ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ್ ಪತ್ತೆಯಾದ ಬಗ್ಗೆ ಸೆಷನ್ ನ್ಯಾಯಾಲಯ ನೇಮಿಸಿದ್ದ ಸಮಿತಿಯೂ ವಿಡಿಯೋ ಸರ್ವೆ ಮಾಡಿ, ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಪ್ರಕರಣ ಸಂಬಂಧ ಇಂದಿನಿಂದ ವಿಚಾರಣೆ ಆರಂಭಿಸಿರುವ ಜಿಲ್ಲಾ ಸತ್ರ ನ್ಯಾಯಾಲಯ ಮುಸ್ಲಿಂ ಹಾಗೂ ಹಿಂದೂ ಪರ ವಕೀಲರ ವಾದ ಪ್ರತಿವಾದವನ್ನು ಆಲಿಸಿದೆ.
ಶಿವಲಿಂಗ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಮುಸ್ಲಿಂರ ಅರ್ಜಿ ವಿಚರಣೆ ನಡೆಸಿದ ಕೋರ್ಟ್, ನ್ಯಾ. ಅಜಯ್ ಕೃಷ್ಣ ವಿಶ್ವೇಶ್ವ ನೇತೃತ್ವದ ಪೀಠದಲ್ಲಿ ವಿಚಾರಣೆ ಆರಂಭವಾಗಿದೆ. ಸುಮಾರು ಒಂದು ಗಂಟೆಗಳ ಕಾಲ ವಾದ ಪ್ರತಿವಾದ ನಡೆದಿದೆ.
ಮೊದಲು ಮುಸ್ಲಿಂ ಪರ ವಕೀಲರು ವಾದ ಆರಂಭಿಸಿದ್ದು, ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎನ್ನಲಾಗಿದೆ. ಆದರೆ ಅದಕ್ಕೆ ಯಾವ ಅಸ್ತಿತ್ವವೂ ಇಲ್ಲ. ಇದು ಜನರಲ್ಲಿ ಗೊಂದಲ ಉಂಟು ಮಾಡಿದೆ. ಅದು ಶಿವಲಿಂಗದ ಅಸ್ತಿತ್ವವೆಂದು ಸಾಬೀತಾಗುವವರೆಗೂ ಯಾವುದಕ್ಕೂ ಅನುಮತಿಸಬಾರದು ಎಂದು ವಾದ ಮಂಡಿದರು.
ಇದಕ್ಕೆ ಪ್ರತಿವಾದ ಮಂಡಿಸಿದ ಹಿಂದೂ ಪರ ವಕೀಲರು, ಮಸೀದಿಯೊಳಗೆ ಪತ್ತೆಯಾದ ಶಿವಲಿಂಗವನ್ನು ಹಾಳು ಮಾಡಿದ್ದಾರೆ. ಅದರ ಸ್ವರೂಪವನ್ನೇ ಬದಲಿಸಿದ್ದಾರೆ. ಲಿಂಗವನ್ನು ಕೊರೆದು ಕಾರಂಜಿ ರೂಪದಲ್ಲಿ ಕಾಣುವಂತೆ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಎರಡು ಕಡೆಯ ವಾದ ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದೆ.