Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಕ್ಕಳ ಕುತೂಹಲ ಬೆಳಕಿನ ವೇಗಕ್ಕಿಂತ ತೀಕ್ಷ್ಣ : ಶ್ರೀ ಇಮ್ಮಡಿ ಸಿದ್ಧರಾಮೇಶ್ವರಸ್ವಾಮಿ

Facebook
Twitter
Telegram
WhatsApp

ಚಿತ್ರದುರ್ಗ : ಮಕ್ಕಳ ಕುತೂಹಲ ಬೆಳಕಿನ ವೇಗಕ್ಕಿಂತ ತೀಕ್ಷ್ಣವಾಗಿರುತ್ತವೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರಸ್ವಾಮಿ ತಿಳಿಸಿದರು.

ನಗರದ ಎಸ್‍ಜೆಎಸ್ ಜ್ಞಾನಪೀಠ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಿದ್ಧರಾಮೇಶ್ವರ ಶಾಲಾ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೇಸಿಗೆ ಸಂಭ್ರಮದಲ್ಲಿ ಮಾತನಾಡಿದ ಅವರು, ಮಕ್ಕಳ ಮನಸ್ಸು ಶರೀರ ಸ್ವಾತಂತ್ರ್ಯವಾಗಿರಬೇಕು ಮತ್ತು ಸಂಶೋಧನೆ ಕುತೂಹಲ ಕೌತುಕಗಳಿಗೆ ಯಾವಾಗಲೂ ಆಕರ್ಷಿತರಾಗಿದ್ದರೆ ಏನನ್ನಾದರೂ ಸಾಧಿಸುತ್ತಾರೆ ಎಂದು ಹೇಳಿದರು.

ಮಕ್ಕಳು ತಮ್ಮನ್ನು ತಾವು ಪ್ರೀತಿಸುತ್ತಾ ತಮಗೆ ಅಗತ್ಯವಿರುವ ವಸ್ತುಗಳನ್ನು ಯಾವ ರೀತಿ ರಕ್ಷಿಸಿಕೊಳ್ಳುತ್ತೀರೋ ಹಾಗೆಯೇ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕು. ಹಿರಿಯರು ಆಹಾರದಲ್ಲಿ ದೇಹಕ್ಕೆ ಅಗತ್ಯವಿರುವ ತರಕಾರಿ, ಕಾಳು, ಸೊಪ್ಪುಗಳನ್ನು ಹಾಕಿ ಆಹಾರ ತಯಾರಿಸುತ್ತಾರೆ. ಆ ಆಹಾರದಲ್ಲಿ ಯಾವುದನ್ನು ಕಡೆಗೆ ಹಾಕದೆ ಎಲ್ಲವನ್ನೂ ಸೇವಿಸಬೇಕು ಎಂದು ತಿಳಿಸಿದರು.

ಬೇಸಿಗೆಯಲ್ಲಿ ಮಿತ ಆಹಾರವನ್ನು ಸೇವಿಸಬೇಕು, ಹೆಚ್ಚು ಆಹಾರ ವಿಷಕಾರಕವಾಗಿರುತ್ತದೆ. ಭೂಮಿಗೆ ದ್ರವ್ಯ ಹೇಗೆ ಅಗತ್ಯವೋ ಹಾಗೆಯೇ ದೇಹಕ್ಕೆ ದ್ರವ್ಯಮುಖ್ಯ, ದೇಹಕ್ಕೂ ಬೇಕಾಗುತ್ತದೆ. ಹಲವು ರೋಗಗಳಿಗೆ ಜಲ ಔಷಧವಿದ್ದಂತೆ ಹಾಗಾಗಿ ಹೆಚ್ಚು ಜಲವನ್ನು ಬೇಸಿಗೆ ಸಂದರ್ಭದಲ್ಲಿ ಸೇವಿಸಬೇಕು. ಹಸಿ ತರಕಾರಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಇರುವುದರಿಂದ ಅಂತಹ ತರಕಾರಿಯನ್ನು ಮಸಾಲೆ ಪದಾರ್ಥವು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಂತಹ ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು ಎಂದು ಹೇಳಿದರು.

ಭವಿಷ್ಯಕ್ಕೆ ಮಕ್ಕಳು ಶಿಕ್ಷಣವನ್ನು ಚೆನ್ನಾಗಿ ಕಲಿಯಬೇಕು. ಶಿಕ್ಷಣದಲ್ಲಿ ಏಕಾಗ್ರತೆಗೆ ಧ್ಯಾನ ಮಾಡಬೇಕು ಆಗ ಏಕಾಗ್ರತೆ ಬರುತ್ತದೆ. ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ ಚಟುವಟಿಕೆಯಿಂದಿರಲು, ಶಿಕ್ಷಣದಲ್ಲಿ ಯಶಸ್ವಿ ಸಾಧಿಸಲು ಸಾಧ್ಯವೆಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಧನಂಜಯಪ್ಪ ಮಾತನಾಡಿ ಬೇಸಿಗೆಯ ಹುಣ್ಣಿಮೆ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನತೆ ಹೆಚ್ಚು ಸಂಭ್ರಮಿಸುತ್ತಿದ್ದರು. ಬೆಳದಿಂಗಳಲ್ಲಿ ಕೋಲಾಟ, ಭಜನೆ ಸೇರಿದಂತೆ ಅನೇಕ ಆಟೋಪ ಆಟಗಳನ್ನು ಮತ್ತು ಕಲೆಗಳನ್ನು ವ್ಯಕ್ತಪಡಿಸುತ್ತಿದ್ದರು. ಅಂತಹ ಸೊಬಗಿನ ಸಂಭ್ರಮಗಳು ಗ್ರಾಮೀಣ ಪ್ರದೇಶದಲ್ಲಿ ಜರುಗಬೇಕು ಎಂದು ಹೇಳಿದರು.

ಎಸ್.ಜೆ.ಎಸ್. ಜ್ಞಾನಪೀಠದ ಕಾರ್ಯದರ್ಶಿ ಡಿ.ಸಿ.ಮೋಹನ್ ಮಾತನಾಡಿ, ಮನುಷ್ಯ ಜೀರ್ಣಕ್ಕೆ ಅಗತ್ಯವಿರುವ ಪೂರಕವಾಗಿ ಸ್ಪಂಧಿಸುವ ಆಹಾರಗಳನ್ನು ತೆಗೆದುಕೊಳ್ಳಬೇಕು. ಪರೀಕ್ಷೆ ಸಂದರ್ಭದಲ್ಲಿ ಆರೋಗ್ಯವನ್ನು ಕೆಡಿಸಿಕೊಳ್ಳಬಾರದು. ಆರೋಗ್ಯ ಕೆಡಿಸಿಕೊಂಡರೆ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

ನಗರಸಭೆ ಸದಸ್ಯ ತಿಮ್ಮಣ್ಣ ಮಾತನಾಡಿ ಜನರಲ್ಲಿ ಲಕ್ಷೋಪಲಕ್ಷ ಹಣವಿದ್ದರೆ ಮುಖ್ಯವಲ್ಲ. ಆರೋಗ್ಯ ಬಹಳ ಮುಖ್ಯ ಹಾಗಾಗಿ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಸಿ.ನಾಗರಾಜ್ ಮತ್ತು ಹನುಮಂತಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಶ್ಮಿತ ಸ್ವಾಗತಿಸಿದರು. ಹನುಮಂತಪ್ಪ ನಿರೂಪಿಸಿದರು. ಜಯಮ್ಮ ವಂದಿಸಿದರು. ವಿದ್ಯಾರ್ಥಿಗಳು ಮತ್ತು ಬೋಧಕ ಬೋಧಕೇತರ ವರ್ಗ ಭಾಗವಹಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!