ಚಿಕ್ಕಮಗಳೂರು: ಈಗಾಗಲೆ ವಿವಾದಿತ ಕೇಂದ್ರವಾಗಿ ದತ್ತಪೀಠ ನಿರ್ಮಾಣವಾಗಿದೆ. ಹಿಂದೂ ಹಾಗೂ ಮುಸ್ಲಿಂ ಯಾರು ಪೂಜೆ ಮಾಡುವ ಆಗಿಲ್ಲ ತೀರ್ಪು ಬರುವವರೆಗೂ. ಆದರೆ ದತ್ತಪೀಟಡದಲ್ಲಿ ಇದೀಗ ಮುಸ್ಲಿಂ ಸಮುದಾಯದವರು ಅಲ್ಲಿ ಪೂಜೆ ಮಾಡಿ, ಮಾಂಸಾಹಾರ ಮಾಡಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಮುಸ್ಲಿಂ ಸಮುದಾಯದವರು ಅಲ್ಲಿ ಗೋರಿ ಪೂಜೆ ಮಾಡಿ, ಬಿರಿಯಾನಿ ಮಾಡಿ ಸವಿದಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂದಲತೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ಟ್ರಕ್ ಗಳಲ್ಲಿ, ಗಾಡಿಗಳಲ್ಲಿ ದತ್ತಪೀಠಕ್ಕೆ ಸಾಕಷ್ಟು ಜನ ಮುಸ್ಲಿಂ ಸಮುದಾಯದವರು ಬಂದಿದ್ದಾರೆ. ಇಲ್ಲಿ ಹಿಂದೂಗಳ ದೇವರಿದ್ದಾನೆ ಎಂಬ ಭಾವನಾತ್ಮಕತೆಯೂ ಇದೆ. ಹೀಗಾಗಿ ಕೋರ್ಟ್ ತೀರ್ಪು ನೀಡುವವರೆಗೆ ಎರಡು ಸಮುದಾಯಗಳು ಯಾವುದೇ ಧಾರ್ಮಿಕ ಸೇವೆ ಮಾಡುವಂಗಿಲ್ಲ.
ಇಷ್ಟೆಲ್ಲಾ ಕಾನೂನುಗಳಿದ್ದರು ಮುಸ್ಲೀಂ ಸಮುದಾಯದವರು ಈ ರೀತಿ ನಡೆದುಕೊಂಡಿರುವುದಕ್ಕೆ ಹಿಂದೂಪರ ಸಂಘಟನೆಗಳು ಆಕ್ರೋಶಗೊಂಡಿದ್ದಾರೆ. ನಾವೇನಾದರೂ ಅಲ್ಲಿ ಕಾರ್ಯಕ್ರಮ ಮಾಡಿದರು ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುತ್ತಾರೆ. ಆದರೆ ಮುಸ್ಲಿಂರು ಇಲ್ಲಿ ಬಂದು ಇಷ್ಟೆಲ್ಲಾ ಮಾಡಿದರು ಸಂಬಂಧಪಟ್ಟ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಅಷ್ಟೇ ಅಲ್ಲ ಕಾನೂನನ್ನು ಗಾಳಿಗೆ ತೂರಿದ್ದಾರೆ ಎಂದು ಹಿಂದೂಪರ ಸಂಘಟನೆಗಳು ಆಕ್ರೋಶ ಹೊರ ಹಾಕಿದ್ದಾರೆ.