ಬೆಂಗಳೂರು: ಮೇ 19 ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ ಮಾಡುವುದಾಗಿ ಸಚಿವ ನಾಗೇಶ್ ಅವರು ಘೋಷಣೆ ಮಾಡಿದ್ದಾರೆ. ಈ ಸಂಬಂಧ ಅವರ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳು http://karresults.nic.in ವೆಬ್ ಸೈಟ್ ನಲ್ಲಿಯೂ ತಮ್ಮ ಫಲಿತಾಂಶ ವೀಕ್ಷಿಸಬಹುದು. ಈ ಬಾರಿಯೂ ಸರ್ಕಾರ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಫೇಲ್ ಆಗುವವರ ಸಂಖ್ಯೆ ಕಡಿಮೆ ಮಾಡಲಿದೆ. ಉತ್ತೀರ್ಣಕ್ಕೆ ಬೆರಳಿಕೆಯ ಅಂಕ ಕಡಿಮೆಯಿದ್ದವರಿಗೆ ಮೂರು ವಿಷಯದಲ್ಲಿ ಗ್ರೇಸ್ ಮಾರ್ಕ್ಸ್ ಸಿಗಲಿದೆ.
ಈ ವರ್ಷ ಸುಮಾರುವ8,73,846 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದರು. ಮೇ 19 ಫಲಿತಾಂಶ ಸಿಗಲಿದ್ದು ಕಾತುರದಿಂದಲೇ ಕಾಯುತ್ತಿದ್ದಾರೆ.