ತುಮಕೂರು: ಇಂಗ್ಲೀಷ್ ಎಂಬುದು ಕೆಲವೊಂದಿಷ್ಟು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ. ಎಷ್ಟೇ ಅರ್ಥ ಮಾಡಿಕೊಳ್ಳಲು ಯತ್ನಿಸಿದರು ಅರ್ಥವಾಗುವುದಿಲ್ಲ. ಇಂಗ್ಲೀಷ್ ಅಂತಾನೆ ಅಲ್ಲ. ಕೆಲವೊಂದು ವಿಷಯಗಳಲ್ಲಿ ಕೆಲವೊಂದಿಷ್ಟು ವಿದ್ಯಾರ್ಥಿಗಳು ವೀಕ್ ಇರುತ್ತಾರೆ. ಈ ರೀತಿಯ ಭಯಕ್ಕೆ ಹೆದರಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ತುಮಕೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಆ ವಿದ್ಯಾರ್ಥಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಇಂಗ್ಲೀಷ್ ಓದಲು, ಬರೆಯಲು ಕಷ್ಟಪಡುತ್ತಿದ್ದ. ಅದೇ ಕಾರಣಕ್ಕೆ ಶಾಲೆಗೆ ಹೋಗುವುದಿಲ್ಲ ಎಂದು ಅಳುತ್ತಾ ಕೂತಿದ್ದನಂತೆ.
ಆತನಿಗೆ ಮನೆಯವರೆಲ್ಲಾ ಸೇರಿ ಸಮಾಧಾನ ಮಾಡಿದ್ದಾರೆ. ಓದಿದರೆ ಯಾವುದು ಕಷ್ಟವಾಗಲ್ಲ, ಶಾಲೆಗೆ ಹೋಗು ಎಲ್ಲಾ ಸರಿ ಹೋಗುತ್ತೆ ಎಂದು ಬುದ್ದಿ ಮಾತು ಹೇಳಿದ್ದಾರೆ. ಆದರೆ ಇದ್ಯಾವುದನ್ನು ಕೇಳದ ಆ ವಿದ್ಯಾರ್ಥಿ, ಶಾಲೆಗೂ ಹೋಗದೆ ಮನೆಯಲ್ಲಿಯೇ ಉಳಿದು, ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದರಿಂದ ಮನೆಯವರು ಗಾಬರಿಗೊಂಡಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.