ಬೆಂಗಳೂರು: ಸದ್ಯ ನಾನು ಅನುಶ್ರೀಯವರ ತಂದೆ ಎಂದು ಸಂಪತ್ ಎಂಬ ವ್ಯಕ್ತಿ ಹೇಳಿಕೊಂಡಿದ್ದು, ಈ ವಿಚಾರವನ್ನ ಶಿವಲಿಂಗೇಗೌಡ ಎಂಬಾತ ಅನುಶ್ರೀಯವರ ಗಮನಕ್ಕೂ ತಂದಿದ್ದಾರೆ. ಇದೇ ವಿಚಾರವಾಗಿ ಶಿವಲಿಂಗೇಗೌಡರ ವಿರುದ್ಧ ಬೇಸರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಅನುಶ್ರೀಯವರ ತಂದೆ ಎಂದು ಹೇಳುತ್ತಿರುವ ಸಂಪತ್ ಸದ್ಯ ಪಾಶ್ವವಾಯುವಿನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊನೆ ಬಾರಿಗೆ ಮಕ್ಕಳನ್ನು ನೋಡಬೇಕೆಂಬ ಆಸೆ ವ್ಯಕ್ತಪಡಿಸಿದ್ದಾರೆ. ಅವರಿಗೆ ಕೆಲಸ ಕೊಟ್ಟು, ಆಸ್ಪತ್ರೆ ಸೇರಿಸಿದ ಶಿವಲಿಂಗೇಗೌಡ ಅವರು ಕೇಳಿದಾಗ ಹೆಂಡತಿ, ಮಕ್ಕಳ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಅದನ್ನ ಶಿವಲಿಂಗೆಗೌಡ ಅವರು ಮಾಧ್ಯಮದ ಮುಂದೆ ಹಂಚಿಕೊಂಡಿದ್ದರು.
ಇದೇ ವಿಚಾರಕ್ಕೆ ನಿರೂಪಕಿ ಅನುಶ್ರೀ ಶಿವಲಿಂಗೇಗೌಡ ವಿರುದ್ಧ ಬೇಸರ ಮಾಡಿಕೊಂಡಿದ್ದಾರಂತೆ. ನಿಮಗೂ ಅಕ್ಕ ತಂಗಿ, ಫ್ಯಾಮಿಲಿ ಇದೆ ಅಲ್ವಾ ಸರ್. ಒಂದು ಹೆಣ್ಣಿನ ಬಗ್ಗೆ ಹೀಗೆ ಮಾಧ್ಯಮದಲ್ಲಿ ಹೋಗಿ ಹೇಗೆ ಮಾತಾಡಿದ್ರಿ ಎಂದು ಕೇಳಿದ್ದಾರಂತೆ. ಅಷ್ಟೇ ಅಲ್ಲ ತಮಗೆ ಆಗುತ್ತಿರುವ ಮಾನಸಿಕ ಕಿರಿಕಿರಿ ಬಗ್ಗೆ ದೂರು ನೀಡುವುದಾಗಿಯೂ ಎಚ್ಚರಿಸಿದ್ದಾರಂತೆ.
ಕಾನೂನಿನ ಪ್ರಕಾರ ಯಾವುದಾದರೂ ಒಬ್ಬ ವ್ಯಕ್ತಿ ಕುಟುಂಬದಿಂದ ದೂರಾದರೆ ಆ ವ್ಯಕ್ತಿಗೂ ಕುಟುಂಬಕ್ಕೂ ಸಂಬಂಧವಿರುವುದಿಲ್ಲ. ಇನ್ನು 22 ವರ್ಷಗಳ ಹಿಂದೆ ನಮ್ಮನ್ನು ಬಿಟ್ಟು ಹೋದ ವ್ಯಕ್ತಿ ಬಗ್ಗೆ ಅದೇಗೆ ಹೋಗಿ ನೀವೂ ಮಾಧ್ಯಮದವರ ಎದುರು ಮಾತನಾಡುತ್ತೀರಿ..? ನೀವೂ ನಮ್ಮನ್ನು ಸಂಪರ್ಕ ಮಾಡಬಹುದಿತ್ತು. ದೂರು ನೀಡಿದ್ದರೆ ಪೊಲೀಸರೇ ಅದನ್ನು ನೋಡಿಕೊಳ್ಳುತ್ತಿದ್ದರು. ಆದರೆ ಕುಟುಂಬದ ವಿರುದ್ಧ ಹೀಗೆ ಸುದ್ದಿ ಮಾಡಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರಂತೆ.