Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜೀನಾಮೆ ಪಡೆಯುವುದಲ್ಲ ಬಂಧಿಸಿ, ಜೈಲಿಗಟ್ಟಿ : ಕಾಂಗ್ರೆಸ್ ಟ್ವೀಟ್

Facebook
Twitter
Telegram
WhatsApp

ಬೆಂಗಳೂರು: ಬರೀ ಈಶ್ವರಪ್ಪನವರ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವುದಲ್ಲ, ಬಂಧಿಸಿ ಜೈಲಿಗಟ್ಟಬೇಕು, ಭ್ರಷ್ಟಾಚಾರ ನಿಗ್ರಹದ ಪ್ರಕರಣ ದಾಖಲಾಗಬೇಕು. ಇದ್ಯಾವುದನ್ನೂ ಮಾಡದೆ ಸರ್ಕಾರ ರಕ್ಷಣೆಗೆ ನಿಂತರೆ ಹಿಂದೂ ಕಾರ್ಯಕರ್ತ ಸಂತೋಷ್ ಪಾಟೀಲ್‌ಗೆ ಅವಮಾನಿಸಿದಂತೆ, ದೇಶದ ಕಾನೂನಿನ ಮೇಲಿನ ಜನರ ನಂಬಿಕೆಯನ್ನು ಅಪಹಾಸ್ಯ ಮಾಡಿದಂತಾಗುತ್ತದೆ.

ಮೊನ್ನೆ – ನೂರಕ್ಕೆ ನೂರು ರಾಜೀನಾಮೆ ಕೊಡುವುದಿಲ್ಲ
ನಿನ್ನೆ – ರಾಜೀನಾಮೆ ನೀಡುತ್ತೇನೆ. ಇದು @ikseshwarappa ಅವರ ಸದಾರಮೆ ನಾಟಕದ ಡೈಲಾಗ್‌ಗಳು!. ಕೇವಲ ರಾಜೀನಾಮೆಯ ಮೂಲಕ ಪ್ರಕರಣವನ್ನು ತಿಳಿಗೊಳಿಸುವ ಹುನ್ನಾರವಿದು, ರಾಜಿನಾಮೆಯಷ್ಟೇ ಸಾಲದು ಭ್ರಷ್ಟಾಚಾರ, ಕೊಲೆ ಎರಡೂ ಪ್ರಕರಣಗಳಲ್ಲಿ ಬಂಧನವಾಗಲೇಬೇಕು.

ಸಂತೋಷ್ ಮಾಡಿದ ಕಾಮಗಾರಿಗೆ ಕಾರ್ಯದೇಶವೇ ಇರಲಿಲ್ಲ, ಸರ್ಕಾರಕ್ಕೂ ಕಾಮಗಾರಿಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದರು ಬಿಜೆಪಿಗರು, ಆದರೆ ಈಗ ಮುರುಗೇಶ್ ನಿರಾಣಿ ಸಂಪೂರ್ಣ ಮೊತ್ತವನ್ನು ಬಿಡುಗಡೆ ಮಾಡಿಸುತ್ತೇವೆ ಎನ್ನುವ ಮೂಲಕ ತಪ್ಪನ್ನು ಒಪ್ಪಿಕೊಳ್ಳತೊಡಗಿದ್ದಾರೆ. ಅಂದರೆ ಇಷ್ಟು ದಿನ ಈಶ್ವರಪ್ಪ ತಡೆಹಿಡಿದಿದ್ದರು ಎಂದಾಯಿತು.

ರಾಜೀನಾಮೆ ಘೋಷಣೆ ಮಾಡಿ ಅಧಿಕೃತವಾಗಿ ನೀಡಲು ಸಾಕಷ್ಟು ಸಮಯ ತೆಗೆದುಕೊಂಡ ಈಶ್ವರಪ್ಪ ತುರಾತುರಿಯಲ್ಲಿ 29 ಪಿಡಿಓಗಳನ್ನ ವರ್ಗಾವಣೆ ಮಾಡಿದ್ದಾರೆ. ಈ ತುರಾತುರಿಯ ವರ್ಗಾವಣೆಯಲ್ಲಿ ಎಷ್ಟು ಪರ್ಸೆಂಟ್ ಹಗರಣವಿದೆ?. ಇನ್ನುಳಿದ ಗುತ್ತಿಗೆದಾರರಿಂದ ಬಾಕಿಯಿದ್ದ 40% ವಸೂಲಿಗಾಗಿಯೇ ಇಷ್ಟು ಸಮಯ ತಗೆದುಕೊಂಡಿದ್ದಾ ಎಂದು ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

error: Content is protected !!