ವಿಜಯಪುರ: ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾರೆ. ಅದು ತಪ್ಪು ಇದೆಯೋ ಇಲ್ಲವೋ ತನಿಖೆ ಆದ ಮೇಲೆ ತಿಳಿಯುತ್ತೆ.ಪೂರ್ವಾಪರ ತಿಳಿಯದೆ ಕಾಂಗ್ರೆಸ್ ನವರು ಬಹಳ ಮೂರ್ಖತನದ ಹೇಳಿಕೆ ಕೊಡುತ್ತಿದ್ದಾರೆ. ಎಸ್ಟಿಮೇಟ್ ಆಗದೆ, ವರ್ಕ್ ಆರ್ಡರ್ ಇಲ್ಲದೆ ಹೋದರೆ ಅಷ್ಟು ಕೋಟಿ ಕೆಲಸ ಹೇಗೆ..? ನಾನೇ ಎಂಎಲ್ಎ ಇದ್ದೀನಿ ನಮ್ಮ ಅಧಿಕಾರಿಗಳು ಐದು ಲಕ್ಷದ ಕೆಲಸ ಮಾಡಿ ಅಂದರು ಅವರು ಮಾಡುವುದಿಲ್ಲ. ಮೊದಲು ಅಪ್ರೂವ್ ಆಗಬೇಕು. ರೆಕಾರ್ಡ್ ನಲ್ಲಿ ಕಾಣಿಸಬೇಕು ಅಂತಾರೆ.
ಅಲ್ಲಿನ ಕಾಂಗ್ರೆಸ್ ಶಾಸರು ಯಾರು..? ಶ್ರೀಮತಿ ಹೆಬ್ಬಾಳ್ಕರ್ ಅವರು. ನಾನು ಕೇಳುತ್ತೀನಿ. ಐದು ಕೋಟಿಯಲ್ಲಿ ನಿಮ್ಮ ಮತ ಕ್ಷೇತ್ರದಲ್ಲಿ ಕೆಲಸ ಆಗಿಬಿಡುತ್ತೇನು..? ಏನು ಮಾಡುತ್ತಾರೆ. ಡಿಕೆ ಶಿವಕುಮಾರ್ ಜೊತೆ ಸೇರಿ ಬಾಯಿಗೆ ಬಂದಂಗೆ ಮಾಡೋದಲ್ಲ. ಎಂಎಲ್ಎ ಆಗಿ ಏನ್ ಮಾಡ್ತೀರಿ..? ಎಂದು ಪ್ರಶ್ನಿಸಿದ್ದಾರೆ.
ಇದೆ ವೇಳೆ ಕಾಂಗ್ರೆಸ್ ಹಾಗೂ ತಮ್ಮ ಪಕ್ಷದಲ್ಲೆ ಇರುವ ಹಲವರ ಮೇಲೆ ಗರಂ ಆದ ಯತ್ನಾಳ್, ಸಿಡಿ ಮಾಡಿಸೋದು, ಎಡಿಟ್ ಮಾಡಿಸೋದು ಬ್ಲಾಕ್ ಮೇಲ್ ಮಾಡಿಸುವಂತ ಹಲ್ಕಾ ಕೆಲಸ ಮಾಡುತ್ತಿದ್ದಾರೆ. ಲೋಫರ್ ಗಳು ಇದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲೂ ಇಂಥದ್ದೊಂದು ಟೀಂ ಇದೆ. ಮಹಾ ಕಳ್ಳ ನಮ್ಮಲ್ಲಿರುವ ಕಳ್ಳನಿಂದ ಇಂಥದ್ದೊಂದು ಕೆಲಸವಾಗುತ್ತಿದೆ. ಕರ್ನಾಟಕದ ರಾಜ್ಯ ಮುಂಚೆ ಮಾದರಿ ರಾಜ್ಯವಾಗಿತ್ತು. ಈಗ ಸಿಡಿ ಫ್ಯಾಕ್ಟರಿ ಆಗಿದೆ ಎಂದು ಆಕ್ರೋಶಗೊಂಡಿದ್ದಾರೆ.