ಅರಮನೆಯ ವೈಭೋಗ ತೊರೆದ
ಜ್ಞಾನಮಾರ್ಗವ ಹುಡುಕುತ ಹೊರಟ
ಬೋಧಿವೃಕ್ಷದಡಿ ಧ್ಯಾನ ಮಗ್ನನಾದ
ಜೀವನದ ಸತ್ಯದ ಸಾಕ್ಷಾತ್ಕಾರ ಪಡೆದ
ಆಸೆಯೇ ದುಃಖದ ಮೂಲವೆಂದ
ನೋವನು ಮರೆವ ದಾರಿ ತೋರಿದ
ಸಾವಿಲ್ಲದ ಮನೆಯ ಸಾಸಿವೆ ತಾರೆಂದ
ಭವಬಂಧನಗಳನು ಬಿಡಿಸಿದ
ಅಹಿಂಸೆಯ ಮಾರ್ಗ ತೋರಿಸಿದ
ಪ್ರೀತಿ ವಾತ್ಸಲ್ಯಗಳ ಜಗಕೆ ಹಂಚಿದ
ಸತ್ಯಾನ್ವೇಷಣೆಯ ಹಾದಿಯಲಿ ಗೆದ್ದ
ಜನಮಾನಸದಲ್ಲಿ ಗೌತಮ ಬುದ್ಧನಾದ
ಸುಜಾತ ಪ್ರಾಣೇಶ್, ಚಿತ್ರದುರ್ಗ 9986153163