ಶಿವಮೊಗ್ಗ: ಭಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ಹೊಸ ವಿಚಾರವೊಂದು ಹೊರ ಬಿದ್ದಿದೆ. ತನಿಖಾ ದಳದ ಮಾಹಿತಿಯಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಕೊಲೆಯನ್ನು ರಾಜ್ಯಾದ್ಯಂತ ಕೋಮು ಗಲಭೆ ಸೃಷ್ಟಿಸಲು ಮಾಡಲಾಗಿದೆ ಎಂದು ವರದಿ ನೀಡಿದೆ ಎನ್ನಲಾಗಿದೆ.
ಹರ್ಷನ ಕೊಲೆಯಿಂದ ಜನರಿಗೆ ಭಯ ಹುಟ್ಟಿಸುವ ಉದ್ದೇಶವಾಗಿತ್ತು ಎಂಬುದನ್ನು ಎಫ್ಐಆರ್ ನಲ್ಲಿ ಎನ್ಐಎ ಉಲ್ಲೇಖಿಸಿದೆ ಎನ್ನಲಾಗಿದೆ. ಈಗಾಗಲೇ ಹರ್ಷನ ಕೊಲೆ ವಿಚಾರದಲಿ 11 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಇದೀಗ ತನಿಖೆಯಲ್ಲಿ ಕೋಮು ಗಲಭೆ ಸೃಷ್ಟಿಸುವ ವಿಚಾರ ಬಹಿರಂಗವಾಗಿದೆ.
ಮಾರಕಾಸ್ತ್ರವನ್ನು ಬಳಸಿ ಜನರಿಗೆ ಭಯ ಉಂಟು ಮಾಡುವ ಉದ್ದೇಶವನ್ನು 11 ಮಂದಿ ಆರೋಪಿಗಳು ಹೊಂದಿದ್ದರು. ಅವರ ಉದ್ದೇಶ ರಾಜ್ಯದಲ್ಲಿ ಕೋಮು ಗಲಭೆಯ ಭಯ ಹುಟ್ಟಬೇಕು ಎಂಬುದೇ ಆಗಿತ್ತಂತೆ. ರಾಷ್ಟ್ರೀಯ ತನಿಖಾ ದಳ ನಡೆಸಿದೆ ತನಿಖೆಯಲ್ಲಿ ಈ ವಿಚಾರ ಬಯಲಾಗಿದೆ. ಇನ್ನು ಕೇಂದ್ರ ಸರ್ಕಾರ ಸೂಚನೆಯ ಮೇರೆಗೆ ಎಫ್ಐಆರ್ ದಾಖಲು ಮಾಡಲಾಗಿದ್ದು, ರಾಷ್ಟ್ರೀಯ ತನಿಖಾ ದಳ ತನಿಖೆ ಕೈಗೆತ್ತಿಕೊಂಡಿದೆ.