ಬೆಂಗಳೂರು: ಪಿಎಸ್ಐ ಹಗರಣದಿಂದ ನೇಮಕಾತಿ ರದ್ದಾಗಿದೆ. ಈ ಸಂಬಂಧ ಹಲವು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಕಷ್ಟಪಟ್ಟು ಓದಿದ್ದೇವೆ, ಯಾರೋ ಮಾಡಿದ ತಪ್ಪಿನಿಂದ ಕಷ್ಟಪಟ್ಟು ಓದಿದವರಿಗೂ ಅನ್ಯಾಯ ಮಾಡಬೇಡಿ ಎಂದು ವಿದ್ಯಾರ್ಥಿಗಳು ಈಗಾಗಲೇ ಮುಖ್ಯಮಂತ್ರಿಗಳಿಗೂ ಮನವಿ ಮಾಡಿದ್ದಾರೆ.
ಜೊತೆಗೆ ಇತ್ತೀಚೆಗೆ ಪ್ರಧಾನಿ ಮೋದಿಯವರಿಗೂ ಪತ್ರ ಬರೆದು ಕಷ್ಟ ತೋಡಿಕೊಂಡಿದ್ದಾರೆ. ನಮಗೆ ನ್ಯಾಯ ಕೊಡಿಸದೆ ಹೋದಲ್ಲಿ ನಾವೂ ಟೆರರಿಸ್ಟ್ ಗಳ ಜೊತೆ ಸೇರುತ್ತೇವೆ ಎಂದು ರಕ್ತದಲ್ಲಿ ಪತ್ರ ಬರೆದಿದ್ದರು. ಈ ಪತ್ರವನ್ನು ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಗುತ್ತಿಗೆದಾರರು ಪತ್ರಗಳನ್ನು ಬರೆದರು, ಸಂತೋಷ್ ಪಾಟೀಲ್ ಪತ್ರ ಬರೆದರು, ಈಗ ಪಿಎಸ್ಐ ಅಕ್ರಮದಿಂದ ನೊಂದವರು ಪತ್ರ ಬರೆದಿದ್ದಾರೆ. ಸಂತೋಷ್ ಪಾಟೀಲ್ ಜೀವ ಬಿಟ್ಟರೂ ಜಗ್ಗದ ಬಿಜೆಪಿ, ರಕ್ತಪತ್ರಕ್ಕೆಲ್ಲ ಬಗ್ಗುವುದೇ?. ಬಿಜೆಪಿ ಆಳ್ವಿಕೆಯಿಂದಾಗಿ ಯುವಕರು ಬದುಕಿನ ಭರವಸೆ ಕಳೆದುಕೊಳ್ಳುತ್ತಿರುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.