ಚಿತ್ರದುರ್ಗ, (ಮಾ.04) : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚೊಚ್ಚಲ ಬಜೆಟ್ ಕುರಿತು ಇದ್ದ ನಿರೀಕ್ಷೆ ಹುಸಿಯಾಗಿದೆ. ಚುನಾವಣೆ ದೃಷ್ಟಿಯಲ್ಲಿ ಬಜೆಟ್ ಮಂಡಿಸಿದ್ದರೂ ಯಾವುದೇ ವರ್ಗದ ಜನರ ಹಿತ ಕಾಯುವ ಪ್ರಯತ್ನವನ್ನೇ ನಡೆಸಿಲ್ಲ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಜೆಟ್‌ನಲ್ಲಿ ಕೃಷಿ ಕ್ಷೇತ್ರ ಹಾಗೂ ಎಲ್ಲಾ ವರ್ಗದ ಜನರ ಹಿತ ಕಾಯುವಲ್ಲಿ ವಿಫಲವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 3 ಸಾವಿರ ಕೋಟಿ ರೂಪಾಯಿ ಬದಲು, ಕನಿಷ್ಠ 6 ಸಾವಿರ ಕೋಟಿ ರೂ. ಮೀಸಲಿಡಬೇಕಾಗಿತ್ತು. ವಿ.ವಿ.ಸಾಗರಕ್ಕೆ ನೀರು ಮೀಸಲಿಡುವ ಪ್ರಸ್ತಾಪವೇ ಇಲ್ಲ. ಕಾಂಗ್ರೆಸ್ ಸರ್ಕಾರ ಮಂಜೂರು ಮಾಡಿದ್ದ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಕುರಿತು ಈಗಾಗಲೇ ಸಚಿವ ಸಂಪುಟದಲ್ಲಿ ಕೈಗೊಂಡಿದ್ದ ನಿರ್ಣಯವನ್ನೇ, ಹೊಸದಾಗಿ ಘೋಷಿಸಿದಂತೆ ಬಜೆಟ್ ನಲ್ಲಿ ಬಿಂಬಿಸಿಕೊಳ್ಳಲಾಗಿದೆ.
ಜಿಲ್ಲೆಯ ರೈತರ ಹಿತ ಕಾಯುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ. ಅನಗತ್ಯವಾಗಿ ಜನರ ಮೇಲೆ ಸಾಲದ ಭಾರ ಹೆಚ್ಚಿಸಲಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತಡೆ ಹಾಕಲು ಸಣ್ಣ ಪ್ರಯತ್ನವನ್ನು ಮಾಡಿಲ್ಲ. ಮುರುಘಾ ಮಠದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆ ಮಾಡಲಾಗುವುದು ಎಂದು ಘೋಷಿಸಿದ್ದ ಮುಖ್ಯಮಂತ್ರಿಗಳು, ಬಜೆಟ್ ಮಂಡನೆ ವೇಳೆ ತಮ್ಮ ಮಾತನ್ನೇ ಮರೆತಿದ್ದಾರೆ. ಇದೊಂದು ಜನರನ್ನು ವಂಚಿಸುವ ಬಜೆಟ್ ಆಗಿದೆ.
ರೈತರಿಗೆ ಹಾಗೂ ಉದ್ದಿಮೆದಾರರಿಗೆ ಮೂಗಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡಿದ್ದಾರೆ.
ಕಳೆದ 5 ವರ್ಷಗಳ ಹಿಂದೆ ತುಮಕೂರು ಜಿಲ್ಲೆಯ ವಂಸತನರಸಪುರ ಕೈಗಾರಿಕ ಪ್ರದೇಶದಲ್ಲಿ ನಿರ್ಮಿಸಿರುವ ಪುಡ್ ಪುಡ್ ಪಾರ್ಕ್ ಸ್ವತಃ ದೇಶದ ಪ್ರಧಾನಿ ನರೇಂದ್ರ ಮೂದಿ ಉದ್ಘಾಟಿಸಿದಾಗ ರಾಜ್ಯದ ರೈತವರ್ಗ ಹಾಗೂ ಉದ್ದಿಮೆದಾರರು ಭರವಸೆ ಈಗ ಹುಸಿಯಾಗಿದೆ.
ಚಿತ್ರದುರ್ಗ ಸೇರಿ ರಾಜ್ಯದ ನಾಲ್ಕು ಕಡೆ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ವಾಗಿರುವ ಪುಡ್ ಪಾರ್ಕ್ ಗಳು ಸಂಪೂರ್ಣ ವಿಫಲವಾಗಿದ್ದು ಮೂಲಭೂತ ಸೌಕರ್ಯಗಳ ಕೊರತೆಯಿಂದ ಉದ್ದಿಮೆದಾರರ ಗೋಳು ಹೇಳತೀರದಂತಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯಸರ್ಕಾರ ಮತ್ತೂಮ್ಮೆ 10 ಪುಡ್ ಪಾರ್ಕ್ ನಿರ್ಮಾಣಕ್ಕೆ ಪ್ರಸ್ತಾಪಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.