ಚಿಕ್ಕಮಗಳೂರು: ಪಿಎಸ್ಐ ಹಗರಣದ ಬಗ್ಗೆ ಮಾತನಾಡಿದ ಸಿಟಿ ರವಿ ಅವರು, ವಾಸನೆ ಕಂಡು ಬಂದ ತಕ್ಷಣ ತನಿಖೆಗೆ ಸಿಎಂ ಮತ್ತು ಗೃಹಮಂತ್ರಿ ಇಬ್ಬರು ಆಗ್ರಹಿಸಿದ್ದಾರೆ. ತನಿಖೆ ನಡೆಯುತ್ತಿದೆ. ಯಾರೇ ಪಾಲುದಾರರಿರಲಿ ಕಳ್ಳರು ಕಳ್ಳರೆ. ಕಾಂಗ್ರೆಸ್ ಇರಲಿ ಬಿಜೆಪಿಯಿರಲಿ ಮತ್ತೊಂದು ಪಾರ್ಟಿಯವರಿರಲಿ ಯಾರಿದ್ದರು ಕೂಡ ಅಕ್ರಮ ನಡೆಸಿದವರು ಅಕ್ರಮ ನಡೆಸಿದವರೇ. ಬಿಜೆಪಿ ಮುಖವಾಡವನ್ನು ಹಾಕಿಕೊಳ್ಳುತ್ತಾರೆ, ಕಾಂಗ್ರೆಸ್ ಮುಖವಾಡವನ್ನು ಹಾಕಿಕೊಳ್ಳುತ್ತಾರೆ. ಈ ಪ್ರಕರಣ ಸಂಬಂಧ ನಮ್ಮ ಸರ್ಕಾರ ನಿಷ್ಪಕ್ಷಪಾತವಾದ ತನಿಖೆ ನಡೆಸುತ್ತಿದೆ. ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಜರುಗಿಸುತ್ತಾರೆ.
ಇನ್ನು ಹಿಜಾಬ್ ಧರಿಸಲು ಅವಕಾಶ ನೀಡದೆ ಇರೋದಕ್ಕೆ ಪರೀಕ್ಷೆಯನ್ನೇ ಧಿಕ್ಕರಿಸಿರುವ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದ್ದು, 99% ಜನ ಕೋರ್ಟ್ ಆದೇಶವನ್ನು ಪಾಲಿಸಿದ್ದಾರೆ. ಯೂನಿಫಾರ್ಮ್ ಒಪ್ಪಿಕೊಂಡು ಪರೀಕ್ಷೆ ಬರೆದಿದ್ದಾರೆ. ಒಂದ್ ಪರ್ಸೆಂಟ್ ಜನರಿಗೆ ಕೇವಲ ಈ ವಿಷಯ ಜೀವಂತವಾಗಿಡಲು ಬರುತ್ತಾರೆ. ಕೋರ್ಟ್ ಆದೆಶವಿದೆ, ಸರ್ಕಾರ ಸಾರ್ವಜನಿಕವಾಗಿಯೂ ಹೇಳಿದೆ, ಹೊರಡಿಸಿದೆ. ಇದಾದ ಮೇಲೆ ನಾಟಕ ಯಾಕೆ ಮಾಡುತ್ತಾರೆ. ಪರೀಕ್ಷೆ ದೊಡ್ಡದು ಎಂಬುವವರು ಬಂದು ಪರೀಕ್ಷೆ ಬರೆದಿದ್ದಾರೆ. ಹಿಜಾಬ್ ದೊಡ್ಡದು ಎನ್ನುವವರು ಕ್ಯಾಮೆರಾ ಮುಂದೆ ನಾಟಕವಾಡ್ತಿದ್ದಾರೆ.
ಇನ್ನು ಹುಬ್ಬಳ್ಳಿ ಕಲ್ಲು ತೂರಾಟದ ಬಗ್ಗೆ ಮಾತನಾಡಿ, ಇದು ಅಚನಾಕ್ಕಾಗಿ ಆಗಿರೋ ಸಂಗತಿಗಳಲ್ಲಿ. ಕೆಜಿಹಳ್ಳಿ ಡಿಜೆಹಳ್ಳಿ ಗಲಾಟೆಗೂ ಹುಬ್ಬಳ್ಳಿ ಗಲಾಟೆಗೂ ಸಾಮ್ಯತೆ ಇರುವುದು ಅರ್ಥವಸಗುತ್ತಿದೆ. ಇದು ಮಾತ್ರವಲ್ಲ ರಾಜಸ್ಥಾನ, ಜಾರ್ಖಂಡ್, ಛತ್ತಿಸ್ ಘಡ ದಲ್ಲೂ ರಾಮನವಮಿ, ಹನುಮ ಮೆರವಣಿಗೆಯ ವೇಳೆ ದುರುದ್ದೇಶ ಪೂರಕವಾಗಿ ಕಲ್ಲು ತೂರಾಟ ನಡೆಸಿ, ಗಲಭೆ ಎಬ್ಬಿಸಿದ್ದಾರೆ. ಅವರು ಜಿನ್ನಾ ಮಾನಸಿಕತೆಯಲ್ಲಿ ಇರುವುದು ಸ್ಪಷ್ಟವಾಗುತ್ತಿದೆ ಎಂದು ಸಿಟಿ ರವಿ ಹೇಳಿದ್ದಾರೆ.