ಬೆಂಗಳೂರು: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶೇಕಡ 61.88 ಫಲಿತಾಂಶ ಬಂದಿದೆ. ಅದರಲ್ಲಿ ದಕ್ಷಿಣ ಕನ್ನಡಕ್ಕೆ ಪ್ರಥಮ ಸ್ಥಾನ ಸಿಕ್ಕಿದ್ದು, 88.02 ಫಲಿತಾಂಶ ಪಡೆದಿದೆ. ಇನ್ನು ಚಿತ್ರದುರ್ಗ ಕೊನೆಯ ಸ್ಥಾನದಲ್ಲಿದ್ದು 49.31 ಫಲಿತಾಂಶ ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಎಲ್ಲಾ ಜಿಲ್ಲೆಗಳಲ್ಲೂ ಫಲಿತಾಂಶ ಇಳಿಕೆ ಕಂಡಿದೆ.
ಕಲಾ ವಿಭಾಗದಲ್ಲಿ ಶೇಕಡ 67.14 ರಷ್ಟು ಫಲೊತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 23.29ರಷ್ಟು ಫಲೊತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ 72.53ರಷ್ಟು ಫಲಿತಾಂಶ ಸಿಕ್ಕಿದೆ. ಬಾಲಕಿಯರು 68.72 ರಷ್ಡು ತೇರ್ಗಡೆಯಾದರೆ ಬಾಲಕರು 55.22 ರಷ್ಟು ತೇರ್ಗಡೆಯಾಗಿದ್ದಾರೆ.
ನಗರ ಭಾಗದ ಫಲಿತಾಂಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗಕ್ಕೆ ಸ್ವಲ್ಪ ಜಾಸ್ತಿ ಫಲಿತಾಂಶ ಬಂದಿದೆ. ನಗರದಲ್ಲಿ 61.78 ಫಲಿತಾಂಶವಾದರೆ, ಗ್ರಾಮೀಣ ಭಾಗದಲ್ಲಿ 62.18 ರಷ್ಟು ಬಂದಿದೆ. ಒಂದು ಪರ್ಸೆಂಟ್ ಅಷ್ಟೇ ವ್ಯತ್ಯಾಸವಾಗಿದೆ. ಇನ್ನು ಕನ್ನಡ ಮಾಧ್ಯಮ ವಿದ್ಯಾರ್ಥಿಗಳು 51.38 ರಷ್ಟು ಫಲಿತಾಂಶ ಬಂದಿದ್ದು, ಇಂಗ್ಲಿಷ್ ಮಾಧ್ಯಮದಲ್ಲಿ 69.99 ರಷ್ಟು ಫಲಿತಾಂಶ ಬಂದಿದೆ.