ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕಾಂಗ್ರೆಸ್ ಬೆಂಬಲವನ್ನು ಕೇಳಿದೆ. ಆದರೆ ಸಿದ್ದರಾಮಯ್ಯ ಬಣ ಇದಕ್ಕೆ ಒಪ್ಪಿಲ್ಲ. ಹಳೆ ವೈರತ್ವವನ್ನು ಕುಮಾರಸ್ವಾಮಿ ಬಿಡಬೇಕು ಎಂಬುದು ಡಿಕೆಶಿ ಮಾತು. ಈ ಸಂಬಂಧ ಇಂದು ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಎಲ್ಲದಕ್ಕೂ ರೆಡಿಯಿದ್ದೇನೆ. ಯಾಕೆಂದ್ರೆ ಕರ್ನಾಟಕ ರಾಜ್ಯ ಇವತ್ತು ಯಾವ ಪರಿಸ್ಥಿತಿಯಲ್ಲಿ ಇದೆ ಎಂಬುದನ್ನು ಇಡೀ ನಾಡಿನ ಜನತೆಗೆ ಅರ್ಥವಾಗಿದೆ.
ಇಂಥ ಪರಿಸ್ಥಿತಿಯಲ್ಲಿ ವೇದಿಕೆ ಮೇಲೆ ಬರೀ ಭಾಷಣ ಮಾಡಿಕೊಂಡು ಬಂದರೆ ಆಗುವುದಿಲ್ಲ. ಇಂಥ ಕೆಟ್ಟ ಸರ್ಕಾರ ತೆಗೆಯುವುದಕ್ಕೆ ಏನು ಮಾಡಬೇಕು ಅನ್ನೋದು ನಿಮ್ಮ ಹೃದಯದಲ್ಲಿ ಸ್ಪಷ್ಟತೆ ಇರಬೇಕು. ಅದಿಲ್ಲದೆ ಇದ್ದರೆ ನಿಮ್ಮ ಕೈನಲ್ಲಿ ಸಾಧ್ಯವಿಲ್ಲ ಈ ಕೆಟ್ಟ ಸರ್ಕಾರ ತೆಗೆಯುವುದಕ್ಕೆ. ಅದಕ್ಕೆ ಓಪನ್ ಆಫರ್ ಕೊಟ್ಟಿದ್ದೇನೆ. ಇದನ್ನು ಅಕ್ಸೆಪ್ಟ್ ಮಾಡಿಕೊಳ್ಳುವುದು ಬಿಡುವುದು ನಿಮಗೆ ಸೇರಿದ್ದು. ಇದಕ್ಕಿಂತ ಇನ್ನೇನು ಆಫರ್ ಕೊಡುವುದಕ್ಕೆ ಆಗುತ್ತೆ.
ಕಳುಹಿಸುತ್ತೀವಿ ಎಂದಿದ್ದಾರೆ. ಆದರೆ ಇಲ್ಲಿವರೆಗೂ ನನ್ನ ಬಳಿಗೆ ಯಾರು ಬಂದಿಲ್ಲ. ನಿನ್ನೆ ಕೆಲವು ಸ್ಥಳೀಯ ಶಾಸಕರು ಮಾತನಾಡಿದ್ದಾರೆ. ಅವರ ಹೆಸರು ಹೇಳಿ ತೊಂದರೆ ಕೊಡುವುದು ಬೇಡ. ಯಾರಿಗಿದೆ ಆತ್ಮಸಾಕ್ಷಿ. ನಾಳೆ ಮಧ್ಯಾಹ್ನದ ಒಳಗೆ ಒಂದು ಕ್ಲಿಯರ್ ಪಿಕ್ಚರ್ ಬರುತ್ತದೆ. ಈಗಲೂ ಕಾಲ ಮಿಂಚಿಲ್ಲ. ಯಾರ್ಯಾರಿಗೆ ಏನೇನು ಪ್ರೇರೆಪಣೆ ಕೊಟ್ಟು ಭಗವಂತ ಅನುವು ಮಾಡಿಕೊಡುತ್ತಾನೆ ಎಂಬುದನ್ನು ನೋಡೋಣಾ ಎಂದಿದ್ದಾರೆ.