Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಫೆ. 25 ರಂದು ಕೊಟ್ಟೂರು ರಥೋತ್ಸವ : ಪಾದಯಾತ್ರಿಗಳಿಗೆ, ಭಕ್ತಾಧಿಗಳಿಗೆ ನಿಷೇಧ..!

Facebook
Twitter
Telegram
WhatsApp

ಹೊಸಪೇಟೆ(ವಿಜಯನಗರ ಜಿಲ್ಲೆ),(ಫೆ.10): ಕೊಟ್ಟೂರು ಪಟ್ಟಣದ ಗುರುಬಸವೇಶ್ವರ ಸ್ವಾಮಿಯ ರಥೋತ್ಸವದ ಪೂರ್ವಭಾವಿ ಸಭೆಯನ್ನು ಕೊಟ್ಟೂರು ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಗುರುವಾರದಂದು ಹಗರಿಬೊಮ್ಮನಹಳ್ಳಿ ಶಾಸಕರರಾದ ಭೀಮಾನಾಯ್ಕ ಹಾಗೂ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್.ಪಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಅನಿರುದ್ದ್ ಶ್ರವಣ್.ಪಿ ಅವರು ಮಾತನಾಡಿ, ಕೋವಿಡ್-19ನ ಮೂರನೇ ಅಲೆಯ ಹಿನ್ನೆಲೆಯಲ್ಲಿ ಫೆ.25ರಂದು ನಡೆಯಲಿರುವ ಶ್ರೀ ಗುರುಬಸವೇಶ್ವರ ಸ್ವಾಮಿಯ ರಥೋತ್ಸವವನ್ನು ಧಾರ್ಮಿಕ ವಿಧಿ ವಿಧಾನದಿಂದ ಸರಳವಾಗಿ ಪೂಜೆ ಸಲ್ಲಿಸಿ ಆಚರಿಸುವುದರ ಜೊತೆಗೆ ಸರ್ಕಾರದ ಮಾರ್ಗ ಸೂಚಿಯಂತೆ ಹೊರಗಿನ ಪಾದಯಾತ್ರಿಗಳಿಗೆ, ಭಕ್ತಾಧಿಗಳಿಗೆ ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರದ ಆದೇಶದಂತೆ ಜನರ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ಜಾತ್ರೆ ಉತ್ಸವವನ್ನು ಸರಳವಾಗಿ ಆಚರಿಸಲು ಮಾರ್ಗಸೂಚಿ ಹೊರಡಿಸಿದೆ.ವ್ಯಾಪರ ವಹಿವಾಟು ನಡೆಯದಂತೆ, ಬಹುಸಂಖ್ಯೆಯಲ್ಲಿ ಜನರು ಸೇರದಂತೆ ಕಟ್ಟು-ನಿಟ್ಟಿನ ಆದೇಶ ಹೊರಡಿಸಿರುವುದರಿಂದ ರಾಜ್ಯ ಜಿಲ್ಲೆ, ಹಳ್ಳಿಗಳಿಂದ ಬರುವ ಕೊಟ್ಟೂರು ಬಸವೇಶ್ವರನ ಭಕ್ತರಿಗೆ ಈ ಬಾರಿ ನಡೆಯುವ ರಥೋತ್ಸವದಲ್ಲಿ ಪಾಲ್ಗೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು.

ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ಚೆಕ್ ಪೋಸ್ಟ್ ಹಾಕಲಾಗುವುದು. ಹೊರಗಡೆಯಿಂದ ಬರುವ ವಾಹನಗಳಿಗೆ, ಪಾದಯಾತ್ರಿಗಳಿಗೆ ಭಕ್ತರಿಗೆ ನಿರ್ಭಂಧ ಹೇರಲಾಗುವುದು;ಆದ್ದರಿಂದ ಶ್ರೀ ಸ್ವಾಮಿಯ ಭಕ್ತರು ಭಕ್ತಿಭಾವದಿಂದ ಸರಳವಾಗಿ ಆಚರಿಸಲು ತಿಳಿಸಿದರು.

ಹಗರಿಬೊಮ್ಮನಹಳ್ಳಿ ಶಾಸಕರರಾದ ಭೀಮಾನಾಯ್ಕ ಅವರು ಮಾತನಾಡಿ ಕಳೆದ ವರ್ಷದಂತೆ ಈ ವರ್ಷ ಸಹ ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಗುರು ಬಸವೇಶ್ವರ ಸ್ವಾಮಿಯ ರಥೋತ್ಸವವನ್ನು ಸರ್ಕಾರದ ನಿಯಗಳನ್ನು ಅನುಸರಿಸಿ ಪಟ್ಟಣದ ಜನತೆಗೆ ಸೀಮಿತಗೊಂಡು ರಥೋತ್ಸವವನ್ನು ಆಚರಿಸಲು ಅನುಮತಿ ನೀಡಬೇಕೆಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ನಂತರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂಎಂ ಹರ್ಷವರ್ಧನ ಅವರು ಮಾತನಾಡಿ ಕೊಟ್ಟುರೇಶ್ವರ ಸ್ವಾಮಿಯ ಪವಾಡ ರಾಜ್ಯದ ಪ್ರತಿ ಮೂಲೆಮೂಲೆಗೂ ತಿಳಿದಿದೆ;ಆದ್ದರಿಂದ ಜಿಲ್ಲಾಡಳಿತದ ಷರತ್ತುಗಳಿಗೆ ಪಟ್ಟಣದ ಜನತೆ ಒಪ್ಪಿಗೆ ಸೂಚಿಸಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಕಟ್ಟುನಿಟ್ಟಾಗಿ ಪಾಲಿಸಿ ಯಾವುದೇ ಸಮಸ್ಯೆ ಉದ್ಭವಿಸದಂತೆ ರಥೋತ್ಸವವನ್ನು  ನಡೆಸುತ್ತೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಹಲ್ ಮಠದ ಶಂಕರಲಿಂಗ ಸ್ವಾಮಿ, ಹರಪನಹಳ್ಳಿ ಸಹಾಯಕ ಆಯುಕ್ತರರಾದ ಚಂದ್ರಶೇಖರಯ್ಯ, ಡಿವೈಎಸ್ಪಿಯಾದ ಹಾಲಮೂರ್ತಿ ರಾವ್, ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಭಾರತಿ ಸುಧಾಕರ್, ತಹಶೀಲ್ದಾರರಾದ ಎಂ. ಕುಮಾರ್ ಸ್ವಾಮಿ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರರಾದ ಎಂ.ಎಚ್.ಪ್ರಕಾಶ್ ರಾವ್, ತಾ.ಪಂ.ಯ ಇಓ ಆದ ಬೆಣ್ಣೆ ವಿಜಯಕುಮಾರ್, ಪ್ರಧಾನ ಧರ್ಮಕರ್ತರಾದ ಸಿ.ಎಚ್.ಎಂ.ಗಂಗಾಧರಯ್ಯ, ಪ.ಪಂ.ಯ ಮುಖ್ಯಾಧಿಕಾರಿಯಾದ ನಸರುಲ್ಲಾ ಆದೋನಿ, ಮುಖಂಡರರಾದ ಪಿ.ಎಚ್.ದೊಡ್ಡರಾಮಣ್ಣ, ಸಾವಜಿ ರಾಜೇಂದ್ರಪ್ರಸಾದ್, ಸುಧಾಕರ್ ಪಾಟೀಲ್. ಮರಬದ ನಾಗರಾಜ್, ಹನುಮಂತಪ್ಪ ವಕೀಲರು, ಪ.ಪಂ ಸದಸ್ಯರಾದ ತೋಟದ ರಾಮಣ್ಣ, ವಿನಯ್ ಕುಮಾರ್, ಜಗದೀಶ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಮುಖಂಡರರುಗಳು ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!