ಉನ್ನಾವೋ: ಉತ್ತರಪ್ರದೇಶದಲ್ಲಿ ಸದ್ಯ ಚುನಾವಣೆಯ ರಂಗು ಜೋರಾಗಿದೆ. ಎಲ್ಲಾ ಪಕ್ಷಗಳು ಚುನಾವಣಾ ಪ್ರಚಾರದ ಬ್ಯುಸಿಯಲ್ಲಿ ತೊಡಗಿದ್ದಾರೆ. ಬಿಜೆಯನ್ನ ಸೋಲಿಸೋದಕ್ಕೆ ಎಸ್ ಪಿ ಪಕ್ಷ ಕೂಡ ಪಣ ತೊಟ್ಟಿದೆ. ಈ ಮಧ್ಯೆ ಉನ್ನಾವೋದಲ್ಲಿ ಎಸ್ ಪಿ ನಾಯಕನ ಹೊಲದಲ್ಲಿ ದಲಿತ ಯುವತಿಯ ಶವ ಪತ್ತೆಯಾಗಿದ್ದು, ಸಿಕ್ಕಾಪಟ್ಟೆ ಸಂಚಲನ ಮೂಡಿಸಿದೆ.
ಹತ್ಯೆಯ ಹಿಂದೆ ಮಾಜಿ ಸಚಿವ ಫತೇ ಬಹದ್ದೂರ್ ಸಿಂಗ್ ಅವರ ಪುತ್ರನ ಕೈವಾಡವಿದೆ ಎಂದು ಸಂತ್ರಸ್ತೆಯ ತಾಯಿ ಆರೋಪಿಸಿದ್ದಾರೆ. ಮಾಜಿ ರಾಜ್ಯ ಸಚಿವ ರಾಜೋಲ್ ಸಿಂಗ್ ಅವರ ಒಡೆತನದ ಆಶ್ರಮದ ಬಳಿ 22 ವರ್ಷದ ಮಹಿಳೆಯ ಶವವನ್ನು ಗುರುವಾರ ಪತ್ತೆ ಮಾಡಲಾಗಿದೆ. ಕೊಳೆತ ಶವವನ್ನು ಕಂಬಳಿಯಲ್ಲಿ ಸುತ್ತಿ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಡಿಸೆಂಬರ್ 8ರಂದು ಯುವತಿ ಕಣ್ಮರೆಯಾಗಿದ್ದಳು. ತನ್ನ ಮಗಳನ್ನು ಮಾಜಿ ಸಚಿವರ ಮಗ ರಾಜೋಲ್ ಸಿಂಗ್ ಕಿಡ್ನಾಪ್ ಮಾಡಿದ್ದಾನೆ ಎಂದು ಯುವತಿಯ ತಾಯಿ ಆರೋಪಿಸಿದ್ದಳು.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಲಿತರ ಮತಗಳನ್ನು ಪಡೆಯಲು ಪ್ರಯತ್ನಿಸುತ್ತಿರುವ ಸಮಾಜವಾದಿ ಪಕ್ಷಕ್ಕೆ ಈ ಭೀಕರ ಘಟನೆಯಿಂದ ತೀವ್ರ ಮುಜುಗರ ಉಂಟಾಗಿದೆ. ಇನ್ನು ಕಳೆದ ಬಾರೀ ಉನ್ನಾವೋ ಅತ್ಯಾಚಾರ ಪ್ರಕರಣ ಭಾರೀ ಸುದ್ದಿಯಾಗಿತ್ತು.