ಚಿತ್ರದುರ್ಗ, (ಜೂ08): ಅಬಕಾರಿ ಇಲಾಖೆ ನಿವೃತ್ತ ಅಧೀಕ್ಷಕ, ಸಿಂಗಾಪುರ ಗ್ರಾಮದ ಮೂಲ ನಿವಾಸಿ ಎಚ್.ಈಶ್ವರಪ್ಪ (87) ಬುಧವಾರ ಮಧ್ಯಾಹ್ನ ನಗರದ ಜೆಸಿಅರ್ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು.
ಮೃತರಿಗೆ ಪುತ್ರ ಜಿಲ್ಲಾಸ್ಪತ್ರೆ ಹಿರಿಯ ವೈದ್ಯ ಡಾ.ಸತೀಶ್, ಒಬ್ಬ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ 11.45ಕ್ಕೆ ಹೊಳಲ್ಜೆರೆ ರಸ್ತೆ, ಕನಕ ವೃತ್ತ ಸಮೀಪದ ರುದ್ರಭೂಮಿಯಲ್ಲಿ ನೆರವೇರಲಿದೆ.
ಅಂತಿಮ ದರ್ಶನ: ವಿಷಯ ತಿಳಿಯುತ್ತಿದ್ದಂತೆ ಮಾಜಿ ಸಚಿವ ಎಚ್.ಆಂಜನೇಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜಪೀರ್, ಕಾನೂನು ವಿಭಾಗದ ಜಿಲ್ಲಾಧ್ಯಕ್ಷ ಸುದರ್ಶನ, ವಕೀಲರಾದ ಜಯಣ್ಣ, ಶರಣಪ್ಪ ಸೇರಿದಂತೆ ವಿವಿಧ ಪಕ್ಷ, ಸಮುದಾಯದ ಮುಖಂಡರು ಭೇಟಿ ಅಂತಿಮದರ್ಶನ ಪಡೆದರು.
ಸಂತಾಪ : ಸರ್ವ ಸಮುದಾಯದ ಪ್ರೀತಿ ಗಳಿಸಿದ್ದರು. ಸಿಂಗಪುರ ಗ್ರಾಮದ ಈಶ್ವರಪ್ಪ ನಿಧನ ಅತೀವ ದುಃಖ ತರಿಸಿದೆ.
ದಲಿತ ಸಮುದಾಯದಲ್ಲಿ ಜನಿಸಿ, ಸಂಕಷ್ಟದಲ್ಲಿ ವಿದ್ಯಾಭ್ಯಾಸ ಮಾಡಿ ಅಬಕಾರಿ ಅಧೀಕ್ಷಕರಾಗಿದ್ದ ಈಶ್ವರಪ್ಪ, ಅನೇಕ ಜನಪರ ಚಳವಳಿಗಳಿಗೆ ಆರ್ಥಿಕಶಕ್ತಿ ಆಗಿದ್ದರು.
ನೊಂದ ಜನರ ಏಳಿಗಾಗಿ ಸದಾ ಸ್ಪಂದಿಸುತ್ತಿದ್ದರು. ಮುಖ್ಯವಾಗಿ ಎಲ್ಲ ಜಾತಿ ಜನರ ಪ್ರೀತಿ ಗಳಿಸಿದ್ದರು.
ದಲಿತ ಸಮುದಾಯದ ಹಿರಿಯರಾಗಿದ್ದ ಈಶ್ವರಪ್ಪ, ತಮ್ಮ ಇಳಿ ವಯಸ್ಸಿನಲ್ಲೂ ಸಮುದಾಯ ಹಿತಕ್ಕಾಗಿ ಶ್ರಮಿಸುತ್ತಿದ್ದರು. ಇಂತಹ ಉತ್ತಮ ವ್ಯಕ್ತಿಯ ಅಗಲಿಕೆ ಸಮುದಾಯ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಸಂತಾಪ ವ್ತಕ್ತಪಡಿಸಿದ್ದಾರೆ.
ಎಂಟು ವರ್ಷದ ಹಿಂದೆ ವಿಸ್ಮಯ ಎಂಬ ಅಭಿನಂದನ ಗ್ರಂಥ ಪ್ರೊ.ಲಿಂಗಪ್ಪ ಸಂಪಾದಕತ್ವದಲ್ಲಿ ಹೊರತಂದು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ವಿವಿಧ ಸಮುದಾಯ ಆಶ್ರಯದಲ್ಲಿ ಅವರಿಗೆ ಗೌರವ ಸಲ್ಲಿಸಿದರು. ಅವರ ಜನಪ್ರಿಯತೆ ಮತ್ತು ಸಮಾಜಮುಖಿ ಕಾರ್ಯಕ್ಕೆ ಸಾಕ್ಷಿ ಆಗಿತ್ತು ಎಂದು ಆಂಜನೇಯ ಸ್ಮರಿಸಿದ್ದಾರೆ.