ಮಂಗಳೂರು: ಇಡೀ ದೇಶದ ಗಮನ ಸೆಳೆದಿದ್ದ ವಿಚಾರ ಹಿಜಾಬ್ ಗಲಾಟೆ. ಉಡುಪಿಯ ಸರ್ಕಾರಿ ಕಾಲೇಜು ಒಂದರಲ್ಲಿ ಶುರುವಾದ ಈ ಗಲಾಟೆ ನೋಡ ನೋಡುತ್ತಲೇ ಇಡೀ ರಾಜ್ಯ ಉದ್ಧಗಲಕ್ಕೂ ಹರಡಿತ್ತು. ಕೋರ್ಟ್ ಮೆಟ್ಟಿಲು ಏರಿತ್ತು. ಬಳಿಕ ಕೋರ್ಟ್ ಶಾಲಾ ಕಾಲೇಜುಗಳಿಗೆ ಧಾರ್ಮಿಕ ವಸ್ತ್ರ ಬಳಸಬಾರದು ಎಂಬ ಸೂಚನೆಯನ್ನು ನೀಡಿತ್ತು.
ಅದಾದ ಬಳಿಕವೂ ಹಿಜಾಬ್ ಹಾಕಿ ಶಾಲೆಗೆ ಹೋಗುತ್ತಿದ್ದ ಘಟನೆಗಳು ಕಂಡು ಬಂದವೂ. ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಗಾಗಿ ಪರೀಕ್ಷೆಗೆ ಗೈರಾದರು. ಪರೀಕ್ಷೆ, ಫಲಿತಾಂಶದ ನಡುವೆ ತಣ್ಣಗಾಗಿದ್ದ ಹಿಜಾಬ್ ವಿವಾದ ಇದೀಗ ಮತ್ತೆ ಶುರುವಾಗಿದೆ. ಈ ಬಾರಿ ಮಂಗಳೂರಿನಲ್ಲಿ ಆರಂಭವಾಗಿದೆ.
ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಈ ಕಾಲೇಜಿಗೆ ಹಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತ್ತಿದ್ದಾರೆ. ಹೀಗಾಗಿ ನಮಗೆ ಕೇಸರಿ ಶಾಲು ಹಾಕಲು ಅನುಮತಿ ನೀಡಿ ಎಂದು ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ.