ಚಳ್ಳಕೆರೆ, (ಜೂ.02) : ತಾಲ್ಲೂಕಿನ ರಾಮಜೋಗಿಹಳ್ಳಿ ಸೇರಿದಂತೆ ವಿವಿಧೆಡೆ ಟ್ರಾಕ್ಟರ್ ಟ್ರೈಲರ್ ಗಳನ್ನು ಕಳ್ಳತನ ಮಾಡುತ್ತಿದ್ದ ಆರು ಮಂದಿ ಕಳ್ಳರನ್ನು ಚಳ್ಳಕೆರೆ ಪೊಲೀಸರು ಬಂಧಿಸಿ, ಅವರಿಂದ 9 ಲಕ್ಷ ಮೌಲ್ಯದ ಟ್ರಾಕ್ಟರ್ ಟ್ರೈಲರ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ರಾಮಜೋಗಿಹಳ್ಳಿ ಗ್ರಾಮದ ಮಾರುತಿಯವರಿಗೆ ಸೇರಿದ ಸುಮಾರು 2,50,000 ರೂಪಾಯಿ ಮೌಲ್ಯದ ಟ್ರಾಕ್ಟರ್ ಟ್ರೈಲರನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆಂದು ನೀಡಿದ ದೂರಿನ ಮೇರೆಗೆ ಚಳ್ಳಕೆರೆ ಪೊಲೀಸರು ಪತ್ತೆ ಕಾರ್ಯದಲ್ಲಿ ನಿರತರಾಗಿದ್ದರು.
ಮೇ.31 ರಂದು ಬೆಳಿಗ್ಗೆ 4-30 ಗಂಟೆಗೆ ಚಳ್ಳಕೆರೆ ತಾಲ್ಲೂಕು ಕುರುಡಿಹಳ್ಳಿ
ಬಸ್ ನಿಲ್ದಾಣದ ಬಳಿ ಅನುಮಾನಸ್ಪದವಾಗಿ ಓಡಾಡಿಕೊಂಡಿದ್ದವರನ್ನು ವಿಚಾರಣೆ ನಡೆಸಿದಾಗ ರಾಮಜೋಗಿಹಳ್ಳಿ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಕಳ್ಳತನ ಮಾಡಿದ ಬಗ್ಗೆ ತಪ್ಪು ಒಪ್ಪಿಕೊಂಡಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಗಳನ್ನು,
1] ವಿಜಯ್ ತಂದೆ ಅಂಜಿನಮೂರ್ತಿ, 31 ವರ್ಷ, ಈಚಲನಾಗೇನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚಿತ್ರದುರ್ಗ ತಾಲ್ಲೂಕು,
2] ಪುಟ್ಟು ತಂದೆ ಬಸವರಾಜಪ್ಪ, 24 ವರ್ಷ, ಈಚಲನಾಗೇನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚಿತ್ರದುರ್ಗ ತಾಲ್ಲೂಕು,
3] ಸಂತೋಷ ತಂದೆ ಗೊರಪ್ಪ, 23 ವರ್ಷ, ಈಚಲನಾಗೇನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚಿತ್ರದುರ್ಗ ತಾಲ್ಲೂಕು
4] ಕಾಂತರಾಜ್ ತಂದೆ ಈಶ್ವರಪ್ಪ, 24 ವರ್ಷ, ಈಚಲನಾಗೇನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚಿತ್ರದುರ್ಗ ತಾಲ್ಲೂಕು
5] ಸುನೀಲ್ ತಂದೆ ಮಂಜಪ್ಪ, 22 ವರ್ಷ, ಈಚಲನಾಗೇನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚಿತ್ರದುರ್ಗ ತಾಲ್ಲೂಕು
6] ವಿನಯ್ ತಂದೆ ಪರಶುರಾಮ್ 23 ವರ್ಷ, ಈಚಲನಾಗೇನಹಳ್ಳಿ ಗ್ರಾಮ, ಕಸಬಾ ಹೋಬಳಿ, ಚಿತ್ರದುರ್ಗ ತಾಲ್ಲೂಕು
ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 9,00,000/- ರೂಪಾಯಿ
ಮೌಲ್ಯದ
1] ಟ್ರಾಕ್ಟ್ರರ್ ಇಂಜಿನ್
2] ಟ್ರಾಕ್ಟರ್ ಟ್ರೈಲರನ್ನು
ಹಾಗೂ ನೊಂದಣಿ ಸಂಖ್ಯೆಗಳಿಲ್ಲದ 02 ಟ್ರಾಕ್ಟರ್ ಟ್ರೈಲರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆ ನಡೆಸಲು
ಆರೋಪಿತರನ್ನು ಪತ್ತೆ ಮಾಡಲು ಮಾರ್ಗದರ್ಶನ ನೀಡಿ ಸಹಕರಿಸಿದ
ಚಳ್ಳಕೆರೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀಧರ್ ಮತ್ತು ಪೊಲೀಸ್ ನಿರೀಕ್ಷಕರಾದ ಜೆ.ಎಸ್ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಪಿ.ಎಸ್.ಐ ಸತೀಶ್ ನಾಯ್ಕ.ಕೆ ಹಾಗೂ ಸಿಬ್ಬಂದಿಗಳಾದ ಶ್ರೀನಿವಾಸ್,
ಹಾಲೇಶ, ಸತೀಶ್, ಮಂಜುನಾಥ ಮುಡಕೆ ಇವರುಗಳ ತಂಡವನ್ನು ಪೊಲೀಸ್ ಅಧೀಕ್ಷಕರಾದ ಕೆ.ಪರುಶುರಾಮ ಅವರು ಶ್ಲಾಘಿಸಿರುತ್ತಾರೆ.