ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್
ಚಿತ್ರದುರ್ಗ,(ಜೂ.08) : ಸಮಾಜವನ್ನು ಎತ್ತರಕ್ಕೆ ಕೊಂಡ್ಯೂಯುವ ಮೂಲಕ ಮುಂದಿನ ದಿನಮಾನದಲ್ಲಿ ಬಂಜಾರ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದು ನೂತನ ಸ್ವಾಮೀಜಿಯಾದ ಶ್ರೀ ನಂದಾಮಸಂದ್ ಸೇವಾಲಾಲ್ ಸ್ವಾಮೀಜಿ ತಿಳಿಸಿದರು.
ನಗರದ ಬಂಜಾರ ಸಮುದಾಯ ಭವನದಲ್ಲಿ ಬುಧವಾರ ನಡೆದ ಸಮುದಾಯದ ಶ್ರೀ ನಂದಾಮಸಂದ್ ಸೇವಾಲಾಲ್ ಸ್ವಾಮೀಜಿಯವರ ಪಟ್ಟಾಭೀಷೇಕ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಸಮುದಾಯಕ್ಕೆ ನಾನು ಮಾಡುವ ಕೆಲಸಗಳು ಎಲ್ಲರಿಗೂ ಗೂತ್ತಾಗಬೇಕಿದೆ.
ಸಮಾಜ ತುಂಬಾ ಕೆಳಗಡೆ ಇದೆ ಇದನ್ನು ಮೇಲೆತ್ತುವ ಕಾರ್ಯವನ್ನು ಮುಂದಿನ ದಿನದಲ್ಲಿ ಮಾಡಲಾಗುವುದು. ಈಗ ಎಲ್ಲರೂ ಈ ಸಮಾಜವನ್ನು ಹಿಯಾಳಿಸುತ್ತಿದ್ದಾರೆ. ನನ್ನ ಕೈಲಾದಷ್ಟು ಸಮಾಜವನ್ನು ಎತ್ತರಕ್ಕೆ ಕೊಂಡ್ಯೂಯಲಾಗುವುದು. ಸಮಾಜದ ಮುಖಂಡರನ್ನು ಸಹಾ ಸಹಬಾಗಿತ್ವಕ್ಕೆ ತೆಗೆದುಕೊಂಡು ಮುನ್ನೆಡೆಯಲಾಗುವುದು ನನ್ನ ಜೀವ ಇರುವವರೆಗೂ ಸಮಾಜವನ್ನು ಮುನ್ನಡೆಸುವ ಕಾರ್ಯವನ್ನು ಮಾಡಲಾಗುವುದು ಎಂದರು.
ಸಮಾಜದ ಮುಖಂಡರಾದ ಅನಂತ ಮೂರ್ತಿ ಮಾತನಾಡಿ, ಸ್ವಾಮೀಜಿ ಮುಂದಿನ ದಿನಮಾನದಲ್ಲಿ ಪ್ರಬುಧ್ದವಾಗಿ ಬೆಳೆದು ಸಮಾಜವನ್ನು ಪ್ರಗತಿಯತ್ತ ಕೊಂಡ್ಯೂಯುವ ಕಾರ್ಯವನ್ನು ಮಾಡಲಿ,ಶಿಮುಶರವರು ಉತ್ತಮವಾದ ಮರಿಯನ್ನು ನಮಗೆ ನೀಡಿದ್ದಾರೆ.
ಇದರ ಸದುಪಯೋಗ ಮುಂದಿನ ದಿನದಲ್ಲಿ ಸಮಾಜ ಪಡೆಯಬೇಕಿದೆ. ಇದುವರೆವಿಗೂ ನಮಗೆ ಗುರುಗಳು ಇರಲಿಲ್ಲ ಈಗ ಸಿಕ್ಕಿದ್ದಾರೆ. ಇನ್ನಾದರೂ ಸಜಾ ಸರಿದಾರಿಯಲ್ಲಿ ನಡೆಯಬೇಕಿದೆ ಎಂದರು.
ಮಾಧವನಾಯ್ಕ್ ಮಾತನಾಡಿ, ಈಗ ಮರಿಗಳಾಗಿರುವ ಸ್ವಾಮೀಜಿಯವರುಗೆ ಉತ್ತಮವಾದ ಶಿಕ್ಷಣವನ್ನು ಕೂಡಿಸುವುದರ ಮೂಲಕ ಸಮಾಜದ ಕಣ್ಣಾಗಿ ಮಾಡಬೇಕಿದೆ. ಮುಂದೆ ಇವರು ಬೆಳೆದು ದೊಡ್ಡವರಾದಾಗ ಬಂಜಾರ ಸಮುದಾಯವನ್ನು ಪ್ರಗತಿಯತ್ತ ಕೊಂಡ್ಯೂಯಬೇಕಿದೆ ಎಂದು ತಿಳಿಸಿದರು.
ಸ್ವಾಮೀಜಿ ವಿವರ : ಈಗ ಬಂಜಾರ ಸಮುದಾಯಕ್ಕೆ ಸ್ವಾಮಿಜಿಯಾಗಿರುವವರು ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ವಿವೇಕಾನಂದ ನಗರದ ಶ್ರೀನಿವಾಸ್ ನಾಯ್ಕ್ ಮತ್ತು ರಶ್ಮಿಬಾಯಿ ದಂಪತಿಗಳ ಮಗನಾಗಿದ್ದು, ಕಳೆದ ಮೂರು ವರ್ಷದ ಹಿಂದೆ ಸಮುದಾಯಕ್ಕೆ ಮರಿಯಾಗಿ ಮಾಡಲಾಗಿತ್ತು. ಇವರ ಮೂಲ ಹೆಸರು ನಂದ ಮಸೂದ್ (15) ಆಗಿದೆ.
ಕಾರ್ಯಕ್ರಮದಲ್ಲಿ ಬಂಜಾರ ಸಮುದಾಯದ ವಿವಿಧ ಮುಖಂಡರು ಭಾಗವಹಿಸಿದ್ದರು.