ಪಂಜಾಬ್: ಕಾಂಗ್ರೆಸ್ ನಾಯಕ, ಫೇಮಸ್ ಸಿಂಗರ್ ಸಿಧು ಮೂಸೆವಾಲಾ ಹತ್ಯೆ ಎಲ್ಲರನ್ನು ಭಯಗೊಳಿಸಿದೆ. ಈ ಹತ್ಯೆಯ ಹೊಣೆ ಹೊತ್ತಿದ್ದು ಜೈಲಿನಲ್ಲಿರುವಾತ. ಕೆನಡಾ ಗ್ಯಾಂಗ್ ಜೈಲಿನಲ್ಲಿದ್ದುಕೊಂಡೆ ಇಷ್ಟೆಲ್ಲಾ ಫ್ಲ್ಯಾನ್ ಮಾಡಿದ ಬಗ್ಗೆಯೂ ಪಂಜಾಬ್ ಜನರಲ್ಲಿ ಆತಂಕ ಉಂಟು ಮಾಡಿದೆ. ಜೊತೆಗೆ ಸಿಧು ಹತ್ಯೆಯ ಬೆನ್ನಲ್ಲೇ ಹೈಕೋರ್ಟ್ ಪಂಜಾಬ್ ಆಪ್ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಂಡಿದ್ದು, ಭದ್ರತೆ ವಾಪಾಸ್ ತೆಗೆದುಕೊಂಡವರಿಗೆ ಮತ್ತೆ ಭದ್ರತೆ ನೀಡಲು ಸೂಚಿಸಿದೆ.
ಈ ಬೆನ್ನಲ್ಲೆ ಸಿಧು ಹತ್ಯೆ ಹೇಗಾಯಿತು ಎಂಬ ಬಗ್ಗೆ ಬದುಕುಳಿದ ಸ್ನೇಹಿತ ಮಾಹಿತಿ ಬಿಚ್ಚಿಟ್ಟಿದ್ದಾರೆ. ನಾವೂ ಮತ್ತು ಸಿಧು ಹೊರಗೆ ಹೋಗುವ ಫ್ಲ್ಯಾನ್ ಮಾಡಿಕೊಂಡಿದ್ದೆವು. ನಾವೂ ಹೋಗುವ ಜಾಗ ಹತ್ತಿರದಲ್ಲೆ ಇದ್ದ ಕಾರಣ, ಬುಲೆಟ್ ಪ್ರೂಫ್ ಪಾರ್ಚೂನ್ ಕಾರು ಬಿಟ್ಟು ಮಹೀಂದ್ರಾ ಕಾರನ್ನೇ ತೆಗೆದುಕೊಂಡು ಹೋದೆವು. ಆ ಕಾರಿನಲ್ಲಿ ಐದು ಮಂದಿಗೆ ಜಾಗವಿಲ್ಲದ ಕಾರಣ ಇಬ್ಬರು ಬಾಡಿಗಾರ್ಡ್ ಅನ್ನು ಮನೆಯಲ್ಲಿ ಬಿಟ್ಟು ಹೊರೆಟೆವು. ಹೋಗುವಾಗ ಯಾರೋ ಫಾಲೋ ಮಾಡಿದಂತಾಯಿತು. ನಾವೂ ಹೆದರಿದ್ದೆವು. ಆಗ ಸಿಧು ಯಾರೋ ಅಭಿಮಾನಿಗಳಿರಬೇಕು, ಬೇರೆ ಸಮಸ್ಯೆಯಾದರೆ ನನ್ನ ಬಳಿ ಗನ್ ಇದೆ ಎಂದಾಗ ನಿಟ್ಟುಸಿರು ಬಿಟ್ಟೆವು.
ಕಾರಿನಲ್ಲಿ ಹೋಗುತ್ತಿದ್ದಾಗ ಒಂದೆರ ಕಾರಿನ ಮೂರು ಬದಿಯನ್ನು ಸುತ್ತುವರೆದು ಗುಂಡಿನ ದಾಳಿ ನಡೆಸಿದರು. ಸಿಧು ಮತ್ತು ನಮ್ಮ ಮೇಲೆ ನಾಲ್ಕೈದು ಜನ ಫೈರಿಂಗ್ ಮಾಡಿದರು. ಸಿಧು ದೇಹದೊಳಗೆ 25 ಗುಂಡುಗಳು ಹೋಗಿದ್ದವು. ಈ ದಾಳಿಯಲ್ಲಿ ನಾನು ಬದುಕುಳಿಧ್ದೆ ಹೆಚ್ಚು ಎಂದಿದ್ದಾರೆ. ಸಿಧು ಬಳಿ ಇದ್ದ ಗನ್ ಎರಡೇ ಗುಂಡು ಇದ್ದದ್ದು. ಆದ್ರೆ ದಾಳಿಕೋರರು 25 ಗುಂಡುಗಳನ್ನು ಸಿಧು ದೇಹಕ್ಕೆ ಹಿಡೆದಿದ್ದರು. ನಮ್ಮ ಕಾಲಿಗೂ ಗುಂಡು ಬಿದ್ದಿದೆ ಎಂದು ಸ್ನೇಹಿತ ಹೇಳಿಕೆ ನೀಡಿದ್ದಾನೆ.