ಚಿತ್ರದುರ್ಗ, (ಜೂ.18) : ಜಿಲ್ಲೆಯ ಪ್ರತಿಷ್ಠಿತ ಎಸ್ ಆರ್ ಎಸ್ ಪಿಯು ಕಾಲೇಜಿಗೆ ಈ ಬಾರಿಯೂ ಉತ್ತಮ ಫಲಿತಾಂಶ ಬಂದಿದೆ.
ಏಪ್ರಿಲ್ 22 ರಿಂದ ಮೇ-18 ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಜೂ-18 ಇದೇ ಶನಿವಾರ ಪ್ರಕಟಗೊಂಡಿದ್ದು, ಎಸ್ ಆರ್ ಎಸ್ ಕಾಲೇಜಿನ ಒಟ್ಟು 154 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದರೆ, ವಿವಿಧ ವಿಷಯಗಳಲ್ಲಿ ಒಟ್ಟು 53 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕಾಲೇಜಿನ ವಿದ್ಯರ್ಥಿಗಳಾದ ಕುಮಾರಿ ಸಾಕ್ಷಿ, 600 ಕ್ಕೆ 589, ಕು. ಜೈವೀರ್ ಸಿಂಗ್ 588, ಕು. ಪಿ.ಆರ್ ಚಂದನಾ 587, ಕು. ಅಕ್ಷಿತಾ ಕೆ. 586, ಕು. ಓಂಪ್ರಿಯ ಎಸ್. 582, ಕು. ಧೃತಿ ಎಂ. ಜಿ. 582, ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ.
ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ಎಲ್ಲಾ ಸಾಧಕ ವಿದ್ಯರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಬಿ ಎ ಲಿಂಗಾರೆಡ್ಡಿ, ಕಾರ್ಯದರ್ಶಿ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷ ಶ್ರೀ ಬಿ ಎಲ್ ಅಮೋಘ್, ಆಡಳಿತಾಧಿಕಾರಿ ಡಾ. ರವಿ ಟಿ.ಎಸ್., ಪ್ರಾಂಶುಪಾಲರಾದ ಶ್ರೀ ಗಂಗಾಧರ್ ಈ. ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.