ಮೇಕೆದಾಟು ಯೋಜನೆಯ ಜಾರಿಗಾಗಿ ಕಾಂಗ್ರೆಸ್ ಪಣತೊಟ್ಟಿದೆ. ಸಾವಿರಾರು ಜನ ಸೇರಿಸಿ ಪಾದಯಾತ್ರೆಯನ್ನ ಶುರು ಮಾಡಿತ್ತು. ಆದ್ರೆ ಆ ಸಮಯದಲ್ಲಿ ಕೊರೊನಾ ಇದ್ದ ಕಾರಣ ಬಿಜೆಪಿ ಆ ಪ್ರತಿಭಟನೆ ತಡೆಯೋದು ಕಷ್ಟವಾಗಲಿಲ್ಲ. ಕೊರೊನಾ ನಿಯಮ ಹೇರಿದ್ದರಿಂದ ಶುರುವಾದ ಪಾದಯಾತ್ರೆ ಐದೇ ದಿನಕ್ಕೆ ಅಂತ್ಯ ಕಂಡಿತ್ತು.
ಆದ್ರೆ ಅಂದು ಕೂಡ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತೆ ಪಾದಯಾತ್ರೆ ಪುನರಾರಂಭಿಸುವ ಬಗ್ಗೆ ಹೇಳಿದ್ದರು. ಈ ಪಾದಯಾತ್ರೆಯಿಂದ ಹಳೆ ಮೈಸೂರು ಭಾಗದ ಜನರನ್ನ ಕಾಂಗ್ರೆಸ್ ಸೆಳೆಯುತ್ತೆ ಎಂಬ ಆತಂಕ ಬಿಜೆಪಿಗರಲ್ಲಿದೆ. ಈಗ ಕೊರೊನಾ ನಿಯಮ ಇಲ್ಲದೆ ಇರುವ ಕಾರಣ ಕಾಂಗ್ರೆಸ್ ಸೋಮವಾರದಿಂದ ಮತ್ತೆ ಪಾದಯಾತ್ರೆ ಆರಂಭಿಸಲು ತೀರ್ಮಾನಿಸಿದೆ.
ಇದು ಬಿಜೆಪಿ ಪಾಳಯದಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಆದ್ರೆ ಪಾದಯಾತ್ರೆಗೆ ಟಕ್ಕರ್ ಕೊಡೋದಕ್ಕೆ ಬಿಜೆಪಿ ಫ್ಲ್ಯಾನ್ ರೆಡಿ ಮಾಡಿದೆ ಎನ್ನಲಾಗಿದೆ. ಹೀಗಾಗಿ ಪ್ರತಿಭಟನೆ ಮಾಡಲು ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷನ ಕೊಲೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಬಿಜೆಪಿ ಫ್ಲ್ಯಾನ್ ರೆಡಿ ಮಾಡಿಕೊಂಡಿದೆಯಂತೆ.