ಬಳ್ಳಾರಿ: ಪಿಎಸ್ಐ ಹಗರಣದ ಬಗ್ಗೆ ಮಾತನಾಡಿದ ಸಚಿವ ಶ್ರೀರಾಮುಲು, ನಮ್ಮ ಮುಖ್ಯಮಂತ್ರಿ ಈಗಾಗಲೇ ತನಿಖೆಗೆ ಸೂಚಿಸಿದ್ದಾರೆ. ಅದನ್ನು ಕಂಡು ಹಿಡಿದಿದ್ದು ನಾವೇ. ಕಾಂಗ್ರೆಸ್ ಅವರೇನು ಖಂಡಿಡಿದಿಲ್ಲ. ಅವರು ಸರ್ಕಾರದ ಆಡಳಿತದಲ್ಲಿದ್ದಾಗ ಇಂಥ ತನಿಖೆ ಮಾಡುವಂಥ ಕೆಲಸ ಮಾಡಿಲ್ಲ. ಅಲ್ಲಿ ತಪ್ಪಾಗಿರುವ ಕಾರಣ ನಾವೇ ಕಂಡಿಡಿದು, ನಾವೇ ತನಿಖೆ ನಡೆಸುತ್ತಿದ್ದೇವೆ. ನಾವೂ ಮಾಡಿದ್ದನ್ನು ಅವರು ಮಾಡಿದ್ದು ಎಂದು ಹೇಳಿದರೆ ಅದಕ್ಕೆ ಅರ್ಥವಿಲ್ಲ.
ಕಲ್ಯಾಣ ಕರ್ನಾಟಕದಲ್ಲಿದ್ದಂ ಎಲ್ಲಾ ವಿಚಾರದಲ್ಲಿ ನಮ್ಮ ಭಾಗದ ಜನತೆಗೆ ಯಾವುದೇ ರೀತಿಯ ಅನ್ಯಾಯವಾಗಲೂ ಬಿಡುವುದಿಲ್ಲ. ಅದು ವಿದ್ಯಾರ್ಥಿಗಳಾಗಿರಬಹುದು, ಜನತೆಯಾಗಿರಬಹುದು. ಮೊನ್ನೆ ಮೊನ್ನೆ ನೋಡ್ತಾ ಇದ್ದೀರ ಸೋಮಶೇಖರ ರೆಡ್ಡಿಯವರು ಮೆಡಿಕಲ್ ಕಾಲೇಜು ಪಿಜಿ ಕೋಟಾದಲ್ಲಿ ನಮಗೆ ಅನ್ಯಾಯವಾದಂತ ಸಂದರ್ಭದಲ್ಲಿಯೂ ಸೋಮಶೇಖರೆಡ್ಡಿಯವರ ಜೊತೆ ಮಾತಾಡಿ ಮಕ್ಕಳನ್ನು ಕಾಲೇಜಿಗೆ ಸೇರಿಸುವ ಕೆಲಸವಾಗಿದೆ..
ಆರಗ ಜ್ಞಾನೇಂದ್ರ ಬಗ್ಗೆ ಮಾತನಾಡಿದ ಸಚಿವ ಶ್ರೀರಾಮುಲು, ನನಗೆ ಇವತ್ತು ಕಾಂಗ್ರೆಸ್ ಪಕ್ಷದ ನಾಯಕರೆಲ್ಲ ಸೇರಿಕೊಂಡು, ಎಲೆಕ್ಷನ್ ವರುಷ. ರನ್ನಿಂಗ್ ರೇಸ್ ನಲ್ಲಿ ಗುರಿ ಮುಟ್ಟೋದಕ್ಕೆ ವೇಗವಾಗಿ ಓಡುತ್ತಾನಲ್ಲ ಆ ರೀತಿ ಛಲ ಇಟ್ಟುಕೊಂಡು ಭಾರತೀಯ ಜನತಾ ಪಾರ್ಟಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಎಲೆಕ್ಷನ್ ಹತ್ತಿರವಾಗುತ್ತಿರುವಾಗ ಡಿಜೆಹಳ್ಳಿ, ಕೆಜಿ ಹಳ್ಳಿ ಘಡನೆ ನೋಡಿದ್ದೀವಿ. ಹುಬ್ಬಳ್ಳಿಯಲ್ಲಿಯೂ ಇದೆ ರೀತಿಯಾಗಿದೆ. ಚುನಾವಣೆ ಹತ್ತಿರವಾಗಿರುವ ಕಾರಣ ರಾಜ್ಯಾದ್ಯಂತ ಗಲಭೆ ಸೃಷ್ಟಿ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.