ವಿಜಯಪುರ: ಬದುಕನ್ನು ಕಟ್ಟುವಂತ ಕೆಲಸವಾಗಬೇಕು. ಆದರೆ ಇಲ್ಲಿ ಅಭಿವೃದ್ಧಿ ಇಲ್ಲ, ಸರ್ಕಾರದ ಹಣ ಇಲ್ಲ. ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕೋದಕ್ಕೆ ಇಂತ ವಿಚಾರಗಳನ್ನು ತರುತ್ತಿದ್ದಾರೆ. ಹಸಿದವನಿಗೆ ಅನ್ನ ಬೇಕು, ರೈತರಿಗೆ ವಿದ್ಯುತ್ ಮತ್ತು ನೀರು ಬೇಕು. ವ್ಯಾಪಾರಸ್ಥರು ಕಂಗಲಾಗಿದ್ದಾರೆ. ಮಧ್ಯಮವರ್ಗದವರು ಪೆಟ್ರೋಲ್, ಡಿಸೇಲ್ ರೇಟ್ ಹೆಚ್ಚಳದಿಂದ ಕಂಗೆಟ್ಟಿದ್ದಾರೆ ಎಂದಿದ್ದಾರೆ.
ಇನ್ನು ಮುಂಚೆ ಅಭಿವೃದ್ಧಿ ಕಡೆಗೆ ಹೋಗುತ್ತಿತ್ತು. ನೆಹರು, ಶಾಸ್ತ್ರಿ, ನರಸಿಂಹ ರಾವ್ ಮತ್ತು ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಇವರೆಲ್ಲ ಭದ್ರ ಆರ್ಥಿಕ ಅಡಿಪಾಯವಾಕಿದ್ದರು. ಆದರೆ ಇವಾಗ ಎಲ್ಲವನ್ನು ಹಾಳು ಮಾಡುತ್ತಿದ್ದಾರೆ. ಮುಂದೆ ಇದರಿಂದ ಬಹಳ ಕೆಟ್ಟದಾಗುತ್ತೆ. ಈಗ ಶ್ರೀಲಂಕಾದ ಪರಿಸ್ಥಿತಿ ಏನಾಗಿದೆ. ಆ ಸ್ಥಿತಿಗೆ ಭಾರತವನ್ನು ತಳ್ಳುತ್ತಿದ್ದಾರೆ.
ಎಲ್ಲವೂ ಅತಿರೇಕವಾಗಿದೆ. ನೀವೂ ನಿಮ್ಮ ಮತದ ಆಸೆಗಾಗಿ ಮತಗಳ ಕ್ರೂಢಿಕರಣಕ್ಕಾಗಿ ಅನೇಕ ವಿಚಾರಗಳನ್ನು ತರುತ್ತಿದ್ದೀರಿ. ಹಿಜಾಬ್, ಹಲಾಲ್, ಆಜಾನ್, ಕಾಶ್ಮೀರಿ ಫೈಲ್ಸ್ ಇನ್ನು ಏನೇನೋ ಇದೆ. ಇಲ್ಲಿ ಬೆಂಕಿ ಹಚ್ಚುವ ಕೆಲಸ ಹೆಚ್ಚಿದೆ. ಸಾಮರಸ್ಯವನ್ನು ಕೆಡಿಸಿದ ಮೇಲೆ ನಿಮಗೆ ತಿರುಗುಬಾಣವಾಗುತ್ತೆ. ಅಷ್ಟೆ ಅಲ್ಲ ದೇಶದ ಮೇಲೆ ರಾಜ್ಯದ ಮೇಲೆ ಪರಿಣಾಮ ಬೀರುತ್ತೆ. ಎಲ್ಲಿ ಸಾಮರಸ್ಯ ಇರಲ್ಲ ಅಲ್ಲಿ ಹೂಡಿಕೆದಾರರು ಬರಲ್ಲ.
ನಮ್ಮಲ್ಲಿ ಕೋಟ್ಯಾಂತರ ಹೂಡಿಕೆ ಮಾಡಿರೋ ಕಂಪನಿಗಳಿವೆ. ಆದ್ರೆ ಹಿಂಗೆ ಗಲಭೆಗಳು ಸೃಷ್ಟಿಯಾದರೆ ಆರ್ಥಿಕ ಹೊಡೆತಕ್ಜೆ ಕಾರಣವಾಗುತ್ತೆ. ಹೀಗಾಗಿ ಎಲ್ಲವನ್ನು ಬಗೆಹರಿಸುವ ಕೆಲಸವಾಗಬೇಕು. ಕೆಲವು ವಿಚಾರಗಳು ಬಂದಾಗ ಕೂತು ಚರ್ಚಿಸಿ ಆ ವಿಚಾರವನ್ನು ಬಗೆಹರಿಸಬೇಕಿದೆ ಎಂದು ಮಾಜಿ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.