ಬೆಂಗಳೂರು: ಬಸವರಾಜ್ ಬೊಮ್ಮಾಯಿ ಸಿಎಂ ಆದ ಬಳಿಕ ಮಂಡನೆ ಮಾಡಲಿರುವ ಮೊದಲ ಬಜೆಟ್ ಇದು. ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಹಲವಾರು ಕ್ಷೇತ್ರಗಳಿಗೆ ನಿರೀಕ್ಷೆ ಇದೆ.
ಇದು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಸವಾಲಿನ ಕೆಲಸವೇ ಆಗಿದೆ. ಯಾಕಂದ್ರೆ ಮುಖ್ಯಮಂತ್ರಿ ಕಾಮನ್ ಮ್ಯಾನ್ ಆಗಿಯೇ ಎಲ್ಲರ ವಿಶ್ವಾಸ ಗಳಿಸಿದ್ದಾರೆ. ಹೀಗಾಗಿ ರೈತ ಪರ, ಜನ ಪರ ಬಜೆಟ್ ಮಂಡಿಸುವ ಜವಬ್ದಾರಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮೇಲಿದೆ.
ಒಂದು ಕಡೆ ಚುನಾವಣೆ ಬೇರೆ ಹತ್ತಿರ ಬರುತ್ತೆ. ಬಜೆಟ್ ಮಂಡಿಸಿದಾಗ ಜನರಿಗೆ ಉಪಯೋಗವಾಗುವಂತ ಯೋಜನೆಗಳನ್ನ ಘೋಷಿಸಬೇಕಾಗುತ್ತದೆ. ರೈತರಿಗೆ ಆಗಲಿ, ಜನರಿಗೆ ಆಗಲಿ ಅದು ಕೈಗೆಟಕುವಂತಿರಬೇಕು. ಕೆಲವೊಮ್ಮೆ ಬಜೆಟ್ ಮಂಡಿಸಿದಾಗ ಇದು ಸಪ್ಪೆ ಬಜೆಟ್ ಎಂದು ಬೇಸರ ಮಾಡಿಕೊಂಡ ಉದಾಹರಣೆಗಳು ಇದೆ. ಆದ್ರೆ ಈಗ ಚುನಾವಣೆ ಹತ್ತಿರವಿರುವ ಕಾರಣವೂ ಸಿಎಂ ಜನಪರ ಬಜೆಟ್ ಮಂಡಿಸಲೇಬೇಕಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರ ಬಜೆಟ್ ಗಾಗಿ ಜನ ವೈಟಿಂಗ್ ನಲ್ಲಿದ್ದಾರೆ.