ಚಿತ್ರದುರ್ಗ, (ಮೇ.09): ಪಿ.ಎಸ್.ಐ. ನೇಮಕಾತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಈಗಿನ ಸಿಐಡಿಗಿಂತ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಬೇಕು, ಸರ್ಕಾರ ನೇಮಕಾತಿಯನ್ನು ರದ್ದು ಮಾಡಿರುವ ಆದೇಶವನ್ನು ವಾಪಾಸ್ಸು ಪಡೆದು ನಿಜವಾದ ಅಭ್ಯರ್ಥಿಗಳನ್ನು ನೇಮಕ ಮಾಡುವಂತೆ ಸರ್ಕಾರವನ್ನು ಜಿ.ಎನ್.ಮಲ್ಲಿಕಾರ್ಜನಪ್ಪ ಒತ್ತಾಯಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೇಮಕಾತಿಯಲ್ಲಿ ಆಕ್ರಮ ನಡೆದಿರುವುದು ಸರ್ಕಾರಕ್ಕೆ ಗೋತ್ತಾಗಿದೆ. ಇದರಿಂದ ತನಿಖೆಯನ್ನು ಪ್ರಾರಂಭ ಮಾಡಿರುವುದು ಸರಿ ಆದರೆ ಸಿಐಡಿ ಮತ್ತು ಸಿಓಡಿಗಳು ಸರ್ಕಾರದ ಅಧೀನದಲ್ಲಿನ ಸಂಸ್ಥೆಗಳಾಗಿವೆ ಇದರಲ್ಲಿ ರಾಜಕಾರಣಿಗಳು ಮೂಗು ತೂರಿಸಿ ತಮ್ಮ ಮೇಲಿನ ಆಪಾದನೆಯಿಂದ ತಪ್ಪಿಸಿಕೊಳ್ಳಬಹುದು ಇದರಿಂದ ಇದರ ತನಿಖೆಯನ್ನು ಹಾಲಿ ನ್ಯಾಯಾಧೀಶರಿಂದ ನಡೆಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈಗಾಗಲೇ ಪಿಎಸ್.ಐ. ನೇಮಕಾತಿಗೆ ಸಂಬಂಧಪಟ್ಟಂತೆ ಪರೀಕ್ಷೆ ನಡೆದು ಫಲಿತಾಂಶವು ಹೊರ ಬಂದಿದೆ. ಇದರಲ್ಲಿ ಹಲವಾರು ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಉತ್ತೀಣರಾಗಿ ಕೆಲಸವನ್ನು ಪಡೆಯುವ ಹಂತದಲ್ಲಿದ್ದು ಈಗ ಸರ್ಕಾರ ಈ ನೇಮಕಾತಿಯನ್ನು ರದ್ದು ಮಾಡಿರುವುದು ಸರಿಯಲ್ಲ, ಈ ಪ್ರಕರಣದಲ್ಲಿ ಬಾಗಿಯಾಗಿರುವವರನ್ನು ಹೊರತು ಪಡೆಸಿ ಬೇರೆ ಅಭ್ಯರ್ಥಿಗಳನ್ನು ನೇಮಕ ಮಾಡಬೇಕಿದೆ. ಯಾರೊಬ್ಬರಿಗಾಗಿ ಎಲ್ಲರನ್ನು ಹಾಳು ಮಾಡುವುದು ಸರಿಯಲ್ಲ, ಇದರ ಬಗ್ಗೆ ಸರ್ಕಾರ ಆಲೋಚನೆ ಮಾಡಬೇಕಿದೆ ಎಂದು ಸರ್ಕಾರವನ್ನು ಮಲ್ಲಿಕಾರ್ಜನಪ್ಪ ಒತ್ತಾಯಿಸಿದ್ದಾರೆ.
ಈ ಪ್ರಕರಣದಲ್ಲಿ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂಬುದು ಎಲ್ಲರ ಅಭಿಪ್ರಾಯವಾಗಿದೆ ಆದರೆ ಇದಕ್ಕಾಗಿ ಬೇರೆ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದು. ಇಲ್ಲಿ ಕಾನೂನು ಸರಿಯಾದ ರೀತಿಯಲ್ಲಿ ಪಾಲನೆಯಾಗಬೇಕಿದೆ. ಬರೀ ಇದೊಂದೆ ನೇಮಕಾತಿ ಅಲ್ಲ ಬೇರೆ ಬೇರೆ ನೇಮಕಾತಿಯಲ್ಲೂ ಸಹಾ ಅಕ್ರಮದ ವಾಸನೆ ಕಂಡು ಬರುತ್ತಿದೆ. ಇದರ ಬಗ್ಗೆಯೂ ಸಹಾ ತನಿಖೆಯಾಗಬೇಕಿದೆ. ಕಳೆದ 2-3 ದಶಕಗಳಲ್ಲಿ ಈ ರೀತಿಯಾದ ಅಕ್ರಮಗಳಲ್ಲಿ ತಪ್ಪಿತರ್ಸಥರು ಎಂದು ಕಂಡು ಬಂದವರಿಗೆ ಯಾವುದೇ ರೀತಿಯ ಶಿಕ್ಷೆಯಾಗಿಲ್ಲ ಎನ್ನುವುದು ಇಲ್ಲಿ ಗಮನಾರ್ಹವಾಗಿದೆ. ಇದರಲ್ಲಿ ರಾಜಕೀಯ ಪ್ರವೇಶವಾದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುವುದಿಲ್ಲ. ಇದರ ಬಗ್ಗೆ ಸರ್ಕಾರ ತೀವ್ರವಾಗಿ ಕ್ರಮ ತೆಗೆದುಕೊಳ್ಳಬೇಕಿದೆ ಎಂದ ಆಗ್ರಹಿಸಿದರು.
ಯಾವುದೇ ಹುದ್ದೆ ನೇಮಕಾತಿ ನಂತರ ಮರು ಪರೀಶಿಲನೆಗಾಗಿ ಅಲ್ಲಿ ಓವರ್ ಸೆಲ್ ಸಮಿತಿ ಇರಬೇಕು, ನೇಮಕಾತಿ ಮಾಡಿದಂತ ಆರ್ಭರ್ಥಿಗಳ ನೇಮಕಾತಿ ಸರಿಯಾಗಿ ಇದ್ದೇಯೇ ಇಲ್ಲವೇ ಎಂದು ಅವರು ಪೂರ್ಣ ಪ್ರಮಾಣದಲ್ಲಿ ಮರು ಪರೀಶಿಲನೆಯನ್ನು ಮಾಡುವುದರ ಮೂಲಕ ಅವರಿಮದ ಒಪ್ಪಿಗೆ ಸಿಕ್ಕ ಮೇಲೆ ಸಂಬಂಧಪಟ್ಟವರಿಗೆ ನೇಮಕಾತಿಯ ಆದೇಶವನ್ನು ನೀಡುವಂತೆ ಕಾರ್ಯವಾದಾಗ ಯಾವುದೇ ರೀತಿಯಲ್ಲಿಯೂ ಸಹಾ ಅಕ್ರಮವಾಗುವುದಿಲ್ಲ ಎಂದು ಮಲ್ಲಿಕಾರ್ಜನಪ್ಪ ಅಭಿಪ್ರಾಯಪಟ್ಟರು.
ಗೋಷ್ಟಿಯಲ್ಲಿ ರೈತ ಮುಖಂಡರಾದ ನುಲೇನೂರು ಶಂಕರಪ್ಪ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ತಾಲ್ಲೂಕು ಅಧ್ಯಕ್ಷ ಧನಂಜಯ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಎಐಯುಟಿಯುಸಿಯ ರವಿಕುಮಾರ್ ಭಾಗವಹಿಸಿದ್ದರು.