ಚಿತ್ರದುರ್ಗ, (ಫೆ.22) : ಭಾವಸಾರ ಕ್ಷತ್ರಿಯ ಸಮುದಾಯದ ಯುವಕ ಹರ್ಷ ಜಿಂಗಾಡೆಯನ್ನು ಕಳೆದ ಭಾನುವಾರ ಶಿವಮೊಗ್ಗದಲ್ಲಿ ಅನ್ಯ ಕೋಮಿನವರು ಹತ್ಯೆ ನಡೆಸಿರುವುದನ್ನು ವಿರೋಧಿಸಿ ಭಾವಸಾರ ಕ್ಷತ್ರಿಯ ಸಮಾಜದವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ದರ್ಜಿ ವೃತ್ತಿ ಮಾಡಿಕೊಂಡು ಕುಟುಂಬಕ್ಕೆ ಆಧಾರವಾಗಿದ್ದ 23 ವರ್ಷದ ಹರ್ಷ ಜಿಂಗಾಡೆಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಿರುವುದರಿಂದ ಇಡೀ ಶಿವಮೊಗ್ಗ ನಗರವೇ ಆತಂಕದಲ್ಲಿದೆ. ಹತ್ಯೆಯ ಹಿಂದೆ ಯಾರೆ ಪ್ರಭಾವಿಗಳಿದ್ದರೂ ಕಾನೂನು ರೀತಿ ಶಿಕ್ಷಿಸಿ ಹತ್ಯೆಗೀಡಾಗಿರುವ ಯುವಕನ ಕುಟುಂಬಕ್ಕೆ ನ್ಯಾಯ ಒದಗಿಸಿ 25 ಲಕ್ಷ ರೂ.ಗಳ ಪರಿಹಾರ ಘೋಷಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ದೇಶದ ಎಲ್ಲಾ ಭಾಗಗಳಲ್ಲಿಯೂ ಭಾವಸಾರ ಕ್ಷತ್ರಿಯ ಸಮುದಾಯದವರು ದರ್ಜಿ ವೃತ್ತಿ ಮಾಡಿಕೊಂಡು ದಿನನಿತ್ಯದ ಬದುಕು ಸಾಗಿಸುತ್ತಿದ್ದಾರೆ. ಯಾರ ಜೊತೆಯೂ ಸಂಘರ್ಷಕ್ಕೆ ಇಳಿದಿದವರಲ್ಲ. ಶಾಂತಿಪ್ರಿಯರು ಬೇರೆ ಕೋವಿನವರ ಜೊತೆ ಅನ್ಯೋನ್ಯತೆಯಿಂದ ಇದ್ದೇವೆ. ಆದರೂ ಕ್ಷÄಲ್ಲಕ ಕಾರಣಕ್ಕೆ ಹರ್ಷ ಜಿಂಗಾಡೆಯನ್ನು ಹತ್ಯೆಗೈದಿರುವುದು ಅತ್ಯಂತ ಖಂಡನೀಯ. ಹತ್ಯೆ ಹಿಂದೆ ಯರ‍್ಯಾರ ಕೈವಾಡವಿದೆ ಎನ್ನುವುದನ್ನು ಕೂಲಂಕುಷ ತನಿಖೆ ನಡೆಸಿ ಕೊಲೆಗಡುಕರಿಗೆ ಹಾಗೂ ಕುಮ್ಮಕ್ಕು ನೀಡಿದವರಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದು ಪ್ರತಿಭಟನಾನಿರತರು ಸರ್ಕಾರವನ್ನು ಆಗ್ರಹಿಸಿದರು.
ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಶ್ಯಾಂ ಮುಸಳೆ, ಉಪಾಧ್ಯಕ್ಷ ಸಂತೋಷ್‌ಬಾಬು ಮಹಳತ್ಕರ್, ಕಾರ್ಯದರ್ಶಿ ಜಿ.ಎಸ್.ನಾಗರಾಜ್, ಸಮುದಾಯದ ಮುಖಂಡರುಗಳಾದ ಕೃಷ್ಣ ಪಟಿಗ, ಡಿ.ಎನ್.ಮಮತ, ಸಿ.ಟಿ.ವಾಸುದೇವರಾವ್, ಬಿ.ಎಸ್.ನಾಗರಾಜ, ಹೆಚ್.ಎನ್.ಮಂಜುನಾಥರಾವ್, ಜಿ.ಕೆ.ಶ್ರೀಧರ್, ಜಯರಾಮರಾವ್ ಗುಜ್ಜರ್, ಡಾ.ಪ್ರಭಾಕರ್ ಹಂಚಾಟೆ, ವಾಸುದೇವರಾವ ಮುಸಳೆ, ಮಧುಸೂಧನ್ ಅಂಬೇಕರ್, ಶ್ರೀಮತಿ ಮಮತ ಪರಶುರಾಮ್ ಬೇದ್ರೆ, ಮಂಜುನಾಥರಾವ್ ಗುಜ್ಜರ್, ಗಿರೀಶ್ ಮುಸಳೆ, ನಾಗರಾಜ್‌ಬೇದ್ರೆ, ಶ್ರೀನಾಥ್‌ಬೇದ್ರೆ, ರಾಜೇಶ್‌ಬೇದ್ರೆ, ಶ್ರೀದರ್ ಗುಜ್ಜರ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.