Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಈಶ್ವರಪ್ಪನ ವಿರುದ್ಧ ಕೈ ನಾಯಕ ಬೃಹತ್ ಪ್ರತಿಭಟನೆ : ಎಲ್ಲೆಲ್ಲಿ ಜೋರಾಗಿದೆ ಇಲ್ಲಿದೆ ಮಾಹಿತಿ

Facebook
Twitter
Telegram
WhatsApp

ಬೆಂಗಳೂರು: ಚುನಾವಣೆ ಹತ್ತಿರ ಇರುವಾಗಲೇ ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಗೆ ಸ್ಟ್ರಾಂಗ್ ಅಸ್ತ್ರವೊಂದು ಸಿಕ್ಕಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವನ್ನಪ್ಪಿದ್ದು, ಈಶ್ವರಪ್ಪ ಅವರೇ ಕಾರಣ ಎಂದು ಹೇಳಿದ್ದೇ ತಡ ಈಶ್ಚರಪ್ಪ ಬಂಧನಕ್ಕೆ ಬೃಹತ್ ಪ್ರತಿಭಟನೆ ನಡೆಸುತ್ತಿದೆ.

ಈಶ್ವರಪ್ಪ ಅರೆಸ್ಟ್ ಆಗಲೇ ಬೇಕು ಎಂದು ಹಠ ಹಿಡಿದಿರುವ ಕಾಂಗ್ರೆಸ್ ನಾಯಕರು, 40% ಕಮಿಷನ್ ವಿಚಾರದಲ್ಲಿ ಇನ್ನು ಎರಡು ವಿಕೆಟ್ ಬೀಳಿಸುವ ಟಾರ್ಗೆಟ್ ಇಟ್ಟುಕೊಂಡಿದ್ದಾರೆ. ಬಳ್ಳಾರಿ, ಶಿವಮೊಗ್ಗ, ರಾಮನಗರ, ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈಶ್ವರಪ್ಪ ಮುಖವಾಡ ಧರಿಸಿ ಅಣಕು ಪ್ರದರ್ಶನ ನಡೆಸುತ್ತಿದ್ದಾರೆ.

ಹೊಸ ಪೇಟೆಯ ವಿಜಯನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಚಿತ್ರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಪಿಸ್ತೂಲ್ ಹಿಡಿದುಕೊಂಡು, ಈಶ್ವರಪ್ಪ ಕೈಗೆ ಬೇಡಿ ಹಾಕಿ ಬಂಧಿಸುವಂತೆ ಅಣಕುಪ್ರದರ್ಶನ ನಡೆಸಿದ್ದಾರೆ.

ಇನ್ನು ಶಿವಮೊಗ್ಗದಲ್ಲೂ ಕಾಂಗ್ರೆಸ್ ನಾಯಕರು ಪ್ರತಿಭಟಿಸುತ್ತಿದ್ದಾರೆ. ಜಿಲ್ಲಾಧ್ಯಕ್ಷ ಸುಂದರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈಶ್ವರಪ್ಪ ಅವರ ಮುಖವಾಡ ಧರಿಸಿ, ಕೈಗೆ ಹಗ್ಗ ಹಾಕಿ ಎಳೆದುಕೊಂಡು ಹೋಗುವಂತೆ ಅಣಕು ಪ್ರದರ್ಶನ ಮಾಡಿದ್ದಾರೆ.

ರಾಮನಗರದ ಡಿಸಿ ಕಚೇರಿ ಮುಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ‌ ನೇತೃತ್ವದಲ್ಲಿ ಮೆರವಣಿಗೆ ನಡೆದಿದೆ. ಈಶ್ವರಪ್ಪನನ್ನು ಬಂಧಿಸಲೇಬೇಕೆಂದು ಒತ್ತಾಯಿಸುತ್ತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ, ಗುರುವಾರ ರಾಶಿ ಭವಿಷ್ಯ -ಮೇ-2,2024 ಸೂರ್ಯೋದಯ: 05:53, ಸೂರ್ಯಾಸ್ತ : 06:32 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ ,

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

ಆದಷ್ಟು ಬೇಗ ಸತ್ಯ ಹೊರಬರಲಿದೆ ಎಂದು ಪೋಸ್ಟ್ ಹಾಕಿ ಕಮೆಂಟ್ ಆಫ್ ಮಾಡಿದ ಪ್ರಜ್ವಲ್ ರೇವಣ್ಣ..!

ಬೆಂಗಳೂರು: ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಸೀದಾ ಜರ್ಮನಿ ಪ್ರವಾಸಕ್ಕೆ ಹೊರಟಿದ್ದರು. ವಿಚಾರ ದೊಡ್ಡದಾದ ಕೂಡಲೇ ಎಚ್ಚೆತ್ತ ರಾಜ್ಯ ಸರ್ಕಾರ, ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿತ್ತು. ಎಸ್ಐಟಿ

error: Content is protected !!