ಜ್ಞಾನವ್ಯಾಪಿ ಮಸೀದಿಯೊಳಗೆ ಕಳೆದ ಮೂರು ದಿನದಿಂದ ಸಮೀಕ್ಷೆ ನಡೆಯುತ್ತಿದೆ. ಈ ವೇಳೆ ಮಸೀದಿಯೊಳಗೆ ಹಿಂದೂ ದೇವರುಗಳ ವಿಗ್ರಹವೂ ಪತ್ತೆಯಾಗಿದೆ. ಈ ಸಂಬಂಧ ಇಂದು ವಾರಣಾಸಿ ಕೋರ್ಟ್ ತೀರ್ಪು ನೀಡಲಿದೆ. ಈ ತೀರ್ಪಿನ ಸಂಬಂಧ ಎಲ್ಲರ ಚಿತ್ತ ನೆಟ್ಟಿದೆ.
ವಾರಾಣಾಸಿ ಸಿವಿಲ್ ಕೋರ್ಟ್ ಸೂಚನೆ ಮೇರೆಗೆ ಮಸೀದಿಯಲ್ಲಿ ಮೂರು ದಿನಗಳ ಕಾಲ ಸಂಪೂರ್ಣವಾಗಿ ಸರ್ವೆ ಮಾಡಲಾಗಿದೆ. ಅಜಯ್ ಮಿಶ್ರಾ ನೇತೃತ್ವದ ಟೀಂ ಸೆಷನ್ ಕೋರ್ಟ್ ಗೆ ಸಾಕ್ಷಿಗಳನ್ನು ಸಲ್ಲಿಕೆ ಮಾಡಲಿದ್ದಾರೆ.
ಮಸೀದಿಯ ಮುಂದೆ ಕೊಳದಲ್ಲಿ ಶಿವಲಿಂಗ ಕೂಡ ಪತ್ತೆಯಾಗಿದೆ ಎನ್ನಲಾಗಿದೆ. 12 ಅಡಿ ಎತ್ತರದ ಶಿವಲಿಂಗ ಈ ಹಿಂದೆ ಪೂಜೆಗೆ ಒಳಪಡುತ್ತಿತ್ತು. ಮಸೀದಿಯ ಎದುರುಗಡೆ ಇರುವ ಹಳ್ಳದ ರೀತಿಯಲ್ಲಿ ಪತ್ತೆಯಾಗಿದೆ. ಶೃಂಗಾರ ಗೌರಿ, ಹಿಂದೂ ವಿಗ್ರಹಗಳು ಪತ್ತೆಯಾಗಿದೆ. ಇದು ಹಿಂದೂಪರ ದೇವಾಲಯಕ್ಕೆ ಸಂಬಂಧಿಸಿದ ಎಲ್ಲಾ ಕುರುಹುಗಳು ಸಿಕ್ಕಿದೆ.
ಸದ್ಯ ಎಲ್ಲಾ ಸಾಕ್ಷಿಗಳನ್ನು ವಿಡಿಯೋ ಮಾಡಿ ಕೋರ್ಟ್ ಗೆ ಸಲ್ಲಿಸಲಾಗುತ್ತಿದೆ. ಈ ವಿಡಿಯೋ ಆಧರಿಸಿ ಕೋರ್ಟಗ ಯಾವ ರೀತಿಯ ತೀರ್ಪು ನೀಡುತ್ತೆ ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಮಸೀದಿಯಲ್ಲಿ ಕಮಲದ ಹೂ ಗಳು, ಗಂಟೆ, ಕಂಸಾಳೆ ಪ್ರತ್ಯಕ್ಷವಾಗಿದೆ. ಜೊತೆಗೆ ನಿನ್ನೆ ನಂದಿ ವಿಗ್ರಹ ಕೂಡ ಸಿಕ್ಕಿದೆ. ಹೀಗಾಗಿ ಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ.