Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜಿ.ಪಂ, ಮತ್ತು ತಾ.ಪಂ. ಚುಣಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿ : ಸಚಿವ ಬಿ.ಸಿ.ಪಾಟೀಲ್

Facebook
Twitter
Telegram
WhatsApp

ಚಿತ್ರದುರ್ಗ (ಫೆ.11) :  ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಸಂಸದರು, ಸಚಿವರು, ಐದು ಜನ ಶಾಸಕರು, ವಿಧಾನ ಪರಿಷತ್ ಸದಸ್ಯರಿದ್ದು ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯನ್ನು ನಮ್ಮ ಹಿಡಿತದಲ್ಲಿ ತರಬೇಕಿದೆ ಇದಕ್ಕಾಗಿ ಪಕ್ಷ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ, ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಕರೆ ನೀಡಿದರು.

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಪ್ರಪ್ರಥಮ ಬಾರಿಗೆ ಬಿಜೆಪಿ ಪಕ್ಷದ ಕಚೇರಿಗೆ ಆಗಮಿಸಿ ಪಂಡಿತ್ ದೀನ ದಯಾಳ್‍ರವರ ಪುಣ್ಯ ಸ್ಮರಣೆ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಬೇಕಿದೆ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ರವರು ಉತ್ತಮವಾದ ಆಡಳಿತವನ್ನು ನೀಡಿದ್ದಾರೆ. ಇದೇ ರೀತಿ ಇಂದಿನ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಯಿ ಸಹಾ ಉತ್ತಮವಾದ ಆಡಳಿತವನ್ನು ನೀಡುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ನಮ್ಮ ಪಕ್ಷದವರಿದ್ದಾರೆ. ಮುಂದಿನ ದಿನದಲ್ಲಿ ಬರುವ ಜಿ.ಪಂ, ಮತ್ತು ತಾ.ಪಂ. ಚುಣಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದರ ಮೂಲಕ ಜಿಲ್ಲೆಯ ಜಿ.ಪಂ. ಮತ್ತು ಆರು ತಾಲ್ಲೂಕು ಪಂಚಾಯಿತಿಗಳು ನಮ್ಮ ವಶವಾಗಬೇಕಿದೆ.

ಇದಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮವನ್ನು ಹಾಕಬೇಕಿದೆ. ಇದು ಕಾರ್ಯಕರ್ತರ ಚುನಾವಣೆಯಾಗಿದ್ದು, ಅವರ ಗೆಲುವಿಗೆ ಎಲ್ಲರು ಒಟ್ಟಾಗಿ ಶ್ರಮಿಸಬೇಕಿದೆ ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

ಚಿತ್ರದುರ್ಗ ಜಿಲ್ಲೆ ನನಗೆ ಹೂಸದಲ್ಲ, ಹಿರಿಯೂರಿನಿಂದ ದಾವಣಗೆರೆಯವರೆಗೂ ಪೋಲಿಸ್ ಆಧಿಕಾರಿಯಾಗಿ ಕೆಲಸ ಮಾಡಿದ್ದೇನೆ ಜಿಲ್ಲೆಯ ಪೂರ್ಣವಾದ ಮಾಹಿತಿ ನನಗೆ ಇದೆ. ಹಿರೇಕೇರೂರಿಗೆ ಹೋಗುವಾಗ ಚಿತ್ರದುರ್ಗದ ರಾ.ಹೆ.ಯನ್ನು ಬಳಕೆ ಮಾಡಿಕೊಂಡು ಹೂಗುತ್ತಿದ್ದೆ ಆಗ ನನಗೆ ಚಿತ್ರದುರ್ಗ ಜಿಲ್ಲೆ ಉಸ್ತುವಾರಿ ಸಿಗುತ್ತದೆ ಎಂಬ ಪರಿಕಲ್ಪನೆ ಇರಲಿಲ್ಲ. ಈಗ ಮುಖ್ಯಮಂತ್ರಿಗಳು ಉಸ್ತುವಾರಿಯನ್ನು ನೀಡಿದ್ದಾರೆ. ಈಗ ಒಳಗಡೆ ಬರಬೇಕಾಗಿದೆ. ಇನ್ನೂ ಒಂದು ಕಾಲು ವರ್ಷ ನಮಗೆ ಸಮಯ ಇದೆ ಇದರಲ್ಲಿ ಸಾಧ್ಯವಾದಷ್ಟು ಅಭಿವೃದ್ದಿ ಕಾರ್ಯವನ್ನು ಮಾಡಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಇಂದು ದೀನ್ ದಯಾಳ್ ಪಂಡಿತ್ ದೀನ್ ದಯಾಳ್ ರವರ ಪುಣ್ಯ ಸ್ಮರಣೆ ಇದನ್ನು ರಾಜ್ಯದ ಎಲ್ಲಡೆ ಅಚರಣೆ ಮಾಡಲಾಗುತ್ತಿದೆ. ದೀನ್ ದಯಾಳ್ ರವರು, 1967ರಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದರು. ಇದರ ಬಗ್ಗೆ ಇದುವರೆವಿಗೂ ಯಾವ ಮಾಹಿತಿಯೂ ಸಿಕ್ಕಿಲ್ಲ, ಅಂದಿನ ದಿನದಲ್ಲಿಯೇ 5 ರಾಜ್ಯಗಳಲ್ಲಿ ನಮ್ಮ ಪಕ್ಷ ಬೇರೆ ಪಕ್ಷದೊಂದಿಗೆ ಸೇರಿ ಅಡಳಿತವನ್ನು ನಡೆಸುತ್ತಿತ್ತು. ಬೂತ್ ಮಟ್ಟದಿಂದ ಹಿಡಿದು ರಾಷ್ಟ್ರೀಯ ಕಾರ್ಯಕ್ರಮವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.

ಬಿಜೆಪಿ ಪಕ್ಷದವತಿಯಿಂದ ಇಂದು ಸಮರ್ಪಣಾ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಪಕ್ಷದ ಕಾರ್ಯಕರ್ತರಿಂದ ದೇಣೀಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇದರಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ ಹೆಚ್ಚು ದೇಣೀಗೆಯನ್ನು ಸಂಗ್ರಹ ಮಾಡುವಲ್ಲಿ ಮುಂದಾಗಬೇಕಿದೆ. ಇಲ್ಲಿ ದೇಣೀಗೆ ಸಂಗ್ರಹಕ್ಕಿಂತ ಕಾರ್ಯಕರ್ತರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಮುಖ್ಯವಾಗಿದೆ. ಮುಂಬರುವ ಪಂಚಾಯಿತಿ ಚುನಾವಣೆಗಳನ್ನು ಶಾಸಕರ ನೇತೃತ್ವದಲ್ಲಿ ನಡೆಸುವುದರ ಮೂಲಕ ಅಧಿಕಾರವನ್ನು ಹಿಡಿಯಲಾಗುವುದು ಎಂದು ನವೀನ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾಧ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾಧ್ಯಕ್ಷ ಮುರುಳಿ, ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಸಿದ್ದಾಪುರ, ನಗರಸಭೆಯ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ ವೆಂಕಟೇಶ್, ಸದಸ್ಯರಾದ ವೆಂಕಟೇಶ್, ಗ್ರಾಮಾಂತರ ಅಧ್ಯಕ್ಷ ನಂಧಿ ನಾಗರಾಜ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶೈಲಜಾ ರೆಡ್ಡಿ, ಜಯಪಾಲಯ್ಯ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೆ.ಎಸ್.ಹನುಮಕ್ಕ ನಿಧನ

ಸುದ್ದಿಒನ್, ಚಿತ್ರದುರ್ಗ, ಮೇ. 18 : ನಗರದ ಸರಸ್ವತಿಪುರಂ ನಿವಾಸಿ ಕೆ.ಎಸ್ ಹನುಮಕ್ಕ(88) ಶನಿವಾರ ಮುಂಜಾನೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಸೇರಿದಂತೆ ಇಬ್ಬರು

ಈ ಸಮಸ್ಯೆ ಇರುವವರು ಕಬ್ಬಿನ ರಸವನ್ನು ಕುಡಿಯಬೇಡಿ….!

ಸುದ್ದಿಒನ್ : ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಜ್ಯೂಸ್, ತಂಪು ಪಾನೀಯಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. ನಿಂಬೆ ಹಣ್ಣಿನ ರಸ, ಮಜ್ಜಿಗೆ ಮತ್ತು ಕಬ್ಬಿನ ರಸವನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ. ಕಬ್ಬಿನ ರಸವನ್ನು ಕುಡಿಯಲು

ಇಂದು ನಿಮಗೆ ಭೂ ವ್ಯವಹಾರಗಳಲ್ಲಿ ಉತ್ತಮ ಆದಾಯ ಸಿಗಲಿದೆ

ಈ ರಾಶಿಗಳ ಸಂಸಾರದಲ್ಲಿ ಏನಾಯ್ತು? ಆಶ್ಚರ್ಯ! ಇಂದು ನಿಮಗೆ ಭೂ ವ್ಯವಹಾರಗಳಲ್ಲಿ ಉತ್ತಮ ಆದಾಯ ಸಿಗಲಿದೆ, ಶನಿವಾರ ರಾಶಿ ಭವಿಷ್ಯ -ಮೇ-18,2024 ಸೂರ್ಯೋದಯ: 05:47, ಸೂರ್ಯಾಸ್ತ : 06:38 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

error: Content is protected !!