ಬೆಂಗಳೂರು : ರಾಜ್ಯಾದ್ಯಂತ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆಯುತ್ತಿರು ಸಹ ಶಿಕ್ಷಕರ ಹುದ್ದೆಗೆ ಬಡ್ತಿ ವಿಚಾರವಾಗಿ ಯಾವುದೇ ಗೊಂದಲಗಳಿಗೆ ಒಳಗಾಗಬಾರದು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮನವಿ ಮಾಡಿದ್ದಾರೆ.
ಈ ಸಮಯದಲ್ಲಿ ವಿಕಲಚೇತನ ಶಿಕ್ಷಕರು ವೇತನ ಪ್ರಮಾಣ ಪತ್ರ ತರಬೇಕು,
ವೈದ್ಯಕೀಯ ಪ್ರಮಾಣ ಪತ್ರ ತರಬೇಕು ಹಾಗೂ ಮೂರು ಜನ ಸಮಿತಿಯ ಸದಸ್ಯರ ವೈದ್ಯಕೀಯ ಪ್ರಮಾಣದ ಪತ್ರ ತರಬೇಕು ಎಂಬ ವಿವಿಧ ಗೊಂದಲಗಳನ್ನು ಕೆಲವರು ಉಂಟು ಮಾಡುತ್ತಿದ್ದು, ಈಗಾಗಲೇ ನೇಮಕಾತಿ ಸಮಯದಲ್ಲಿ ಅಂಗವೈಕಲ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ಪ್ರಮಾಣ ಪತ್ರವನ್ನು ನೀಡಲಾಗಿರುತ್ತದೆ.
ಅಲ್ಲದೇ ಅದರ ಆಧಾರದ ಮೇಲೆ ನಮ್ಮ ವೇತನದಲ್ಲಿ ಮೂಲ ವೇತನದ ಶೇಕಡಾ 6 ರಷ್ಟು ಸಂಚಾರಿ ಭತ್ಯೆಯನ್ನು ನೀಡುವುದರ ಜೊತೆಗೆ ನಮ್ಮ ಸೇವೆಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ನಮ್ಮ ಸೇವಾ ಪುಸ್ತಕದಲ್ಲಿ ಇರುತ್ತವೆ.ಅದರ ಅನ್ವಯ ನಮಗೆ ಸೌಲಭ್ಯಗಳನ್ನು ನೀಡಲಾಗಿದೆ.
ಆದರೆ ಪ್ರಸ್ತುತವಾಗಿ ಕೇವಲ ಬಡ್ತಿ ಪಡೆಯುವ ಸಮಯದಲ್ಲಿ ವಿವಿಧ ರೀತಿಯ ಈ ಮೇಲಿನ ದಾಖಲೆಯನ್ನು ಕೇಳುತ್ತಾರೆ ಎಂಬ ವಿಷಯಗಳು ವಿಕಲಚೇತನ ಶಿಕ್ಷಕರಿಗೆ ಗೊಂದಲ ಉಂಟು ಮಾಡಿವೆ.ಆದರೆ ವಿಕಲಚೇತನ ಶಿಕ್ಷಕರು ಯಾವುದೇ ಗೊಂದಲ ಉಂಟು ಮಾಡಿಕೊಳ್ಳಬಾರದು.
ಬಡ್ತಿ ನೀಡುವ ಸಮಯದಲ್ಲಿ ವಿಕಲಚೇತನ ಶಿಕ್ಷಕರಿಗೆ ಮೊದಲನೇಯ ಆದ್ಯತೆ ನೀಡಬೇಕು ಎಂಬ ಆದೇಶವಿದೆ. ಅದರಂತೆ ಮೊದಲನೆಯ ಆದ್ಯತೆ ನೀಡಿದ್ದಲ್ಲಿ ಜೊತೆಗೆ ಸ್ಥಳ ಆಯ್ಕೆ ಮಾಡಿಕೊಳ್ಳುವ ಸಮಯದಲ್ಲಿ ಅಂಗವೈಕಲ್ಯಗೆ ಸಂಬಂಧಿಸಿದಂತೆ ಯಾವುದಾದರೂ ದಾಖಲೆ ಕೊಟ್ಟರೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಯಾವ ಜಿಲ್ಲೆಯಲ್ಲಿ ಹೇಳಿದರೆ ತಕ್ಷಣವೇ ನನಗೆ ಕರೆ (ಮೊ.98456 09362) ಮಾಡಿದರೆ ನಮಗೆ ನ್ಯಾಯ ಸಿಗುವವರೆಗೆ ಬಂದ್ ಮಾಡಿಸಲಾಗುತ್ತದೆ.
ಅಲ್ಲದೇ ಬಡ್ತಿ ಸ್ಥಳ ಆಯ್ಕೆಯಲ್ಲಿ ಇಂತಹದೇ ದಾಖಲೆ ಕೊಡಬೇಕು ಎಂಬ ಆದೇಶ ಎಲ್ಲಿಯೂ ಇಲ್ಲಾ ಎಂಬ ವಿಷಯವನ್ನು ವಿಕಲಚೇತನ ಶಿಕ್ಷಕರು ಅರಿಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.