ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆಗಿರುವ ದೋಷ ವಿರೋಧಿಸಿ ಇಂದು ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಗೆ ನನ್ನ ಬೆಂಬಲವೂ ಇದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ತಿಳಿಸಿದ್ದಾರೆ.
ಮೊನ್ನೆ ಹೋರಾಟ ಸಮಿತಿ ಭೇಟಿ ಮಾಡಿತ್ತು.ಹಿರಿಯ ವಕೀಲರು ಹನುಮಂತ್ರಾಯಪ್ಪ ಎಲ್ಲಾ ವಾಸ್ತವಾಂಶ ಹೇಳಿದ್ದಾರೆ. ನಂಜಾವಧೂತ ಸ್ವಾಮೀಜಿ ಯಾರಿಗೂ ಹೆದರೋದಿಲ್ಲ. ಸರ್ಕಾರಕ್ಕೆ ಅಂತಿಮವಾದ ಕರೆ ಕೊಟ್ಟಿದ್ದಾರೆ. ಅವರು ಐಕ್ಯತೆಗೆ ನಾನು ಆಭಾರಿ.
ಡಿಕೆ ಶಿವಕುಮಾರ್ ಕಠಿಣವಾದ ಶಬ್ದ ಬಳಸಿದ್ರು. ಪುಸ್ತಕನೇ ಹರಿದು ಹಾಕಿದ್ರು, ಪುಸ್ತಕದ ಮೇಲೆ ಆವೇಶ ಅವರಿಗೆ. ಒಂದು ಕಾರ್ಯಕ್ರಮ ಹಾಕಿದ್ರೆ ಹೇಗೆ ಅಂತ್ಯಗೊಳಿಸಬೇಕು ಎಂದು ಗೋಕಾಕ್ ಚಳುವಳಿ ಮಾದರಿ. ಆಗ ರಾಜಕುಮಾರ್ ಇದ್ರು. ಇಡೀ ರಾಜ್ಯದ ಜನತೆ ಅದೊಂದು ದೊಡ್ಡ ಹೋರಾಟಕ್ಕೆ ಸಾಕ್ಷಿ ಆಯ್ತು. ಅದಕ್ಕೆ ದೊಡ್ಡ ಕೊಡುಗೆ ರಾಜಕುಮಾರ್ ದು ಇದೆ. ಅವರದ್ದು ದೊಡ್ಡ ಸಂಘಟನೆಯೇ ಕಾರಣ. ಈ ವಿಚಾರದಲ್ಲಿ ರಾಜಕಾರಣ ಬೇಡ. ನನಗೆ ಸಮಸ್ಯೆ ಆದರೂ ಕಾರ್ಯಕ್ರಮಕ್ಕೆ ಬರ್ತೀನಿ ಅಂದಿದ್ದೆ. ಶಕ್ತಿ ಮೀರಿ ಬೆಂಬಲ ಕೊಡ್ತೀನಿ ಎಂದಿದ್ದಾರೆ.