ಚಿತ್ರದುರ್ಗ,(ಮೇ.29) : ಶ್ರೀ ಶಿವಶರಣ ಹರಳಯ್ಯ ಜಯಂತಿ, ಶ್ರೀಬಸವೇಶ್ವರ ಜಯಂತಿ, ಬುದ್ಧ ಜಯಂತಿ, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗು ಡಾ.ಬಾಬುಜಗಜೀವನರಾಮ್ ಜಯಂತಿ ಕಾರ್ಯಕ್ರಮವನ್ನು ಶ್ರೀಶಿವಶರಣ ಹರಳಯ್ಯ ಗುರುಪೀಠ, ಐಮಂಗಲದವತಿಯಿಂದ ಮೇ. 31ರಂದು ಮುರುಘಾಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಶಿವಶರಣ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಶ್ರೀಗಳು ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸಮಾರಂಭದಲ್ಲಿ ಮೂರು ಜನ ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗುವುದು.
ಅವರೆಂದರೆ ನಾದಬ್ರಹ್ಮ ಹಂಸಲೇಖ, ಮಲ್ಲಾಡಿಹಳ್ಳಿಯ ಅಮೃತ್ ಆರ್ಗಾನಿಕ್ ಫಟಿಲೈಸರ್‍ನ ಸಂಸ್ಥಾಪಕರಾದ ನಾಗರಾಜು ರವರಿಗೆ ಮಹಾ ಶಿವಶರಣ ಹರಳಯ್ಯ ಹಾಗೂ ಬಸವ ಟಿವಿಯ ಕೃಷ್ಣಪ್ಪರವರಿಗೆ ಮಹಾ ಶಿವಶರಣ ಶೀಲವಂತ ಮತ್ತು ಬೈಲೂರ್‍ನ ನಿಷ್ಕಲ್ ಮಂಟಪದ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಶ್ರೀಗಳಿಗೆ ಶ್ರೀ ಮಹಾ ಶಿವಶರಣ ಮಂತ್ರಿ ಮಧುವರಸಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಮಹಾನಾಯಕ ಧಾರವಾಹಿಯ ಜೀ ಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರ ರವರನ್ನು ಸನ್ಮಾನಿಸಲಾಗುವುದು ಎಂದು ಶ್ರೀಗಳು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಜಗದ್ಗುರು ಡಾ.ಶಿವಮೂರ್ತಿ ಮುರುಘಾ ಶರಣರು, ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿ, ಶ್ರೀಬಸವಲಿಂಗ ಮಹಾಸ್ವಾಮೀಜಿ, ಚಿತ್ತರಗಿ ಶ್ರೀಶಾಂತವೀರ ಸ್ವಾಮೀಜಿ, ಶ್ರೀಬಸವ ಮಡಿವಾಳ ಮಾಚಿದೇವ ಮಹಾಸ್ವಾಮೀಜಿ, ಶ್ರೀಬಸವಪ್ರಭು ಮಹಾಸ್ವಾಮೀಜಿ, ವಿರಕ್ತಮಠ ದಾವಣಗೆರೆ ಸೇರಿದಂತೆ ಇತರೆ ಸ್ವಾಮೀಜೀಗಳು ವಹಿಸಲಿದ್ದಾರೆ.
ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶೀ ಸಿ.ಟಿ.ರವಿ, ಸಾರಿಗೆ ಸಚಿವ ಶ್ರೀರಾಮುಲು, ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಪ್ರವಾಸೋದ್ಯಮಿ ಸಚಿವ ಆನಂದ್ ಸಿಂಗ್ ಮುಜರಾಯಿ ಇಲಾಖೆಯ ಶ್ರೀಮತಿ ಶಶಿಕಲಾ ಜೊಲ್ಲೆ ಸೇರಿದಂತೆ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಮಹಾ ಶಿವಶರಣ ಹರಳಯ್ಯ ಮೂವಿಸ್ ರವರಿಂದ ಶ್ರೀ ಮಹಾ ಶಿವಶರಣ ಹರಳಯ್ಯ ಮಕ್ಕಳ ಪ್ರಧಾನವಾದ ಚಲನ ಚಿತ್ರಕ್ಕೆ ಮುಹೂರ್ತ ನಡೆಯಲಿದೆ.
ಗೋಷ್ಟಿಯಲ್ಲಿ ಜಿ.ಪಂ.ಮಾಜಿ ಸದಸ್ಯ ಪ್ರಕಾಶ್‍ಮೂರ್ತಿ, ಸಾಕ್ಷಿ ವೆಂಕಟೇಶ್, ಕಣ್ಮೇಶ್ ಹಾಗೂ ಮೂರಾರ್ಜಿ ಉಪಸ್ಥಿತರಿದ್ದರು.