ಚಿತ್ರದುರ್ಗ: ಇಂದು ದ್ವಿತೀಯ ಪಿಯು ಪಲಿತಾಂಶ ಹೊರಬಿದ್ದಿದ್ದು, ಈ ಬಾರಿಯ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಶೇ. 49.31 ರಷ್ಟು ಫಲಿತಾಂಶ ಪಡೆದುಕೊಂಡಿದೆ. ಆದರೆ ಕಳೆದ ಬಾರಿ ಶೇಕಡ 56.80 ಫಲಿತಾಂಶ ಬಂದಿತ್ತು. ಆದರೆ ಈ ಬಾರಿ ಕಡಿಮೆ ಫಲಿತಾಂಶ ಪಡೆದುಕೊಂಡಿದೆ. ಈ ಮೂಲಕ ರಾಜ್ಯಕ್ಕೆ ಹೋಲಿಕೆ ಮಾಡಿಕೊಂಡರೆ ಕೊನೆಯ ಸ್ಥಾನ ಪಡೆದುಕೊಂಡಿದೆ.
ಈ ಭಾರಿ 16,570 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಆದರಲ್ಲಿ 7594 ಜನ ಉತ್ತಿರ್ಣರಾಗಿದ್ದಾರೆ. ಇದರಲ್ಲಿ 3220 ಬಾಲಕರು,(ಶೇ.39.07) 4374 (ಶೇ.51.07) ಬಾಲಕಿಯರಿದ್ದಾರೆ. ಇನ್ನು ಎಸ್.ಸಿ. ಸಮುದಾಯದ 4525 ವಿದ್ಯಾರ್ಥಿಗಳಿಗೆ 1685 (ಶೇ.37.24), ಎಸ್.ಟಿ.ಯಲ್ಲಿ 2942 ವಿದ್ಯಾರ್ಥಿಗಳಿಗೆ 1112 ವಿದ್ಯಾರ್ಥಿಗಳು (ಶೇ. 37.08) ಉತ್ತೀರ್ಣರಾಗಿದ್ದಾರೆ.
ನಗರ ಪ್ರದೇಶದಲ್ಲಿ 10411 ವಿದ್ಯಾರ್ಥಿಗಳಿಗೆ 4478 (ಶೇ. 43.01) ಗ್ರಾಮಾಂತರ ಪ್ರದೇಶದಲ್ಲಿ 6159 ವಿದ್ಯಾರ್ಥಿಗಳಿಗೆ 3116 (ಶೇ.50.59) ವಿದ್ಯಾರ್ಥಿಗಳು ಉರ್ತಿರ್ಣ ರಾಗಿದ್ದಾರೆ.
ಕಲಾ ವಿಭಾಗದಲ್ಲಿ 6945 ವಿದ್ಯಾರ್ಥಿಗಳಿಗೆ 2395 (ಶೇ.34.39), ಅರ್ಥಶಾಸ್ತ್ರದಲ್ಲಿ 4635 ವಿದ್ಯಾರ್ಥಿಗಳಿಗೆ 2460 (ಶೇ. 53.07),ವಿಜ್ಞಾನ ವಿಭಾಗದಲ್ಲಿ 4990 ವಿದ್ಯಾರ್ಥಿಗಳಿಗೆ 2739 (ಶೇ.54.89)ವಿದ್ಯಾರ್ಥಿಗಳು ಉತ್ತಿರ್ಣ ರಾಗಿದ್ದಾರೆ.
ಜಿಲ್ಲೆಯಲ್ಲಿ ವಿವಿಧ ಕಾಲೇಜಿನಲ್ಲಿ 625ಕ್ಕೆ ಹೆಚ್ಚಿನ ಅಂಕಗಳನ್ನು ವಿದ್ಯಾರ್ಥಿಗಳು ಪಡೆದಿದ್ದಾರೆ. ಇದರಲ್ಲಿ ಕಲಾ ವಿಭಾಗದಲ್ಲಿ 10 ವಿದ್ಯಾರ್ಥಿಗಳು, ಅರ್ಥಶಾಸ್ತ್ರದಲ್ಲಿ 11 ಹಾಗೂ ವಿಜ್ಞಾನ ವಿಭಾಗದಲ್ಲಿ 12 ವಿದ್ಯಾರ್ಥಿಗಳಿದ್ದಾರೆ. ಈ ಮೂಲಕ ಚಿತ್ರದುರ್ಗ ಜಿಲ್ಲೆ ಕಡೆಯ ಸ್ಥಾನ ಗಳಿಸಿದೆ.