ದಾವಣಗೆರೆ (ಏ. 04) : ಜಿಲ್ಲೆಯಲ್ಲಿನ ಕಂದಾಯ ಕಚೇರಿಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ (ಸ್ಟೆನೋ), ಬೆರಳಚ್ಚುಗಾರರು (ಡಾಟಾ ಎಂಟ್ರಿ ಆಪರೇಟರ್), ಡಿ-ಗ್ರೂಪ್, ಸೆಕ್ಯೂರಿಟಿ ಗಾಡ್ರ್ಸ್, ಸ್ವಚ್ಛತಾ ಸಿಬ್ಬಂದಿಗಳು, ಗಾರ್ಡನರ್ಸ್, ಲಿಫ್ಟ್ ಆಪರೇಟರ್ ಸೇರಿದಂತೆ ಒಟ್ಟು 54 ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಲು ಉದ್ದೇಶಿಸಲಾಗಿದ್ದು, ಆಸಕ್ತ ಗುತ್ತಿಗೆದಾರರಿಂದ ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್ ಮೂಲಕ ಟೆಂಡರ್ ಆಹ್ವಾನಿಸಲಾಗಿದೆ.
ಇಎಂಡಿ ಮೊತ್ತ 1.50 ಲಕ್ಷ ರೂ., ಆಸಕ್ತರು ನಿಯಮಾನುಸಾರ ಶುಲ್ಕ ಪಾವತಿಸಿ ಟೆಂಡರ್ ಅರ್ಜಿಯನ್ನು ಏ. 30 ರಂದು ಸಂಜೆ 5.30 ರ ಒಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಯನ್ನು ಕಚೇರಿ ಆಡಳಿತ ಶಾಖೆಯಲ್ಲಿ ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.