ಚಿತ್ರದುರ್ಗ : ನಾಳೆಯಿಂದ ನಡೆಯುವ ಹತ್ತನೇ ತರಗತಿ ಪರೀಕ್ಷೆಯಲ್ಲಿ ಹಾಜರಾಗುವ ಮಕ್ಕಳಿಗೆ ವಿತರಿಸುವುದಕ್ಕಾಗಿ ನೂತನ್ ಎನ್.ಜಿ.ಓ.ಹಾಗೂ ಯೂತ್ ಫಾರ್ ಸೇವಾ ಎನ್.ಜಿ.ಓ.ವತಿಯಿಂದ ಹತ್ತು ಸಾವಿರ ಮಾಸ್ಕ್ ಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೆ.ರವಿ ಶಂಕರ್ ರೆಡ್ಡಿ ಯವರಿಗೆ ನೀಡಲಾಯಿತು.
ನೂತನ್ ಎನ್.ಜಿ.ಓ.ಹಾಗೂ ಯೂತ್ ಫಾರ್ ಸೇವಾ ಎನ್.ಜಿ.ಓ.ಅಧ್ಯಕ್ಷ ರಾಘವೇಂದ್ರರವರು ಡಿ.ಡಿ.ಪಿ.ಐ.ಗೆ ಮಾಸ್ಕ್ ಗಳನ್ನು ಹಸ್ತಾಂತರಿಸಿ ಮಾತನಾಡುತ್ತ ಕಳೆದ ಎರಡು ವರ್ಷಗಳಿಂದ ಕೊರೋನಾ ಎಲ್ಲರನ್ನು ತತ್ತರಿಸುವಂತೆ ಮಾಡಿದೆ. ಸಾಕಷ್ಟು ಸಾವು-ನೋವುಗಳು ಸಂಭವಿಸಿದ್ದು, ಮೂರನೆಯ ಅಲೆಯೂ ಕಾಣಿಸಿಕೊಂಡಿತು. ಹಾಗಾಗಿ ಪರೀಕ್ಷೆಗೆ ಹಾಜರಾಗುವ ಮಕ್ಕಳು ಮಾಸ್ಕ್ ಧರಿಸಿ ಸುರಕ್ಷತೆಯಿಂದ ಇರುವುದು ಒಳ್ಳೆಯದು ಎಂದು ಹೇಳಿದರು.
ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ, ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್, ಇ.ಸಿ.ಓ. ಎಂ.ಆರ್.ನಾಗರಾಜ ಇವರುಗಳು ಈ ಸಂದರ್ಭದಲ್ಲಿದ್ದರು.