Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರೈತರಿಗೆ ಉಪಯುಕ್ತ ಮಾಹಿತಿ : ಸೂರ್ಯಕಾಂತಿ ಬೆಳೆಯಲ್ಲಿ ಸುಧಾರಿತ ಬೇಸಾಯ ಪದ್ದತಿ

Facebook
Twitter
Telegram
WhatsApp

ಚಿತ್ರದುರ್ಗ, (ಜೂನ್ 18) :  ಸೂರ್ಯಕಾಂತಿ ರಾಜ್ಯದ ಪ್ರಮುಖ ಎಣ್ಣೆಕಾಳು ಬೆಳೆಯಾಗಿದೆ. ವರ್ಷದ ಮೂರು ಅಂಗಾಮುಗಳಲ್ಲಿ ಬೆಳೆಯಬಹುದಾದ ಬೆಳೆಯಾಗಿದೆ. ಈ ಬೆಳೆಯನ್ನು ಮುಖ್ಯವಾಗಿ ಶುಷ್ಕ ವಾತಾವರಣ ಮತ್ತು ಹವಾಮಾನ ವೈಪರಿತ್ಯಗಳನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ.

ಸೂರ್ಯಕಾಂತಿ ಬೀಜವು ಉತ್ತಮ ದರ್ಜೆಯ ಮತ್ತು ಪುಷ್ಠಿದಾಯಕವಾದ ಆಹಾರದಲ್ಲಿ ಬಳಸಬಹುದಾದ ಸುಮಾರು ಶೇ.40ರಷ್ಟು ಎಣ್ಣೆ ಅಂಶ ಹೊಂದಿದೆ.

ಸೂರ್ಯಕಾಂತಿ ತಳಿಗಳು ಮತ್ತು ವಿಶೇಷ ಗುಣಗಳು: ಕೆ.ಬಿ.ಎಸ್.ಹೆಚ್-41 ತಳಿಯನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯ ಸಮಯದಲ್ಲಿ ಬಿತ್ತನೆ ಮಾಡಬಹುದು ಸುಮಾರು  90 ರಿಂದ 92 ದಿನಗಳ ಅವಧಿಯಲ್ಲಿ ಫಸಲಿಗೆ ಬರುತ್ತದೆ. ಎಕರೆಗೆ ಸುಮಾರು 4 ರಿಂದ 5 ಕ್ವಿಂಟಲ್ ಖುಷ್ಕಿ ಜಮೀನು, 8 ರಿಂದ 10 ಕ್ವಿಂಟಲ್ ನೀರಾವರಿ ಜಮೀನುಗಳಲ್ಲಿ ಇಳುವರಿ ಕೊಡುತ್ತದೆ. ತೇವಾಂಶ ಒತ್ತಡಕ್ಕೆ ಹೊಂದಿಕೊಳ್ಳುವಂತಹ ತಳಿಯಾಗಿದೆ.

ಕೆ.ಬಿ.ಎಸ್.ಹೆಚ್-42 , ಕೆ.ಬಿ.ಎಸ್.ಹೆಚ್-43 ತಳಿಯನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯ ಸಮಯದಲ್ಲಿ ಬಿತ್ತನೆ ಮಾಡಬಹುದು ಸುಮಾರು  90 ರಿಂದ 92 ದಿನಗಳ ಅವಧಿಯಲ್ಲಿ ಫಸಲಿಗೆ ಬರುತ್ತದೆ. ಎಕರೆಗೆ ಸುಮಾರು 4 ರಿಂದ 5 ಕ್ವಿಂಟಲ್ ಖುಷ್ಕಿ ಜಮೀನು, 8 ರಿಂದ 10 ಕ್ವಿಂಟಲ್ ನೀರಾವರಿ ಜಮೀನುಗಳಲ್ಲಿ ಇಳುವರಿ ಕೊಡುತ್ತದೆ. ತೇವಾಂಶ ಒತ್ತಡಕ್ಕೆ ಹೊಂದಿಕೊಳ್ಳುವಂತಹ ತಳಿಯಾಗಿದೆ.

ಕೆ.ಬಿ.ಎಸ್.ಹೆಚ್-44, ತಳಿಯನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯ ಸಮಯದಲ್ಲಿ ಬಿತ್ತನೆ ಮಾಡಬಹುದು ಸುಮಾರು  95 ರಿಂದ 100 ದಿನಗಳ ಅವಧಿಯಲ್ಲಿ ಫಸಲಿಗೆ ಬರುತ್ತದೆ. ಎಕರೆಗೆ ಸುಮಾರು 4 ರಿಂದ 5 ಕ್ವಿಂಟಲ್ ಖುಷ್ಕಿ ಜಮೀನು, 8 ರಿಂದ 10 ಕ್ವಿಂಟಲ್ ನೀರಾವರಿ ಜಮೀನುಗಳಲ್ಲಿ ಇಳುವರಿ ಕೊಡುತ್ತದೆ. ತುಕ್ಕು ರೋಗ ನಿರೋಧಕ ತಳಿಯಾಗಿದೆ.

ಕೆ.ಬಿ.ಎಸ್.ಹೆಚ್-53, ತಳಿಯನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯ ಸಮಯದಲ್ಲಿ ಬಿತ್ತನೆ ಮಾಡಬಹುದು ಸುಮಾರು  95 ರಿಂದ 100 ದಿನಗಳ ಅವಧಿಯಲ್ಲಿ ಫಸಲಿಗೆ ಬರುತ್ತದೆ. ಎಕರೆಗೆ ಸುಮಾರು 4 ರಿಂದ 5 ಕ್ವಿಂಟಲ್ ಖುಷ್ಕಿ ಜಮೀನು, 8 ರಿಂದ 10 ಕ್ವಿಂಟಲ್ ನೀರಾವರಿ ಜಮೀನುಗಳಲ್ಲಿ ಇಳುವರಿ ಕೊಡುತ್ತದೆ.

ಬೂದು ರೋಗ ನಿರೋಧಕ ತಳಿಯಾಗಿದೆ.
ಕೆ.ಬಿ.ಎಸ್.ಹೆಚ್-78, ತಳಿಯನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯ ಸಮಯದಲ್ಲಿ ಬಿತ್ತನೆ ಮಾಡಬಹುದು ಸುಮಾರು  83 ರಿಂದ 85 ದಿನಗಳ ಅವಧಿಯಲ್ಲಿ ಫಸಲಿಗೆ ಬರುತ್ತದೆ. ಎಕರೆಗೆ ಸುಮಾರು 8 ರಿಂದ 10 ಕ್ವಿಂಟಲ್ ಖುಷ್ಕಿ ಜಮೀನು, 10 ರಿಂದ 12 ಕ್ವಿಂಟಲ್ ನೀರಾವರಿ ಜಮೀನುಗಳಲ್ಲಿ ಇಳುವರಿ ಕೊಡುತ್ತದೆ. ಅಲ್ಪಾವಧಿ ತಳಿಯಾಗಿದೆ.

ಬಿತ್ತನೆ  ಮಾಡುವುದಕ್ಕಿಂತ ಮುಂಚೆ ರೈತರು ಅನುಸರಿಸಬೇಕಾದ ಕ್ರಮಗಳು: ರೈತರು ಭೂಮಿಯನ್ನು ಚೆನ್ನಾಗಿ ಅದ ಮಾಡಿದನಂತರ ಪೂರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರ ರಾಸಾಯನಿಕ ಗೊಬ್ಬರಗಳನ್ನು ಬಿತ್ತನೆ ಮಾಡುವುದಕ್ಕಿಂತ ಎರಡರಿಂದ ಮೂರು ವಾರಗಳ ಮೊದಲು ಮಣ್ಣಿನಲ್ಲಿ ಬೆರೆಸಬೇಕು.
ಬಿತ್ತನೆಗೆ ಮುಂಚೆ ಸೂರ್ಯಕಾಂತಿ ಬೀಜವನ್ನು ಅಜಟೋಬ್ಯಾಕ್ಟರ್ ಜೈವಿಕ ಗೊಬ್ಬರವನ್ನು ಬೆರೆಸಿ ಅರ್ಧ ಗಂಟೆ ನೆರಳಿನಲ್ಲಿ ಒಣಗಿಸಿ 2 ಗ್ರಾಂ ಥೈರಾಮ್ ಪುಡಿ ಹಾಗೂ ಮ್ಯಾಂಕೊಜೆಬ್ ಬಳಸಿ ಬಿತ್ತಲು ಉಪಯೋಗಿಸಬೇಕೇಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪಿಳ್ಳೇಕೆರೆನಹಳ್ಳಿ | ಡಿಸೆಂಬರ್ 27 ರಂದು ಗೌರಸಮುದ್ರ ಮಾರಮ್ಮದೇವಿ ದೇವಸ್ಥಾನದಲ್ಲಿ 13ನೇ ವರ್ಷದ ಕಾರ್ತಿಕ ಮಹೋತ್ಸವ

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 23 : ನಗರದ ಹೊರವಲಯದ ಪಿಳ್ಳೇಕೆರೆನಹಳ್ಳಿ ಗ್ರಾಮದ ಶಕ್ತಿ ದೇವತೆಯಾದ ಶ್ರೀ ಶ್ರೀ ಶ್ರೀ ಗೌರಸಮುದ್ರದೇವಿಯ ಸನ್ನಿಧಿಯಲ್ಲಿ ಡಿಸೆಂಬರ್ 27 ರಂದು ಕಾರ್ತಿಕ ಮಹೋತ್ಸವ ನಡೆಯಲಿದೆ. ಅಂದು ಅಮ್ಮನವರಿಗೆ ಬೆಳಗ್ಗೆ

ಯಾವುದೇ ಕಾರಣಕ್ಕೂ ಕ್ಷಮಿಸಲ್ಲ : ಸಿಟಿ ರವಿ ವಿರುದ್ಧ ಸಿಡಿದೆದ್ದ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಸುವರ್ಣ ಸೌಧದಲ್ಲಿ ಸಿಟಿ ರವಿ ಅವರು ಆಡಿದ್ದ ಮಾತಿನ ಬಿಸಿ ಇನ್ನು ಹಾರಿಲ್ಲ. ಅಶ್ಲೀಲ ಪದ ಬಳಕೆಯ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೆ ಸಿಡಿದೆದ್ದಿದ್ದಾರೆ. ಆ ಸಂಬಂಧ ಎರಡು ವಿಡಿಯೋಗಳನ್ನು ಇಂದು ಹರಿಬಿಟ್ಟಿದ್ದಾರೆ.

ಚಿತ್ರದುರ್ಗ | ಪಿಳ್ಳೇಕೆರೆನಹಳ್ಳಿ ಬಳಿ ಅಂಡರ್ ಪಾಸ್ ನಿರ್ಮಿಸಿ : ಶಾಸಕ ವೀರೇಂದ್ರ ಸೂಚನೆ

  ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.23 : ಪಿಳ್ಳೇಕೆರೆನಹಳ್ಳಿ ಗ್ರಾಮದ ಬಳಿ ಸ್ಕೈವಾಕರ್ ನಿರ್ಮಿಸುವ ಬದಲಾಗಿ ಅಂಡರ್ ಪಾಸ್ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಸೂಚಿಸಿದ್ದಾರೆ.

error: Content is protected !!