ಚಿತ್ರದುರ್ಗ,(ಮೇ.03): ಕ್ರಾಂತಿಕಾರಿ, ಭಕ್ತಿಭಂಡಾರಿ, ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಸರ್ಕಾರಿ ಕಲಾ ಕಾಲೇಜಿನಲ್ಲಿ ಮಂಗಳವಾರ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಶಿವಪ್ಪನವರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಹನ್ನೆರಡನೆ ಶತಮಾನದಲ್ಲಿಯೇ ಸಮಾನತೆಯ ಸಂದೇಶವನ್ನು ಇಡಿ ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕ ಎಂದು ಗುಣಗಾನ ಮಾಡಿದರು.
ಪ್ರೊ.ಡಾ.ಹೆಚ್.ಬಸವರಾಜ್ ಮಾತನಾಡಿ ಕಾಯಕವೇ ಕೈಲಾಸ ಎನ್ನುವ ಸಂದೇಶವನ್ನು 12 ನೆ ಶತಮಾನದಲ್ಲಿಯೇ ವಿಶ್ವಕ್ಕೆ ಸಾರಿದ ಸಮಾನತೆಯ ಹರಿಕಾರ ಜಗಜ್ಯೋತಿ ಬಸವೇಶ್ವರರು ಅನುಭವ ಮಂಟಪದ ಮೂಲಕ ಮಹಿಳೆಯರಿಗೂ ಸಮಾನತೆಯನ್ನು ಕಲ್ಪಿಸಿದ್ದರು. ಹಾಗಾಗಿ ವಿಶ್ವದಲ್ಲಿಯೇ ಪ್ರಥಮ ಸಮಾನತೆಯ ಹೋರಾಟಗಾರ ಎಂದು ಬಸವಣ್ಣನವರನ್ನು ಗುರುತಿಸಲಾಗಿತ್ತು ಎಂದು ಹೇಳಿದರು.
ಡಾ.ಶಿವಾನಂದಯ್ಯ, ಡಾ.ಶಾಂರಾಜ್ ಟಿ, ಪ್ರೊ.ಜಿ.ಡಿ.ಸುರೇಶ್, ಡಾ.ಎಸ್.ಲೇಪಾಕ್ಷಿ ಇನ್ನು ಮೊದಲಾದವರು ಬಸವಜಯಂತಿಯಲ್ಲಿ ಭಾಗವಹಿಸಿದ್ದರು.