆ ಎಂದು ಯಾರು ಹೇಳುವುದಿಲ್ಲ ಅವರೇ ಓಬಿಸಿ. ನಾನು ಮೂರು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದೇನೆ, ಆದರೂ ಓದಿದ್ದೇನೆ ಎಂದು ಹೇಳಲ್ಲ ಎಂದಿದ್ದಾರೆ.