ವಿಜಯಪುರ: ಕಮೀಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ನಿನ್ನೆ ಉಡುಪಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದರಲ್ಲೂ ಡೆತ್ ನೋಟ್ ನಲ್ಲಿ ಸಚಿವ ಈಶ್ವರಪ್ಪ ಅವರೇ ನೇರ ಕಾರಣ ಅಂತ ಕೂಡ ತಿಳಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ನಾಯಕರು ಈಶ್ಚರಪ್ಪ ಬಂಧನಕ್ಕೆ ಒತ್ತಾಯಿಸಿದ್ದಾರೆ. ಈ ಮಧ್ಯೆ ಸೋಮಲಿಂಗ ಸ್ವಾಮೀಜಿ ಈಶ್ಚರಪ್ಪ ಪರ ಬ್ಯಾಟ್ ಬೀಸಿದ್ದಾರೆ.
ಇದು ಈಶ್ವರಪ್ಪ ವಿರುದ್ಧ ನಡೆದ ಷಡ್ಯಂತ್ರ. ಗುತ್ತಿಗೆದಾರ ಸಂತೋಷ್ ನಮ್ಮ ನೆರೆಯ ವ್ಯಕ್ತಿ ಆತ್ಮಹತ್ಯೆ. ಆತ್ಮಹತ್ಯೆ ಮಾಡಿಕೊಳ್ಳುವುದಿದ್ದರೆ ನಮ್ಮ ಜಿಲ್ಲೆಯಲ್ಲಿಯೇ ಮಾಡಿಕೊಳ್ಳಬೇಕಿತ್ತು. ಈಶ್ವರಪ್ಪ ಅವರು 49 ವರ್ಷದಿಂದ ರಾಜಕಾರಣದಲ್ಲಿ ಮಾಡುತ್ತಿದ್ದಾರೆ. ಈಶ್ವರಪ್ಪ ಸಾಹೇಬರು ಅಂಥವರಲ್ಲ ಎಂದಿದ್ದಾರೆ.
ಇದು ಈಶ್ವರಪ್ಪ ವಿರುದ್ಧ ನಡೆದ ಷಡ್ಯಂತ್ರ. ಇಂಥ ಷಡ್ಯಂತ್ರ ನಡೆಯುತ್ತೆ ಅನ್ನೋದನ್ನ ಕನಸು ಮನಸಿನಲ್ಲೂ ಊಹಿಸಿರಲಿಲ್ಲ. ಸಂತೋಷ್ ಜೀವಂತವಾಗಿದ್ದು ಹೋರಾಡಬೇಕಿತ್ತು. ಅನ್ಯಾಯ ಹೇಳಿಕೊಂಡಿದ್ದರೆ ತಪ್ಪು ಒಪ್ಪು ಗೊತ್ತಾಗುತ್ತಿತ್ತು. ಸತ್ತ ವ್ಯಕ್ತಿಯ ಸುತ್ತ ಸಾವಿರಾರು ಪ್ರಶ್ನೆಗಳು ಎದ್ದಿವೆ. ಇದರಲ್ಲಿ ಯಾರ್ಯಾರು ತಮ್ಮ ಬೇಲೆ ಬೇಯಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಸಂತೋಷ್ ನಮ್ಮ ನೆರೆಯ ಜಿಲ್ಲೆಯವರೇ ಏನು ನೊಂದುಕೊಂಡಿದ್ದಾನೋ? ಏನಾಯ್ತೋ ದೇವರಿಗೆ ಗೊತ್ತು. ಒಂದು ವೇಳೆ ಆತ್ಮಹತ್ಯೆ ಮಾಡಿಕೊಳ್ಳೋದೆ ಆಗಿದ್ರೆ ತಮ್ಮ ಜಿಲ್ಲೆಯಲ್ಲೇ ಮಾಡಿಕೊಳ್ಳಬೇಕಿತ್ತು ಎಂದಿದ್ದಾರೆ.